LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಮಹಿಳೆಯ ಮಾರ್ಫ ಚಿತ್ರ ತೆಗೆದುಹಾಕಲು ಮೆಟಾಗೆ ಹೈಕೋರ್ಟ ಆದೇಶ

ಹೊಸದಿಲ್ಲಿ, ಸೆ. 25 : (ಸಮದರ್ಶಿ ಸುದ್ದಿ) - ಜಂತರ್ ಮಂತರ್ ಪ್ರತಿಭಟನೆ ವೇಳೆ ಮಹಿಳೆಯೊಬ್ಬರ ಭಾವಚಿತ್ರವನ್ನು ಕೃತಕ ಬುದ್ಧಿಮತ್ತೆ ಮತ್ತು ಫೇಸ್-ಸ್ವಾಪಿಂಗ್ ತಂತ್ರಜ್ಞಾನ ಬಳಸಿ ತಿರುಚಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರದೊಂದಿಗೆ ಜೋಡಿಸಿ ಹರಡಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ ಶುಕ್ರವಾರ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮುಖಂಡರಿಗೆ ನೋಟಿಸ್ ಜಾರಿ ಮಾಡಿದೆ.

ಸಿಜೆಪಿ ಮುಖಂಡರಾದ ಸೌರವ ದಾಸ್, ಅಭಿಜೀತ ದೀಪ್ಕೆ, ಅಶುತೋಷ ರಂಕಾ ಮತ್ತು ರತ್ನಾ ಸಿಂಗ್ ಅವರಿಗೆ ನ್ಯಾಯಮೂರ್ತಿ ಗಿರೀಶ ಕಥ್ಪಾಲಿಯಾ ನೋಟಿಸ್ ನೀಡಿದ್ದಾರೆ. ಮಹಿಳೆಗೆ ಸಂಬಂಧಿಸಿದ ಎಲ್ಲ ಆಕ್ಷೇಪಾರ್ಹ ಚಿತ್ರಗಳು ಮತ್ತು ಲಿಂಕ್‌ಗಳನ್ನು ತನ್ನ ವೇದಿಕೆಗಳಿಂದ 24 ಗಂಟೆಗಳೊಳಗೆ ತೆಗೆದುಹಾಕುವಂತೆ ಮೆಟಾಗೆ ನ್ಯಾಯಾಲಯ ನಿರ್ದೇಶಿಸಿದೆ.

ಮಹಿಳೆಗೆ ಪೊಲೀಸ್ ರಕ್ಷಣೆ ನೀಡುವಂತೆಯೂ ಆದೇಶಿಸಿರುವ ಹೈಕೋರ್ಟ, ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಗೆ ನೋಟಿಸ್ ನೀಡಿ ಎರಡು ವಾರಗಳಲ್ಲಿ ಪ್ರಕರಣದ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸೂಚಿಸಿದೆ.

ಪ್ರಕರಣದ ಗಂಭೀರತೆಯನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ಕಥ್ಪಾಲಿಯಾ, ಇದು ಕೇವಲ ಒಬ್ಬ ಮಹಿಳೆಗೆ ಸಂಬಂಧಿಸಿದ ವಿಷಯವಲ್ಲ; ದೇಶದ ಪ್ರಧಾನಮಂತ್ರಿಯವರನ್ನೂ ಒಳಗೊಂಡಿರುವ ವಿಷಯ ಎಂದು ವಿಚಾರಣೆ ವೇಳೆ ಅಭಿಪ್ರಾಯಪಟ್ಟರು.

ಜಂತರ್ ಮಂತರ್‌ನಲ್ಲಿ ಸಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ತನ್ನ ಅನುಮತಿಯಿಲ್ಲದೆ ವೈಯಕ್ತಿಕ ಚಿತ್ರವನ್ನು ಪಡೆದು, ಎಐ ತಂತ್ರಜ್ಞಾನ ಬಳಸಿ ತಿರುಚಿ ಪ್ರಧಾನಿ ಮೋದಿ ಅವರ ಚಿತ್ರದೊಂದಿಗೆ ಜೋಡಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಆ ಚಿತ್ರವನ್ನು ದೊಡ್ಡ ಬ್ಯಾನರ್ ಮತ್ತು ಪೋಸ್ಟರ್‌ಗಳಲ್ಲಿ ಪ್ರದರ್ಶಿಸಿ, ನಂತರ ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಹರಡಲಾಗಿದೆ ಎಂದೂ ದೂರಿದ್ದಾರೆ.

ಈ ಸಂಬಂಧ ದೆಹಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಜ್ಞಾತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮಹಿಳೆಯ ದೂರಿನಲ್ಲಿ ಸಿಜೆಪಿ ಮುಖಂಡರ ಹೆಸರು ಉಲ್ಲೇಖವಾಗಿದ್ದರೂ, ಎಫ್‌ಐಆರ್‌ನಲ್ಲಿ ದೀಪ್ಕೆ, ದಾಸ್ ಅಥವಾ ರಂಕಾ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿಲ್ಲ ಎಂದು ವರದಿಯಾಗಿದೆ. ಆರೋಪಗಳು ಇನ್ನೂ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST