LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

₹904 ಕೋಟಿ ಬ್ಯಾಂಕ್ ವಂಚನೆ: ಬಿಗ್ ಬಜಾರ್ ಸಂಸ್ಥಾಪಕರ ವಿರುದ್ಧ ಸಿಬಿಐ ಪ್ರಕರಣ

ಮುಂಬಯಿ, ನ. 6: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ₹904.32 ಕೋಟಿ ವಂಚಿಸಿದ ಆರೋಪದಡಿ ಬಿಗ್ ಬಜಾರ್ ಸಂಸ್ಥಾಪಕ ಹಾಗೂ ಫ್ಯೂಚರ್ ಗ್ರೂಪ್‌ನ ಪ್ರವರ್ತಕ ಕಿಶೋರ ಬಿಯಾನಿ, ಅವರ ಸಹೋದರ ರಾಕೇಶ ಬಿಯಾನಿ ಮತ್ತು ಫ್ಯೂಚರ್ ರಿಟೇಲ್ ಲಿಮಿಟೆಡ್ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿದೆ. ಶುಕ್ರವಾರ ಮುಂಬಯಿಯ ವಿವಿಧೆಡೆ ದಾಳಿ ನಡೆಸಿ ತನಿಖೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಂಬಯಿಯ ಸಂಕಷ್ಟದಲ್ಲಿರುವ ಆಸ್ತಿಗಳ ನಿರ್ವಹಣಾ ಶಾಖೆ ಸಲ್ಲಿಸಿದ ದೂರಿನ ಮೇರೆಗೆ ನವೆಂಬರ್ 4ರಂದು ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಸಾಲದ ಹಣ ದುರ್ಬಳಕೆ ಆರೋಪ: ಫ್ಯೂಚರ್ ರಿಟೇಲ್ ಕಂಪೆನಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ 9 ಬ್ಯಾಂಕುಗಳ ಒಕ್ಕೂಟದಿಂದ ಕಾರ್ಯನಿರತ ಬಂಡವಾಳ ಸಾಲ, ಅವಧಿ ಸಾಲ ಮತ್ತು ಸಾಲಪತ್ರ ಸೌಲಭ್ಯಗಳನ್ನು ಪಡೆದಿತ್ತು. ಆದರೆ ನಿಗದಿತ ಉದ್ದೇಶಗಳಿಗೆ ಹಣ ಬಳಸದೆ ಸಹವರ್ತಿ ಕಂಪೆನಿಗಳು ಹಾಗೂ ಸಂಬಂಧಿತ ಸಂಸ್ಥೆಗಳ ಮೂಲಕ ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ಸಿಬಿಐ ಆರೋಪಿಸಿದೆ.

ಈ ಹಣಕಾಸು ಅವ್ಯವಹಾರದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ₹904.32 ಕೋಟಿ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಫ್ಯೂಚರ್ ರಿಟೇಲ್ ಕಂಪೆನಿಯು ಬಿಗ್ ಬಜಾರ್, ಫುಡ್‌ಹಾಲ್ ಹಾಗೂ ಫ್ಯಾಷನ್ ಅಟ್ ಬಿಗ್ ಬಜಾರ್ ಸೇರಿದಂತೆ ದೇಶದ ಪ್ರಮುಖ ಚಿಲ್ಲರೆ ವ್ಯಾಪಾರ ಮಳಿಗೆಗಳನ್ನು ನಡೆಸುತ್ತಿತ್ತು. ದಿನಸಿ, ಗೃಹಬಳಕೆ ವಸ್ತುಗಳು, ಉಡುಪು ಹಾಗೂ ಇತರ ಗ್ರಾಹಕ ಉತ್ಪನ್ನಗಳ ಮಾರಾಟದಲ್ಲಿ ತೊಡಗಿಸಿಕೊಂಡಿತ್ತು.

ವಿವಿಧೆಡೆ ಸಿಬಿಐ ಶೋಧ: ಪ್ರಕರಣ ದಾಖಲಿಸಿದ ಬಳಿಕ ಸಿಬಿಐ ಅಧಿಕಾರಿಗಳು ಮುಂಬಯಿಯಲ್ಲಿ ಕಂಪೆನಿಯ ಪ್ರವರ್ತಕರು ಮತ್ತು ನಿರ್ದೇಶಕರಿಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ತನಿಖೆಗೆ ಅಗತ್ಯವಾದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸಾಲದ ಹಣವನ್ನು ಅಂತಿಮವಾಗಿ ಎಲ್ಲಿಗೆ ವರ್ಗಾಯಿಸಲಾಗಿದೆ, ಅವ್ಯವಹಾರದಲ್ಲಿ ಯಾರ ಪಾತ್ರವಿದೆ ಹಾಗೂ ಸರಕಾರಿ ಅಧಿಕಾರಿಗಳ ಸಹಭಾಗಿತ್ವ ಇದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST