LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ನಿಕ್ಕಮ್ ಪ್ರಕಾಶ ಬೆಳಗಾವಿ, ಭೂಷಣ ಬೊರಸೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ನೇಮಕ

ಬೆಂಗಳೂರು, ಆಗಸ್ಟ್ 29, 2026: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಿರುವ ಕರ್ನಾಟಕ ಸರ್ಕಾರವು ಒಂದೇ ಬಾರಿಗೆ 15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶನಿವಾರ ಆದೇಶ ಹೊರಡಿಸಿದೆ.

ನಿಕ್ಕಮ್ ಪ್ರಕಾಶ ಅವರನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ಹಾಗೂ ಭೂಷಣ ಬೊರಸೆ ಅವರನ್ನು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿದ್ದ ಎನ್. ಶಶಿಕುಮಾರ ಅವರನ್ನು ಯಾವುದೇ ಹೊಸ ಸ್ಥಳವನ್ನು ತೋರಿಸದೆ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಭೂಷಣ ಬೊರಸೆ ಅವರನ್ನು ನೇಮಿಸಲಾಗಿದೆ.

ಇದೇ ವೇಳೆ ನಿಕ್ಕಮ್ ಪ್ರಕಾಶ ಅವರಿಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಜವಾಬ್ದಾರಿ ನೀಡಲಾಗಿದೆ. ಈ ಮೂಲಕ ಎರಡೂ ಪ್ರಮುಖ ನಗರಗಳ ಪೊಲೀಸ್ ಆಯುಕ್ತರ ಹುದ್ದೆಗಳಲ್ಲಿ ಬದಲಾವಣೆ ಮಾಡಲಾಗಿದೆ.

ರಾಜ್ಯದ ವಿವಿಧ ಪೊಲೀಸ್ ಘಟಕಗಳು ಮತ್ತು ಜಿಲ್ಲೆಗಳಲ್ಲಿಯೂ ಅಧಿಕಾರಿಗಳ ಹುದ್ದೆ ಬದಲಾವಣೆ ಮಾಡಲಾಗಿದೆ.

ಯಾರಿಗೆ ಎಲ್ಲಿಗೆ ವರ್ಗಾವಣೆ?

ಸರ್ಕಾರದ ವರ್ಗಾವಣೆ ಆದೇಶದಂತೆ ಅಧಿಕಾರಿಗಳ ಹೊಸ ಹುದ್ದೆಗಳು ಹೀಗಿವೆ:

  • ಪಿ. ಹರಿಶೇಖರನ್ (ಎಡಿಜಿಪಿ)ಡಿಸಿಆರ್‌ಇಗೆ ವರ್ಗಾವಣೆ.
  • ನಂಜುಂಡಸ್ವಾಮಿ (ಎಡಿಜಿಪಿ)ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ವರ್ಗಾವಣೆ.
  • ದಿವ್ಯಜ್ಯೋತಿ ರೇ (ಎಡಿಜಿಪಿ)ಅಪರಾಧ ಮತ್ತು ತಾಂತ್ರಿಕ ವಿಭಾಗಕ್ಕೆ ವರ್ಗಾವಣೆ.
  • ಅಮಿತ್ ಸಿಂಗ್ (ಐಜಿಪಿ)ಕೆಎಸ್‌ಆರ್‌ಪಿಗೆ ವರ್ಗಾವಣೆ.
  • ಆರ್. ಚೇತನ್ (ಐಜಿಪಿ)ಪಶ್ಚಿಮ ವಲಯ, ಮಂಗಳೂರಿಗೆ ವರ್ಗಾವಣೆ.
  • ನಿಕ್ಕಮ್ ಪ್ರಕಾಶ (ಐಜಿಪಿ)ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ನೇಮಕ.
  • ಭೂಷಣ ಬೊರಸೆ (ಡಿಐಜಿಪಿ)ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರಾಗಿ ನೇಮಕ.
  • ಎನ್. ಶಶಿಕುಮಾರ್ (ಡಿಐಜಿಪಿ)ಯಾವುದೇ ಹೊಸ ಸ್ಥಳವನ್ನು ತೋರಿಸದೆ ವರ್ಗಾವಣೆ.
  • ಶಿವಪ್ರಕಾಶ ದೇವರಾಜ್ (ಎಸ್‌ಪಿ)ಮಾದಕದ್ರವ್ಯ ನಿಗ್ರಹ ಪಡೆಗೆ ವರ್ಗಾವಣೆ.
  • ಪದ್ಮಿನಿ ಸಾಹು (ಎಸ್‌ಪಿ)ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ.
  • ಆರ್. ಶ್ರೀನಿವಾಸಗೌಡ (ಡಿಸಿಪಿ)ಬೆಂಗಳೂರು ಸಿಸಿಬಿ-1ಕ್ಕೆ ವರ್ಗಾವಣೆ.
  • ಡಾ. ಶಿವಕುಮಾರ್ (ಎಸ್‌ಪಿ)ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ.
  • ಕುಶಲ್ ಚೌಕ್ಸೆ (ಡಿಸಿಪಿ)ಬೆಂಗಳೂರು ಪೊಲೀಸ್ ಆಡಳಿತ ವಿಭಾಗಕ್ಕೆ ವರ್ಗಾವಣೆ.
  • ಸಾಹಿಲ್ ಬಾಗ್ಲಾ (ಎಸ್‌ಪಿ)ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ.
  • ರೋಹನ್ ಜಗದೀಶ್ (ಎಸ್‌ಪಿ)ಬೆಂಗಳೂರು ದಕ್ಷಿಣ ಜಿಲ್ಲೆಗೆ ವರ್ಗಾವಣೆ.
  • ಹೆಚ್.ಎನ್. ಮಿಥುನ್ (ಎಸ್‌ಪಿ)ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ.

ಪ್ರಮುಖ ಬದಲಾವಣೆ

ಈ ವರ್ಗಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ನಗರ ಪೊಲೀಸ್ ಆಯುಕ್ತರ ಹುದ್ದೆಗಳ ಬದಲಾವಣೆ ವಿಶೇಷ ಗಮನ ಸೆಳೆದಿದೆ. ಹುಬ್ಬಳ್ಳಿ-ಧಾರವಾಡದ ಪೊಲೀಸ್ ಆಯುಕ್ತರಾಗಿದ್ದ ಎನ್. ಶಶಿಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಭೂಷಣ್ ಬೊರಸೆ ಅವರನ್ನು ನೇಮಿಸಲಾಗಿದೆ.

ಇತ್ತ ನಿಕ್ಕಮ್ ಪ್ರಕಾಶ ಅವರು ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ವಿವಿಧ ಜಿಲ್ಲೆಗಳು ಮತ್ತು ಪೊಲೀಸ್ ಘಟಕಗಳಲ್ಲಿನ ಈ ಹುದ್ದೆ ಬದಲಾವಣೆಗಳು ರಾಜ್ಯ ಪೊಲೀಸ್ ಇಲಾಖೆಯ ಆಡಳಿತಾತ್ಮಕ ಕಾರ್ಯಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ನಿರೀಕ್ಷೆಯಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿಕ್ಕಮ್ ಪ್ರಕಾಶ ಬೆಳಗಾವಿ, ಭೂಷಣ ಬೊರಸೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ನೇಮಕಮಹಾರಾಷ್ಟ್ರದ ಸರ್ಕಾರಿ ಶಾಲೆಯಲ್ಲಿ ಅವಧಿ ಮೀರಿದ ಆಹಾರ ಪತ್ತೆ₹22,006 ಕೋಟಿ ಸಾಲಕ್ಕೆ ₹6 ಕೋಟಿ ಮರುಪಾವತಿ: ವಿದೇಶಿ ಹೂಡಿಕೆಗೆ ಸುಭಾಷ ಚಂದ್ರ ಸಜ್ಜುಭೂಸ್ವಾಧೀನದಲ್ಲಿ ಮಾನಸಿಕ ನಷ್ಟಕ್ಕೂ ಪರಿಹಾರ ಪಡೆಯುವ ಹಕ್ಕು: ಹೈಕೋರ್ಟನಾಗೇಂದ್ರ ಕಣ್ಣೀರು ಬಿಜೆಪಿಯನ್ನೇ ನಾಶ ಮಾಡಲಿದೆ: ಮಧು ಬಂಗಾರಪ್ಪಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಒತ್ತುವರಿ ತೆರವಿಗೆ ಕ್ರಮ: ಈಶ್ವರ ಖಂಡ್ರೆಬಿಜೆಪಿ ದೇಶದ ಅತಿ ದೊಡ್ಡ ಸಮಸ್ಯೆ: ಅಖಿಲೇಶ ಯಾದವನ್ಯಾಯಾಧೀಶರ ನೇಮಕಾತಿಯಲ್ಲಿ ಕಾರ್ಯಾಂಗದ ಹಸ್ತಕ್ಷೇಪ: ಎಸ್. ಮುರಳೀಧರ ಕಳವಳನೇಪಾಳ: ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಮುಖ್ಯಸ್ಥ ಲ್ಯಾಕ್ಸ ಗೋಪಿ ಸೆಟ್ಟಿ ನಾಪತ್ತೆ₹22,006 ಕೋಟಿ ಸಾಲಕ್ಕೆ ಕೇವಲ ₹6.5 ಕೋಟಿ ಪಾವತಿಗೆ ಬಿಜೆಪಿ ನಿಕಟ ಸುಭಾಷ ಚಂದ್ರಗೆ ಅನುಮತಿ