LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಅಸ್ಸಾಂ, ಗುಜರಾತ್, ಬಿಹಾರಕ್ಕಿಲ್ಲದ ನಿಯಮ ಕರ್ನಾಟಕಕ್ಕೆ ಏಕೆ?: ಖಂಡ್ರೆ

ಬೆಂಗಳೂರು, ಸೆ. 25 : (ಸಮದರ್ಶಿ ಸುದ್ದಿ) - ಹದಿನೈದನೇ ಹಣಕಾಸು ಆಯೋಗದ ಶಿಫಾರಸಿನಂತೆ ಗ್ರಾಮ ಪಂಚಾಯತಿಗಳಿಗೆ 2025-26ನೇ ಸಾಲಿನಲ್ಲಿ ನೀಡಬೇಕಾದ ₹2,186.20 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡದೆ ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಆರೋಪಿಸಿದ್ದಾರೆ.

2024-25ರಲ್ಲಿ ಗ್ರಾಮ ಪಂಚಾಯತಿಗಳಿಗೆ ₹2,133.25 ಕೋಟಿ ಬಿಡುಗಡೆ ಮಾಡಲಾಗಿದ್ದು, ಇ-ಗ್ರಾಮ ಸ್ವರಾಜ್ ಪೋರ್ಟಲ್‌ನಲ್ಲಿ ₹1,907 ಕೋಟಿ ಸ್ವೀಕೃತಿ ದಾಖಲಾಗಿದೆ. ಸುಮಾರು ₹225 ಕೋಟಿ ವ್ಯತ್ಯಾಸವಿದ್ದರೂ ಹಣ ಗ್ರಾಮ ಪಂಚಾಯತಿಗಳಿಗೆ ತಲುಪಿದ್ದು, ತಾಂತ್ರಿಕ ಸಮಸ್ಯೆಯಿಂದ ಪೋರ್ಟಲ್‌ನಲ್ಲಿ ದಾಖಲಾಗಿಲ್ಲ. ಇಷ್ಟು ಸಣ್ಣ ಕಾರಣ ಮುಂದಿಟ್ಟು ₹2,186 ಕೋಟಿ ತಡೆಹಿಡಿಯುವುದು ಅನ್ಯಾಯ ಎಂದು ಹೇಳಿದರು.

ಉತ್ತರಾಖಂಡಕ್ಕೆ ₹470 ಕೋಟಿ ಬಿಡುಗಡೆ ಮಾಡಿದ್ದರೂ ಪೋರ್ಟಲ್‌ನಲ್ಲಿ ಸ್ವೀಕೃತಿ ಶೂನ್ಯವಾಗಿದೆ. ಗುಜರಾತ್‌ನಲ್ಲಿ ₹515 ಕೋಟಿ, ಅಸ್ಸಾಂನಲ್ಲಿ ₹867 ಕೋಟಿ ಹಾಗೂ ಬಿಹಾರದಲ್ಲಿ ₹2,334 ಕೋಟಿ ವ್ಯತ್ಯಾಸವಿದ್ದರೂ ಆ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಕರ್ನಾಟಕಕ್ಕೆ ಮಾತ್ರ ಬೇರೆ ನಿಯಮ ಅನುಸರಿಸಲಾಗುತ್ತಿದೆ ಎಂದು ಖಂಡ್ರೆ ಆರೋಪಿಸಿದರು.

ಈ ಸಂಬಂಧ ರಾಜ್ಯ ಸರ್ಕಾರ ಹಲವು ಬಾರಿ ಕೇಂದ್ರಕ್ಕೆ ಪತ್ರ ಬರೆದಿದ್ದು, ಮುಖ್ಯಮಂತ್ರಿ ಕೂಡ ಕೇಂದ್ರ ಹಣಕಾಸು ಸಚಿವರು ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿದ್ದಾರೆ. ತಾವೂ ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದರೂ ಹಣ ಬಿಡುಗಡೆಯಾಗಿಲ್ಲ ಎಂದು ತಿಳಿಸಿದರು.

ಕರ್ನಾಟಕಕ್ಕೆ ಅನುದಾನ ಬಿಡುಗಡೆ ಮಾಡದಿರುವ ಕೇಂದ್ರದ ಕ್ರಮವನ್ನು ಪ್ರಶ್ನಿಸಿ ಶೀಘ್ರದಲ್ಲೇ ಸುಪ್ರೀಂ ಕೋರ್ಟ ಮೊರೆ ಹೋಗಲಾಗುವುದು ಎಂದು ಖಂಡ್ರೆ ಹೇಳಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST