ಬೆಂಗಳೂರು, ಅ. 30: ಕರ್ನಾಟಕದ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರವು 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ 71 ಸಾಧಕರನ್ನು ಆಯ್ಕೆ ಮಾಡಿ ಶುಕ್ರವಾರ ಅಧಿಕೃತ ಪಟ್ಟಿ ಪ್ರಕಟಿಸಿದೆ. ಜಾನಪದ, ಸಾಹಿತ್ಯ, ಸಂಗೀತ, ರಂಗಭೂಮಿ, ಸಮಾಜಸೇವೆ, ವೈದ್ಯಕೀಯ, ಶಿಕ್ಷಣ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಗಣ್ಯರಿಗೆ ಈ ಗೌರವ ಲಭಿಸಿದೆ.
ಕರ್ನಾಟಕ ರಾಜ್ಯ ರಚನೆಯಾಗಿ 71 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 71 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ ₹5 ಲಕ್ಷ ನಗದು ಒಳಗೊಂಡಿದೆ. ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಬೆಳಗಾವಿ ಜಿಲ್ಲೆಯ ಮೂವರಿಗೆ ಪ್ರಶಸ್ತಿ
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಬೆಳಗಾವಿ ಜಿಲ್ಲೆಯ ಮೂವರು ಸಾಧಕರು ಆಯ್ಕೆಯಾಗಿದ್ದಾರೆ. ಶಿಲ್ಪಕಲೆ ಕ್ಷೇತ್ರದಲ್ಲಿ ಕಾಡಪ್ಪ, ಸಂಕೀರ್ಣ ಕ್ಷೇತ್ರದಲ್ಲಿ ಡಿ.ಎಸ್. ಚೌಗಲೆ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಶಿಲ್ಪಕಲೆ, ವೈದ್ಯಕೀಯ ಹಾಗೂ ವಿವಿಧ ಕ್ಷೇತ್ರಗಳ ಸಾಧನೆಗಳನ್ನು ಗುರುತಿಸಿ ಜಿಲ್ಲೆಯ ಮೂವರಿಗೆ ರಾಜ್ಯಮಟ್ಟದ ಗೌರವ ನೀಡಿರುವುದು ವಿಶೇಷವಾಗಿದೆ.
71 ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ
ಜಾನಪದ: ದಾವಲಸಾಬ ಅತ್ತಾರ (ಕೊಪ್ಪಳ), ಗೌರಮ್ಮ (ಚಾಮರಾಜನಗರ), ಪಾಂಡಪ್ಪ ದೇವಲಪ್ಪ ಲಮಾಣಿ (ಗದಗ), ಎ.ಆರ್. ಸತ್ಯನಾರಾಯಣ (ಬೆಂಗಳೂರು ದಕ್ಷಿಣ), ಈರಣ್ಣ ರುದ್ರಾಕ್ಷಿ (ರಾಯಚೂರು), ಎಂ. ಶಿವಲಿಂಗಪ್ಪ (ಕೊಪ್ಪಳ), ಸುರೇಶ ರಾಮಚಂದ್ರ ಜೋಶಿ (ವಿಜಯಪುರ).
ಸಂಗೀತ: ಡಾ. ಸಿ.ಎ. ಶ್ರೀಧರ (ಮೈಸೂರು), ಡಾ. ಎ. ನಾರಾಯಣಸ್ವಾಮಿ (ಹಾಸನ), ಬಿ. ಮುರುಳಿ (ಬೆಂಗಳೂರು ಗ್ರಾಮಾಂತರ).
ನೃತ್ಯ: ಡಾ. ಸತ್ಯನಾರಾಯಣ ರಾಜು (ಬೆಂಗಳೂರು ನಗರ).
ಚಲನಚಿತ್ರ ಮತ್ತು ಕಿರುತೆರೆ: ಕೆ. ವೆಂಕಟರಮಣ (ಬಾಬಜೀ) (ಧಾರವಾಡ), ಅಶೋಕ (ಬೆಂಗಳೂರು ಗ್ರಾಮಾಂತರ), ಕೆ.ಎಸ್. ರವೀಂದ್ರನಾಥ (ಬೆಂಗಳೂರು ನಗರ).
ಯಕ್ಷಗಾನ: ಗೋಪಾಲ ಗಾಣಿಗ (ಉಡುಪಿ).
ಬಯಲಾಟ: ಹುಲಿಗೆಮ್ಮ (ಬಳ್ಳಾರಿ).
ರಂಗಭೂಮಿ: ಡಿ. ಕೆಂಪಣ್ಣ (ಬೆಂಗಳೂರು ಗ್ರಾಮಾಂತರ), ಕೆ. ಜಯಲಕ್ಷ್ಮಿ ಪಾಟೀಲ (ಧಾರವಾಡ), ಜಿ.ಡಿ. ತಿಮ್ಮಯ್ಯ (ಚಿತ್ರದುರ್ಗ), ಕೆ.ಆರ್. ಸುಮತಿ (ಮೈಸೂರು), ಎಚ್.ವಿ. ಪುಟ್ಟವೀರಪ್ಪ (ಬೆಂಗಳೂರು ದಕ್ಷಿಣ), ಹೊನ್ನ ನಾಯಕ (ಮೈಸೂರು).
ಶಿಲ್ಪಕಲೆ: ಜಿ.ವಿ. ಹಂಸಾನಂದ ಆಚಾರ್ಯ (ವಿಜಯನಗರ), ಕಾಡಪ್ಪ (ಬೆಳಗಾವಿ).
ಚಿತ್ರಕಲೆ: ಸಿ.ಬಿ. ಸೋಮಶೆಟ್ಟಿ (ಬೀದರ).
ಕರಕುಶಲ: ಶಾಂತಾಬಾಯಿ ಮೋಹನ ಕಾಂಬಳೆ (ಬೀದರ).
ಕೃಷಿ: ಎಚ್.ಕೆ. ಶ್ರೀಕಂಠು (ಬೆಂಗಳೂರು ದಕ್ಷಿಣ), ಬಿ.ಎ. ಚನ್ನಪ್ಪಗೌಡ (ಬೆಂಗಳೂರು ನಗರ).
ಪರಿಸರ: ಡಾ. ಸ್ವಾಮಿ ಆನಂದ ಆರ್. (ಮೈಸೂರು).
ವಿಜ್ಞಾನ ಮತ್ತು ತಂತ್ರಜ್ಞಾನ: ಪ್ರೊ. ರಾಜಾಸಾಬ ಎ.ಎಚ್. (ಕಲಬುರಗಿ), ಡಾ. ರಾಜಶೇಖರ ಮೂರ್ತಿ (ಕೆನಡಾ).
ಮಾಧ್ಯಮ: ಉಮಾಪತಿ (ಚಿತ್ರದುರ್ಗ), ಎಂ.ಪಿ. ಸುಶೀಲ (ಬೆಂಗಳೂರು ನಗರ).
ಮಾಧ್ಯಮ ಮತ್ತು ಛಾಯಾಚಿತ್ರ: ವಿಶ್ವನಾಥ ಸುವರ್ಣ (ದಕ್ಷಿಣ ಕನ್ನಡ).
ಸಂಕೀರ್ಣ: ರುಕ್ಮಿಣಿಬಾಯಿ ನಾಗಪ್ಪ ವಾಷ್ಠರ್ (ಬಾಗಲಕೋಟೆ), ಡಿ.ಎಸ್. ಚೌಗಲೆ (ಬೆಳಗಾವಿ), ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ (ಬೆಂಗಳೂರು ನಗರ), ಬಿ.ಪಿ. ಆರಾಧ್ಯ (ಬೆಂಗಳೂರು ದಕ್ಷಿಣ), ರವಿ ಪ್ರವೀಣ ನೊರೋನಾ (ಬೆಂಗಳೂರು ನಗರ), ಎಂ.ಆರ್. ಜಯಶಂಕರ (ಚಿಕ್ಕಮಗಳೂರು), ಪ್ರಸಾದ ಬಿದ್ದಪ್ಪ (ಕೊಡಗು), ವಾಸಪ್ಪ ಯಲ್ಲಪ್ಪ ಕುಸಗೂರ (ಹಾವೇರಿ).
ಸಮಾಜಸೇವೆ: ಜಗದ್ಗುರು ಡಾ. ಅನ್ನದಾನೀಶ್ವರ ಮಹಾಶಿವಯೋಗಿ (ಗದಗ), ಬಸವರಾಜು (ಮಂಡ್ಯ), ಕಾಗೋಡು ತಿಮ್ಮಪ್ಪ (ಶಿವಮೊಗ್ಗ), ಡಾ. ಎಸ್.ಎಂ. ಅಲಿ (ದಾವಣಗೆರೆ), ಡಾ. ಜಿ.ಎಸ್. ಚಂದ್ರಶೇಖರ (ಉತ್ತರ ಕನ್ನಡ), ಡಾ. ಶಿವಾನಂದ ಮಹಾಸ್ವಾಮಿ (ಕಲಬುರಗಿ), ಕೃಷ್ಣೇಗೌಡ (ಚಿಕ್ಕಬಳ್ಳಾಪುರ), ಎ.ಸಿ. ಭಂಡಾರಿ (ದಕ್ಷಿಣ ಕನ್ನಡ), ಗುರಮ್ಮ ಹಂಪಯ್ಯ ಸಂಕಿನಮಠ (ಬಾಗಲಕೋಟೆ).
ವೈದ್ಯಕೀಯ: ಡಾ. ವಿಜಯೇಂದ್ರ ಹೊನ್ನೂರಪ್ಪ (ಬೆಂಗಳೂರು ನಗರ), ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ (ಬೆಳಗಾವಿ).
ಆಡಳಿತ: ತೆರೆಸಾ ಭಟ್ಟಾಚಾರ್ಯ (ಬೆಂಗಳೂರು ನಗರ), ಡಾ. ಕೆ.ಎಸ್. ಸೋಮಶೇಖರ (ಹೊರನಾಡು).
ಎಂಜಿನಿಯರಿಂಗ್: ಡಾ. ಕೆ.ಎನ್. ವೆಂಕಟ ಕೃಷ್ಣಾರಾವ್ (ಚಿಕ್ಕಬಳ್ಳಾಪುರ).
ಸಾಹಿತ್ಯ: ಡಾ. ಇಂದಿರಾ ಹೆಗಡೆ (ದಕ್ಷಿಣ ಕನ್ನಡ), ವೀರಹನುಮಾನ್ (ರಾಯಚೂರು), ಪ್ರೊ. ನಾರಾಯಣಘಟ್ಟ (ತುಮಕೂರು), ಸಿ. ಮಹೇಶ್ವರಪ್ಪ ಚಟ್ನಳ್ಳಿ (ಚಿಕ್ಕಮಗಳೂರು), ಡಾ. ಕರೀಗೌಡ ಬೀಚನಹಳ್ಳಿ (ತುಮಕೂರು), ಡಾ. ಸಿದ್ಧರಾಮ ಹೊನ್ಕಲ್ (ಯಾದಗಿರಿ).
ಶಿಕ್ಷಣ: ಫಾದರ್ ಜೊಸೆಫ್ (ಬೆಂಗಳೂರು ನಗರ), ಶಾಂತಪ್ಪ ದಶವಂತ (ವಿಜಯಪುರ), ಸಂಗೀತಾ ಎನ್. ಕಟ್ಟಿಮನಿ (ಕಲಬುರಗಿ), ಡಾ. ಎನ್.ಎಸ್. ರಂಗರಾಜು (ಮೈಸೂರು).
ನ್ಯಾಯಾಂಗ: ಬಿ.ವಿ. ಆಚಾರ್ಯ (ಉಡುಪಿ).
ಹೊರನಾಡು ಮತ್ತು ಹೊರದೇಶ: ರಮೇಶ ಗೌಡ (ಅಕ್ಕ ಅಮೆರಿಕದ ಮಾಜಿ ಅಧ್ಯಕ್ಷರು).
ಕ್ರೀಡೆ: ಜಿಮ್ ರವಿ (ಕೋಲಾರ), ಡಾ. ಎ.ಬಿ. ಸುಬ್ಬಯ್ಯ (ಕೊಡಗು), ಎಂ. ಗಿರೀಶ (ಬೆಂಗಳೂರು ನಗರ).