LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ಜೀಪ್ -ಬೈಕ್ ಅಪಘಾತ; ಇಬ್ಬರ ಸಾವು

ರಾಮದುರ್ಗ : ಜೀಪ್ (ಕ್ರೂಜರ್ ) ಮತ್ತು ಎರಡು ಬೈಕ್ ಗಳ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿ ಇಬ್ಬರು ಯುವಕರು ಸ್ಥಳದಲ್ಲಿ ಮೃತಪಟ್ಟು ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಡ್ಲಿಕೊಪ್ಪ ಗ್ರಾಮದ ಹತ್ತಿರ ನಡೆದಿದೆ.



ರಾಮದುರ್ಗ ಪಟ್ಟಣದ ಭಾಗ್ಯನಗರದ ನಿವಾಸಿ 25 ವಯಸ್ಸಿನ ಮಹಾನಿಂಗ ನಂಜಪ್ಪ ಅಚಮಟ್ಟಿ ಹಾಗೂ ಮಡ್ಡಿಗಲ್ಲಿಯ 26 ವಯಸ್ಸಿನ ರಫೀಕ ಚಲವಾದಿ ಮೃತಪತ್ತಿದ್ದಾರೆ.



ಅಪಘಾತದಲ್ಲಿ ಗಾಯಗೊಂಡ ಪಟ್ಟಣದ ಆಶ್ರಯ ಪ್ಲಾಟನ ನಿವಾಸಿ ಉನ್ನಿಸ ಮಹಮ್ಮದ ಪಟೇಲ ಅವರನ್ನು ಬಾಗಲಕೋಟ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಭಾಗ್ಯನಗರದ ನಿವಾಸಿ ಮಾರುತಿ ಬಂಡಿವಡ್ಡರ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.



ಎರಡು ಬೈಕ್ ಗಳಲ್ಲಿ ನಾಲ್ಕು ಜನರು ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿ ಕಟ್ಟಡ ನಿರ್ಮಾಣ ಕೆಲಸವನ್ನು ಮುಗಿಸಿಕೊಂಡು ರಾಮದುರ್ಗದ ಕಡೆಗೆ ಬರುವಾಗ ರಾಮದುರ್ಗ ಕಡೆಯಿಂದ ಶಿರಸಂಗಿ ಕಡೆಗೆ ಹೊರಟಿದ್ದ ಜೀಪ್ ಮಧ್ಯೆ ಡಿಕ್ಕಿಯಾಗಿದೆ.



ಅಪಘಾತ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ ಶಾ ಭೇಟಿ : ಬೆಳಗಾವಿ ವಿಮಾನ ನಿಲ್ದಾಣದ ಸುತ್ತ 2 ಕಿ.ಮೀ. ‘ರೆಡ್ ಝೋನ್–ನೋ ಫ್ಲೈ ಝೋನ್’ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ