LIVE TV LocalCrimeNationalInternationalPoliticsFinancialEducationTechnologyEntertainmentSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಅತ್ಯಾಚಾರಕ್ಕೆ ಪ್ರತೀಕಾರವಾಗಿ ಇಬ್ಬರ ಅಪಹರಣ: ₹10 ಲಕ್ಷ ಬೇಡಿಕೆ, 10 ಮಂದಿ ಬಂಧನ

ಬೆಂಗಳೂರು, ಅ. 29: ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಯುವಕರನ್ನು ಅಪಹರಿಸಿ ₹10 ಲಕ್ಷಕ್ಕೆ ಬೇಡಿಕೆಯಿಟ್ಟ ಪ್ರಕರಣವನ್ನು ಮಾರತಹಳ್ಳಿ ಠಾಣೆ ಪೊಲೀಸರು ಭೇದಿಸಿದ್ದಾರೆ. ಅಪಹರಣ ಪ್ರಕರಣದಲ್ಲಿ ಸಂತ್ರಸ್ತ ಯುವತಿ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದ್ದು, ಅತ್ಯಾಚಾರ ಆರೋಪದಡಿ ಅಪಹರಣದಿಂದ ರಕ್ಷಿಸಲ್ಪಟ್ಟ ಇಬ್ಬರು ಯುವಕರನ್ನೂ ಬಂಧಿಸಲಾಗಿದೆ.

ಅಕ್ಟೋಬರ್ 28ರಂದು ತನ್ನ ಮಗ ಬುರ್ಸು ಮಹೇಂದ್ರ (23) ಹಾಗೂ ಆತನ ಸ್ನೇಹಿತ ಯೆರ್ರಿಬೋನಿ ತರುಣ (23) ಅವರನ್ನು ಅಪರಿಚಿತರು ಅಪಹರಿಸಿ ₹10 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಮಹೇಂದ್ರನ ತಂದೆ ಮಾರತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಕೇವಲ 6 ಗಂಟೆಗಳಲ್ಲಿ ಅಪಹರಣಕಾರರನ್ನು ಪತ್ತೆಹಚ್ಚಿದ್ದಾರೆ.

ಪೊಲೀಸರ ಪ್ರಕಾರ, ಆಂಧ್ರಪ್ರದೇಶ ಮೂಲದ ಮಹೇಂದ್ರ, ತರುಣ ಹಾಗೂ ಮಂಜುನಾಥ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದಾರೆ. ಕೆಲದಿನಗಳ ಹಿಂದೆ ಮಂಜುನಾಥ ಊರಿಗೆ ತೆರಳಿದ್ದ ಸಂದರ್ಭದಲ್ಲಿ ಆತನ ಸ್ನೇಹಿತ ರಾಜಕುಮಾರ ತನ್ನ ಪ್ರೇಯಸಿಯೊಂದಿಗೆ ಮನೆಗೆ ಬಂದಿದ್ದರು.

ಆ ಸಂದರ್ಭದಲ್ಲಿ ಮದ್ಯದ ಅಮಲಿನಲ್ಲಿದ್ದ ಮಹೇಂದ್ರ, ರಾಜಕುಮಾರ ಅವರನ್ನು ಪ್ರತ್ಯೇಕವಾಗಿ ಕೂಡಿ ಹಾಕಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯಿಂದ ಆಕ್ರೋಶಗೊಂಡ ಯುವತಿ ತನ್ನ ಪ್ರಿಯಕರ ರಾಜಕುಮಾರ, ಸ್ನೇಹಿತ ಮಂಜುನಾಥ ಹಾಗೂ ಇತರರೊಂದಿಗೆ ಸೇರಿ ಮಹೇಂದ್ರ ಮತ್ತು ತರುಣ ಅವರನ್ನು ಅಪಹರಿಸಲು ಸಂಚು ರೂಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಅದರಂತೆ ಇಬ್ಬರನ್ನು ಅಪಹರಿಸಿ ಕುಟುಂಬದವರಿಗೆ ಕರೆ ಮಾಡಿ ₹10 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಹಣ ಪಡೆದ ನಂತರವೂ ಅಪಹೃತರನ್ನು ಬಿಡುಗಡೆ ಮಾಡದೆ ಕೊಲೆ ಮಾಡಲು ಆರೋಪಿಗಳು ಯೋಜಿಸಿದ್ದರು ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಆದರೆ, ದೂರು ದಾಖಲಾದ 6 ಗಂಟೆಗಳಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ರಕ್ಷಿಸಿ, ಯುವತಿ ಸೇರಿದಂತೆ 10 ಮಂದಿ ಅಪಹರಣ ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅತ್ಯಾಚಾರ ಆರೋಪವೂ ಬೆಳಕಿಗೆ ಬಂದಿದ್ದು, ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಿ ಮಹೇಂದ್ರ ಮತ್ತು ತರುಣ್ ಅವರನ್ನು ಬಂಧಿಸಲಾಗಿದೆ. ಅತ್ಯಾಚಾರ ಮತ್ತು ಅಪಹರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 12 ಮಂದಿಯನ್ನು ಬಂಧಿಸಲಾಗಿದ್ದು, ಎರಡೂ ಪ್ರಕರಣಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಉತ್ತರ ಕರ್ನಾಟಕದ ಹಿರಿಯ ಚೇತನ, ಮುತ್ಸದ್ದಿ ಶಿವಾನಂದ ಕೌಜಲಗಿ ಇನ್ನಿಲ್ಲಸ್ಕೂಟರ್‌ನಿಂದ ಬಿದ್ದ ವೃದ್ಧನ ತಲೆ ಮೇಲೆ ಹರಿದ ಬಸ್: ಸ್ಥಳದಲ್ಲೇ ಸಾವುಅತ್ಯಾಚಾರಕ್ಕೆ ಪ್ರತೀಕಾರವಾಗಿ ಇಬ್ಬರ ಅಪಹರಣ: ₹10 ಲಕ್ಷ ಬೇಡಿಕೆ, 10 ಮಂದಿ ಬಂಧನಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕಟ್ಟುಕಥೆ: ಸಿಸಿಬಿ ತನಿಖೆಯಲ್ಲಿ ಬಹಿರಂಗಬರಪೀಡಿತ ರೈತರಿಗೆ ₹2,500 ಪರಿಹಾರ362 ಕೆಎಎಸ್ ಅಧಿಕಾರಿಗಳ ನೇಮಕಾತಿಗೆ ಸಂಕಷ್ಟ: ರಾಜ್ಯ ಸರ್ಕಾರದ ಕಾಯ್ದೆ ರದ್ದುಗೊಳಿಸಿದ ಸುಪ್ರೀಂ ಕೋರ್ಟನಂದಿನಿ ಹಾಲಿನ ದರ ₹8 ಹೆಚ್ಚಳ : ₹7 ರೈತರಿಗೆ, ₹1 ಕೆಎಂಎಫ್‌ಗೆಕೆಪಿಎಸ್‌ಸಿ ಪರೀಕ್ಷಾ ವ್ಯವಸ್ಥೆ: ಆನ್‌ಲೈನ್ ಮೂಲಕ ಪ್ರಶ್ನೆಪತ್ರಿಕೆ ರವಾನೆಕಿತ್ತೂರು ಬಳಿ ಭೀಕರ ರಸ್ತೆ ಅಪಘಾತ: ಪತಿ, ಪತ್ನಿ ಹಾಗೂ ಅಳಿಯನ ದುರ್ಮರಣಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶೂನ್ಯ: ಪ್ರಧಾನಿ ಮೋದಿ ವ್ಯಂಗ್ಯ