LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಭೂಸ್ವಾಧೀನದಲ್ಲಿ ಮಾನಸಿಕ ನಷ್ಟಕ್ಕೂ ಪರಿಹಾರ ಪಡೆಯುವ ಹಕ್ಕು: ಹೈಕೋರ್ಟ

ಬೆಂಗಳೂರು, ಆ. 29: ಅಭಿವೃದ್ಧಿ ಕಾರ್ಯಗಳಿಗಾಗಿ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ರೈತರು ಮೂಲ ಪರಿಹಾರದ ಜತೆಗೆ ಮಾನಸಿಕ ನಷ್ಟ ಅಥವಾ ಭಾವನಾತ್ಮಕ ನಷ್ಟಕ್ಕೂ ಹೆಚ್ಚುವರಿ ಪರಿಹಾರ ಪಡೆಯುವ ಕಾನೂನುಬದ್ಧ ಹಕ್ಕು ಹೊಂದಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡಿದ್ದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಅಮರಾವತಿ ಗ್ರಾಮದ ಮೃತ ಜಿ. ಸಿದ್ದರಾಮಯ್ಯ ಅವರ ಜಮೀನಿಗೆ ಸಂಬಂಧಿಸಿದಂತೆ ಅವರ ವಾರಸುದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಧಾರವಾಡ ಪೀಠದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.

ಭೂಸ್ವಾಧೀನಕ್ಕೆ ಸಂಬಂಧಿಸಿದ ಪರಿಹಾರದ ಆದೇಶದಲ್ಲಿ ಮಾನಸಿಕ ನಷ್ಟದ ಪರಿಹಾರ ಮತ್ತು ಬಡ್ಡಿಯ ಮೊತ್ತವನ್ನು ನಮೂದಿಸಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ನಿರಾಕರಿಸುವುದು ಸಂವಿಧಾನದ ಪರಿಚ್ಛೇದ 14 ಮತ್ತು 300ಎ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಭಾವನಾತ್ಮಕ ನಷ್ಟ, ಬಡ್ಡಿ ನೀಡಲು ನಿರ್ದೇಶನ

ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 23(2)ರ ಅಡಿಯಲ್ಲಿ ಮಾನಸಿಕ ಅಥವಾ ಭಾವನಾತ್ಮಕ ನಷ್ಟಕ್ಕೆ ಪರಿಹಾರ ಹಾಗೂ ಸೆಕ್ಷನ್ 28ರ ಅಡಿಯಲ್ಲಿ ಬಡ್ಡಿ ಪಡೆಯುವ ಕಾನೂನುಬದ್ಧ ಹಕ್ಕು ಭೂಮಾಲೀಕರಿಗೆ ಇದೆ ಎಂದು ನ್ಯಾಯಾಲಯ ತಿಳಿಸಿದೆ.

ಹೀಗಾಗಿ ಸಂತ್ರಸ್ತರಿಗೆ ಕಾನೂನುಬದ್ಧವಾಗಿ ದೊರೆಯಬೇಕಾದ ಭಾವನಾತ್ಮಕ ನಷ್ಟದ ಪರಿಹಾರ ಮತ್ತು ಬಡ್ಡಿಯನ್ನು ಲೆಕ್ಕಹಾಕಿ ಸೂಕ್ತ ಆದೇಶ ಹೊರಡಿಸುವಂತೆ ವಿಶೇಷ ಭೂಸ್ವಾಧೀನ ಅಧಿಕಾರಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ

ಜಿ. ಸಿದ್ದರಾಮಯ್ಯ ಅವರಿಗೆ ಸೇರಿದ ಜಮೀನನ್ನು 2009ರಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಪರಿಹಾರ ಪಡೆಯಲು ನಡೆಯುತ್ತಿದ್ದ ಕಾನೂನು ಹೋರಾಟದ ನಡುವೆಯೇ ಸಿದ್ದರಾಮಯ್ಯ ಮೃತಪಟ್ಟಿದ್ದರು. ಬಳಿಕ ಅವರ ವಾರಸುದಾರರು ನ್ಯಾಯಾಂಗ ಪ್ರಕ್ರಿಯೆಯನ್ನು ಮುಂದುವರಿಸಿದ್ದರು.

ವಿಶೇಷ ಭೂಸ್ವಾಧೀನ ಅಧಿಕಾರಿ ನಿಗದಿಪಡಿಸಿದ್ದ ಪರಿಹಾರವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಸಿದ್ದರಾಮಯ್ಯ ಅವರ ವಾರಸುದಾರರು, ಭೂಸ್ವಾಧೀನಕ್ಕೆ ಸಂಬಂಧಿಸಿದ ಪರಿಹಾರದ ಆದೇಶವನ್ನು ರದ್ದುಪಡಿಸುವಂತೆ ಮನವಿ ಮಾಡಿದ್ದರು.

ಮಾರುಕಟ್ಟೆ ಮೌಲ್ಯದ ಪರಿಹಾರದ ಜತೆಗೆ ಭಾವನಾತ್ಮಕ ನಷ್ಟಕ್ಕೆ ಪರಿಹಾರ ಹಾಗೂ ಜಮೀನು ಸ್ವಾಧೀನಪಡಿಸಿಕೊಂಡ ದಿನದಿಂದ ಬಡ್ಡಿಯನ್ನು ಪಾವತಿಸುವಂತೆ ಆದೇಶಿಸಬೇಕು ಎಂದು ಅವರು ನ್ಯಾಯಾಲಯವನ್ನು ಕೋರಿದ್ದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿಕ್ಕಮ್ ಪ್ರಕಾಶ ಬೆಳಗಾವಿ, ಭೂಷಣ ಬೊರಸೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ನೇಮಕಮಹಾರಾಷ್ಟ್ರದ ಸರ್ಕಾರಿ ಶಾಲೆಯಲ್ಲಿ ಅವಧಿ ಮೀರಿದ ಆಹಾರ ಪತ್ತೆ₹22,006 ಕೋಟಿ ಸಾಲಕ್ಕೆ ₹6 ಕೋಟಿ ಮರುಪಾವತಿ: ವಿದೇಶಿ ಹೂಡಿಕೆಗೆ ಸುಭಾಷ ಚಂದ್ರ ಸಜ್ಜುಭೂಸ್ವಾಧೀನದಲ್ಲಿ ಮಾನಸಿಕ ನಷ್ಟಕ್ಕೂ ಪರಿಹಾರ ಪಡೆಯುವ ಹಕ್ಕು: ಹೈಕೋರ್ಟನಾಗೇಂದ್ರ ಕಣ್ಣೀರು ಬಿಜೆಪಿಯನ್ನೇ ನಾಶ ಮಾಡಲಿದೆ: ಮಧು ಬಂಗಾರಪ್ಪಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಒತ್ತುವರಿ ತೆರವಿಗೆ ಕ್ರಮ: ಈಶ್ವರ ಖಂಡ್ರೆಬಿಜೆಪಿ ದೇಶದ ಅತಿ ದೊಡ್ಡ ಸಮಸ್ಯೆ: ಅಖಿಲೇಶ ಯಾದವನ್ಯಾಯಾಧೀಶರ ನೇಮಕಾತಿಯಲ್ಲಿ ಕಾರ್ಯಾಂಗದ ಹಸ್ತಕ್ಷೇಪ: ಎಸ್. ಮುರಳೀಧರ ಕಳವಳನೇಪಾಳ: ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಮುಖ್ಯಸ್ಥ ಲ್ಯಾಕ್ಸ ಗೋಪಿ ಸೆಟ್ಟಿ ನಾಪತ್ತೆ₹22,006 ಕೋಟಿ ಸಾಲಕ್ಕೆ ಕೇವಲ ₹6.5 ಕೋಟಿ ಪಾವತಿಗೆ ಬಿಜೆಪಿ ನಿಕಟ ಸುಭಾಷ ಚಂದ್ರಗೆ ಅನುಮತಿ