LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
State News

ಸಕ್ಕರೆ ಎಂಎಸ್‌ಪಿ ಘೋಷಣೆಗೆ ನ. 26ರವರೆಗೆ ಗಡುವು: ರೈತರ ಪಾದಯಾತ್ರೆ ಅಂತ್ಯ

ಧಾರವಾಡ, ಅ. 19 (ಸಮದರ್ಶಿ ಸುದ್ದಿ): ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರಕ್ಕೆ ನವೆಂಬರ್ 26ರವರೆಗೆ ಗಡುವು ನೀಡಿರುವ ಕಬ್ಬು ಬೆಳೆಗಾರರು, ಹಲವು ದಿನಗಳಿಂದ ನಡೆಸುತ್ತಿದ್ದ ಪಾದಯಾತ್ರೆ ಹಾಗೂ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ನಿಗದಿತ ಅವಧಿಯೊಳಗೆ ಬೇಡಿಕೆ ಈಡೇರದಿದ್ದರೆ ನವೆಂಬರ್ 27ರಿಂದ ಮತ್ತೆ ಹೋರಾಟ ಆರಂಭಿಸುವುದಾಗಿ ಎಚ್ಚರಿಸಿದ್ದಾರೆ.

ಸೋಮವಾರ ಧಾರವಾಡ ಸಮೀಪದ ಯರಿಕೊಪ್ಪ ಕ್ರಾಸ್‌ನಲ್ಲಿ ನಡೆದ ರೈತರ ಸಭೆಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಈ ನಿರ್ಧಾರ ಪ್ರಕಟಿಸಿದರು.

ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದಾಗಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಕಾಲಾವಕಾಶ ನೀಡಲು ನಿರ್ಧರಿಸಲಾಗಿದೆ. ಆದರೆ, ನವೆಂಬರ್ 26ರೊಳಗೆ ಸಕ್ಕರೆಯ ಎಂಎಸ್‌ಪಿ ಪರಿಷ್ಕರಣೆ ಕುರಿತು ಸ್ಪಷ್ಟ ನಿರ್ಧಾರ ಪ್ರಕಟವಾಗದಿದ್ದರೆ ಮರುದಿನದಿಂದಲೇ ಹೋರಾಟ ಪುನರಾರಂಭಿಸಲಾಗುವುದು ಎಂದು ತಿಳಿಸಿದರು.

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಕುರಿತು ಭಾನುವಾರ ರಾತ್ರಿ ಹುಬ್ಬಳ್ಳಿಯ ಸರ್ಕಾರಿ ಅತಿಥಿಗೃಹದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಸಭೆ ನಡೆದಿತ್ತು. ಸೋಮವಾರ ಮುಂಜಾನೆ 3 ಗಂಟೆಯವರೆಗೆ ನಡೆದ ಸಭೆಯಲ್ಲಿ ರೈತ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿತ್ತು.

ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಹೆಚ್ಚಳ, ಕರ್ನಾಟಕದಲ್ಲಿ ಉತ್ಪಾದನೆಯಾಗುವ ಎಥೆನಾಲ್ ಸಂಪೂರ್ಣ ಖರೀದಿ ಹಾಗೂ ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ಸಕ್ಕರೆಗೆ ಪ್ರತ್ಯೇಕ ಬೆಲೆ ನಿಗದಿಪಡಿಸುವಂತೆ ರೈತ ಮುಖಂಡರು ಒತ್ತಾಯಿಸಿದ್ದರು.

ಈ ಬೇಡಿಕೆಗಳನ್ನು ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿಯ ಮುಂದೆ ಮಂಡಿಸಿ, ಸಕಾರಾತ್ಮಕವಾಗಿ ಪರಿಶೀಲಿಸುವುದಾಗಿ ಪ್ರಲ್ಹಾದ ಜೋಶಿ ಭರವಸೆ ನೀಡಿದ್ದರು. ಬಳಿಕ ರೈತ ಮುಖಂಡರು ಸಂಘಟನೆಗಳೊಂದಿಗೆ ಚರ್ಚಿಸಿ ಹೋರಾಟದ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರು.

ಇದರಂತೆ ಯರಿಕೊಪ್ಪ ಕ್ರಾಸ್‌ನಲ್ಲಿ ಸಭೆ ನಡೆಸಿದ ರೈತರು, ಸರ್ಕಾರಕ್ಕೆ ನವೆಂಬರ್ 26ರವರೆಗೆ ಗಡುವು ನೀಡಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಲು ನಿರ್ಧರಿಸಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಜೆಪಿ ನಾಯಕರ ನ್ಯಾಯಾಂಗ ಬಂಧನ ಮತ್ತೆರಡು ದಿನ ವಿಸ್ತರಣೆಸಕ್ಕರೆ ಎಂಎಸ್‌ಪಿ ಘೋಷಣೆಗೆ ನ. 26ರವರೆಗೆ ಗಡುವು: ರೈತರ ಪಾದಯಾತ್ರೆ ಅಂತ್ಯಶಾಂತಿಯುತ ಪ್ರತಿಭಟನೆ ಪ್ರತಿಯೊಬ್ಬರ ಮೂಲಭೂತ ಹಕ್ಕುಚುನಾವಣೆಗೆ ಸ್ಪರ್ಧಿಸುವ ಇಚ್ಛೆ: ಕೊಲೆ ಅಪರಾಧಿಯ ಶಿಕ್ಷೆಗೆ ಹೈಕೋರ್ಟ ತಡೆಎಸ್‌ಐಆರ್‌ ವಿರುದ್ಧ ಅ. 23ರಂದು ರಾಜ್ಯಾದ್ಯಂತ ರೈತ, ದಲಿತ ಸಂಘಟನೆಗಳ ಪ್ರತಿಭಟನೆವಿವಾದದ ನಡುವೆಯೇ ಸಿಕ್ಕಿಂ ರಾಜ್ಯಪಾಲರಾಗಿ ದುಷ್ಯಂತ ಕುಮಾರ ಗೌತಮ ಪ್ರಮಾಣ ವಚನಲಾರೆನ್ಸ ಬಿಷ್ಣೋಯ ಗ್ಯಾಂಗಸ್ಟರ್‌ಗೆ ‘ಸಾಹೇಬ’ ಗೌರವ : ದೆಹಲಿ ಪೊಲೀಸರ ವಿರುದ್ಧ ದೀಪ್ಕೆ ಆಕ್ರೋಶಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಮೂವರು ಶಂಕಿತರು ವಶಕ್ಕೆಪೊಲೀಸ್ ನೋಟಿಸ್ ಪ್ರಶ್ನಿಸಿ ದೆಹಲಿ ಹೈಕೋರ್ಟ ಮೆಟ್ಟಿಲೇರಿದ ನೇಹಾ ಬೋರಾಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮಧ್ಯಪ್ರವೇಶಿಸಿ: ಪ್ರಧಾನಿಗೆ ಡಿ.ಕೆ. ಶಿವಕುಮಾರ ಪತ್ರ