LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
National News

ಪೊಲೀಸ್ ನೋಟಿಸ್ ಪ್ರಶ್ನಿಸಿ ದೆಹಲಿ ಹೈಕೋರ್ಟ ಮೆಟ್ಟಿಲೇರಿದ ನೇಹಾ ಬೋರಾ

ಹೊಸದಿಲ್ಲಿ, ಅ. 19: ಸಾರ್ವಜನಿಕ ಶಾಂತಿಗೆ ಭಂಗ ತರುವುದಿಲ್ಲ ಎಂಬ ಭರವಸೆಯ ಬಾಂಡ್ ಸಲ್ಲಿಸುವಂತೆ ದೆಹಲಿ ಪೊಲೀಸರು ನೀಡಿರುವ ನೋಟಿಸ್ ಪ್ರಶ್ನಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎಐಎಸ್‌ಎ) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ದೆಹಲಿ ಹೈಕೋರ್ಟ ಮೆಟ್ಟಿಲೇರಿದ್ದಾರೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 126ರ ಅಡಿಯಲ್ಲಿ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಿ ಶಾಂತಿ ಕಾಪಾಡುವ ಭರವಸೆಯ ಬಾಂಡ್ ಸಲ್ಲಿಸುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಅಕ್ಟೋಬರ್ 19ರಂದು ಹಾಜರಾಗಲು ಸೂಚಿಸಲಾಗಿತ್ತು.

ಈ ನೋಟಿಸ್ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ನೇಹಾ ಬೋರಾ, ದಸರಾ ರಜೆಯ ಹಿನ್ನೆಲೆಯಲ್ಲಿ ತಮ್ಮ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟುಮಾಡುವ ಸಾಧ್ಯತೆಯಿದೆ ಎಂಬ ಮಾಹಿತಿ ದೊರೆತಲ್ಲಿ ಸಂಬಂಧಪಟ್ಟ ವ್ಯಕ್ತಿಯಿಂದ ಶಾಂತಿ ಕಾಪಾಡುವ ಭರವಸೆಯ ಬಾಂಡ್ ಪಡೆಯಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 126ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್‌ಗೆ ಅಧಿಕಾರವಿದೆ.

ಅಕ್ಟೋಬರ್ 16ರಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆಯೋಜಿಸಿದ್ದ ‘ಲೆಹರಾ ದೋ ತಿರಂಗಾ’ ಮೆರವಣಿಗೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ನೇಹಾ ಬೋರಾ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಅಕ್ಟೋಬರ್ 17ರಂದು ಬಿಡುಗಡೆ ಮಾಡಲಾಗಿತ್ತು.

ಇದೀಗ ಪೊಲೀಸರು ನೀಡಿರುವ ನೋಟಿಸ್‌ನ ಕಾನೂನುಬದ್ಧತೆಯನ್ನು ಪ್ರಶ್ನಿಸಿರುವ ನೇಹಾ ಬೋರಾ, ತುರ್ತು ವಿಚಾರಣೆ ನಡೆಸುವಂತೆ ಹೈಕೋರ್ಟಗೆ ಮನವಿ ಮಾಡಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಜೆಪಿ ನಾಯಕರ ನ್ಯಾಯಾಂಗ ಬಂಧನ ಮತ್ತೆರಡು ದಿನ ವಿಸ್ತರಣೆಸಕ್ಕರೆ ಎಂಎಸ್‌ಪಿ ಘೋಷಣೆಗೆ ನ. 26ರವರೆಗೆ ಗಡುವು: ರೈತರ ಪಾದಯಾತ್ರೆ ಅಂತ್ಯಶಾಂತಿಯುತ ಪ್ರತಿಭಟನೆ ಪ್ರತಿಯೊಬ್ಬರ ಮೂಲಭೂತ ಹಕ್ಕುಚುನಾವಣೆಗೆ ಸ್ಪರ್ಧಿಸುವ ಇಚ್ಛೆ: ಕೊಲೆ ಅಪರಾಧಿಯ ಶಿಕ್ಷೆಗೆ ಹೈಕೋರ್ಟ ತಡೆಎಸ್‌ಐಆರ್‌ ವಿರುದ್ಧ ಅ. 23ರಂದು ರಾಜ್ಯಾದ್ಯಂತ ರೈತ, ದಲಿತ ಸಂಘಟನೆಗಳ ಪ್ರತಿಭಟನೆವಿವಾದದ ನಡುವೆಯೇ ಸಿಕ್ಕಿಂ ರಾಜ್ಯಪಾಲರಾಗಿ ದುಷ್ಯಂತ ಕುಮಾರ ಗೌತಮ ಪ್ರಮಾಣ ವಚನಲಾರೆನ್ಸ ಬಿಷ್ಣೋಯ ಗ್ಯಾಂಗಸ್ಟರ್‌ಗೆ ‘ಸಾಹೇಬ’ ಗೌರವ : ದೆಹಲಿ ಪೊಲೀಸರ ವಿರುದ್ಧ ದೀಪ್ಕೆ ಆಕ್ರೋಶಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಮೂವರು ಶಂಕಿತರು ವಶಕ್ಕೆಪೊಲೀಸ್ ನೋಟಿಸ್ ಪ್ರಶ್ನಿಸಿ ದೆಹಲಿ ಹೈಕೋರ್ಟ ಮೆಟ್ಟಿಲೇರಿದ ನೇಹಾ ಬೋರಾಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮಧ್ಯಪ್ರವೇಶಿಸಿ: ಪ್ರಧಾನಿಗೆ ಡಿ.ಕೆ. ಶಿವಕುಮಾರ ಪತ್ರ