LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ಕರ್ನಾಟಕ ಪರ ನಿರ್ಣಯ: ಘಟಪ್ರಭಾದಲ್ಲಿ ಸಂಭ್ರಮ

ಘಟಪ್ರಭಾ, ಅ. 1 : (ಸಮದರ್ಶಿ ಸುದ್ದಿ) - ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಕರ್ನಾಟಕ ಪರ ನಿಲುವಿಗೆ ಪೂರಕವಾಗಿ ಗೊತ್ತುವಳಿ ಅಂಗೀಕರಿಸಿರುವ ಹಿನ್ನೆಲೆಯಲ್ಲಿ ಘಟಪ್ರಭಾ ನಗರದ ಮೃತ್ಯುಂಜಯ ವೃತ್ತದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಗೋಕಾಕ ಹಾಗೂ ಮೂಡಲಗಿ ತಾಲೂಕು ಘಟಕಗಳ ಪದಾಧಿಕಾರಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಕನ್ನಡಪರ ಹೋರಾಟಕ್ಕೆ ದೊರೆತ ಜಯ ಎಂದು ಬಣ್ಣಿಸಿದ ಕಾರ್ಯಕರ್ತರು, ಕರ್ನಾಟಕ ಪರ ಘೋಷಣೆಗಳನ್ನು ಕೂಗಿ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆಂಪಣ್ಣ ಚೌಕಶಿ, ಉಸ್ತುವಾರಿ ಅಧ್ಯಕ್ಷ ಪ್ರಶಾಂತ ಅರಳಿಕಟ್ಟಿ, ಉಪಾಧ್ಯಕ್ಷ ಅಪ್ಪಾಸಾಬ ಮುಲ್ಲಾ, ಕಾರ್ಯಾಧ್ಯಕ್ಷ ಶೆಟ್ಟೆಪ್ಪ ಗಾಡಿವಡ್ಡರ, ಪ್ರಧಾನ ಕಾರ್ಯದರ್ಶಿ ರೆಹಮಾನ್ ಮೊಕಾಶಿ, ರವಿ ನಾವಿ, ತಮ್ಮಣ್ಣ ಅರಭಾವಿ, ರಾಜು ವಗ್ಗನವರ, ಸಿದ್ದಪ್ಪ ತೆಳಗೇರಿ, ಮಲ್ಲಿಕಾರ್ಜುನ ಶಿಂದೆ, ರಾಘವೇಂದ್ರ ಕುಡ್ಡೆಮ್ಮೆ, ಸುರೇಶ ಚಿಗಡೊಳಿ, ಯಲ್ಲಪ್ಪ ಅಟ್ಟಿಮಿಟ್ಟಿ, ಶಶಿಧರ ಚೌಕಶಿ, ಪ್ರಕಾಶ ಬಿರನಾಳಿ, ಸುನೀತಾ ಕೊಣ್ಣೂರ, ಅನೀತಾ ಬಡಕುಂದ್ರಿ, ಕಾಡಪ್ಪ ಕರೋಶಿ, ಮಣಿಕಂಠ ನಾಯಿಕ, ಅಲ್ಲಪ್ಪ ಕೌಜಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST