LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
National News

ಸಿಜೆಪಿ ನಾಯಕರ ನ್ಯಾಯಾಂಗ ಬಂಧನ ಮತ್ತೆರಡು ದಿನ ವಿಸ್ತರಣೆ

ಜಾಮೀನು ಪ್ರಕ್ರಿಯೆ ವಿಳಂಬಗೊಳಿಸಿ ಬಿಡುಗಡೆ ತಡೆಯಲಾಗುತ್ತಿದೆ: ಅಭಿಜೀತ್ ದೀಪ್ಕೆ ಆರೋಪ

ಹೊಸದಿಲ್ಲಿ, ಅ. 19: ದೆಹಲಿಯ ಜಂತರ್ ಮಂತರ್‌ನಲ್ಲಿ ನಿಷೇಧ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪದಡಿ ಬಂಧಿತರಾಗಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್ ಹಾಗೂ ಆಶುತೋಷ್ ರಾಂಕಾ ಅವರ ನ್ಯಾಯಾಂಗ ಬಂಧನವನ್ನು ಮತ್ತೆರಡು ದಿನಗಳ ಕಾಲ ವಿಸ್ತರಿಸಲಾಗಿದೆ.

ಸೋಮವಾರ ಇಬ್ಬರು ನಾಯಕರನ್ನು ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಗಿದ್ದು, ಅವರ ನ್ಯಾಯಾಂಗ ಬಂಧನವನ್ನು ಬುಧವಾರದವರೆಗೆ ವಿಸ್ತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಂತರ್ ಮಂತರ್‌ಗೆ ಪ್ರತಿಭಟನಾ ತಾಣದ ಸ್ಥಾನಮಾನ ರದ್ದುಗೊಳಿಸಿರುವುದನ್ನು ವಿರೋಧಿಸಿ ಅಕ್ಟೋಬರ್ 13ರಂದು ಸೌರವ್ ದಾಸ್, ಆಶುತೋಷ್ ರಾಂಕಾ ಸೇರಿದಂತೆ ಹಲವರು ಅಲ್ಲಿಗೆ ಪ್ರವೇಶಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದು, ಆರಂಭದಲ್ಲಿ 5 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಇದೀಗ ಬಂಧನದ ಅವಧಿಯನ್ನು ಮತ್ತೆ ವಿಸ್ತರಿಸಿರುವುದಕ್ಕೆ ಸಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಬ್ಬರು ನಾಯಕರ ಬಿಡುಗಡೆ ತಡೆಯುವ ಉದ್ದೇಶದಿಂದಲೇ ಜಾಮೀನು ಪ್ರಕ್ರಿಯೆಯನ್ನು ವಿಳಂಬಗೊಳಿಸಲಾಗುತ್ತಿದೆ ಎಂದು ಪಕ್ಷ ಆರೋಪಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ನ್ಯಾಯಾಂಗ ಪ್ರಕ್ರಿಯೆಯನ್ನು ವಿಳಂಬಗೊಳಿಸುವ ಮೂಲಕ ಸೌರವ್ ದಾಸ್ ಹಾಗೂ ಆಶುತೋಷ್ ರಾಂಕಾ ಅವರ ಬಂಧನವನ್ನು ಉದ್ದೇಶಪೂರ್ವಕವಾಗಿ ಮುಂದುವರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇಬ್ಬರು ನಾಯಕರ ಬಿಡುಗಡೆಗಾಗಿ ಸಲ್ಲಿಸಿರುವ ಜಾಮೀನು ಖಾತರಿಗಳನ್ನು ಅಸ್ಪಷ್ಟ ಕಾರಣಗಳನ್ನು ಮುಂದಿಟ್ಟು ತಿರಸ್ಕರಿಸಲಾಗುತ್ತಿದೆ. ಸರ್ಕಾರವು ಅವರ ಬಿಡುಗಡೆ ತಡೆಯಲು ವಿವಿಧ ತಂತ್ರಗಳನ್ನು ಅನುಸರಿಸುತ್ತಿದೆ ಎಂದು ದೀಪ್ಕೆ ದೂರಿದ್ದಾರೆ.

ಬಂಧಿತರನ್ನು ಅಕ್ಟೋಬರ್ 21ರ ಬುಧವಾರ ಮತ್ತೆ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಜೆಪಿ ನಾಯಕರ ನ್ಯಾಯಾಂಗ ಬಂಧನ ಮತ್ತೆರಡು ದಿನ ವಿಸ್ತರಣೆಸಕ್ಕರೆ ಎಂಎಸ್‌ಪಿ ಘೋಷಣೆಗೆ ನ. 26ರವರೆಗೆ ಗಡುವು: ರೈತರ ಪಾದಯಾತ್ರೆ ಅಂತ್ಯಶಾಂತಿಯುತ ಪ್ರತಿಭಟನೆ ಪ್ರತಿಯೊಬ್ಬರ ಮೂಲಭೂತ ಹಕ್ಕುಚುನಾವಣೆಗೆ ಸ್ಪರ್ಧಿಸುವ ಇಚ್ಛೆ: ಕೊಲೆ ಅಪರಾಧಿಯ ಶಿಕ್ಷೆಗೆ ಹೈಕೋರ್ಟ ತಡೆಎಸ್‌ಐಆರ್‌ ವಿರುದ್ಧ ಅ. 23ರಂದು ರಾಜ್ಯಾದ್ಯಂತ ರೈತ, ದಲಿತ ಸಂಘಟನೆಗಳ ಪ್ರತಿಭಟನೆವಿವಾದದ ನಡುವೆಯೇ ಸಿಕ್ಕಿಂ ರಾಜ್ಯಪಾಲರಾಗಿ ದುಷ್ಯಂತ ಕುಮಾರ ಗೌತಮ ಪ್ರಮಾಣ ವಚನಲಾರೆನ್ಸ ಬಿಷ್ಣೋಯ ಗ್ಯಾಂಗಸ್ಟರ್‌ಗೆ ‘ಸಾಹೇಬ’ ಗೌರವ : ದೆಹಲಿ ಪೊಲೀಸರ ವಿರುದ್ಧ ದೀಪ್ಕೆ ಆಕ್ರೋಶಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಮೂವರು ಶಂಕಿತರು ವಶಕ್ಕೆಪೊಲೀಸ್ ನೋಟಿಸ್ ಪ್ರಶ್ನಿಸಿ ದೆಹಲಿ ಹೈಕೋರ್ಟ ಮೆಟ್ಟಿಲೇರಿದ ನೇಹಾ ಬೋರಾಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮಧ್ಯಪ್ರವೇಶಿಸಿ: ಪ್ರಧಾನಿಗೆ ಡಿ.ಕೆ. ಶಿವಕುಮಾರ ಪತ್ರ