Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಶಿವಾನಂದ ನೀಲಣ್ಣನವರಗೆ ಇಡಿ ಬಿಗ್ ಶಾಕ್: ₹427 ಕೋಟಿ ಆಸ್ತಿ ಜಪ್ತಿ

35 ಸಾವಿರಕ್ಕೂ ಹೆಚ್ಚು ಹೂಡಿಕೆದಾರರಿಂದ ₹2,459 ಕೋಟಿ ಸಂಗ್ರಹ; ಬ್ಯಾಂಕ್ ಠೇವಣಿ, ಜಮೀನು, ಬಂಗಲೆಗಳು ಜಪ್ತಿ

ಬೆಳಗಾವಿ, ಅ. 31: ಬಹುಕೋಟಿ ಹೂಡಿಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮುಖ್ಯಸ್ಥ ಶಿವಾನಂದ ಸಿದ್ದಪ್ಪ ನೀಲಣ್ಣನವರ್ ಹಾಗೂ ಅವರ ಸಹಚರರಿಗೆ ಸೇರಿದ ₹427.16 ಕೋಟಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದ್ದು, ₹367.78 ಕೋಟಿ ಸ್ಥಿರ ಠೇವಣಿ, 47 ಬ್ಯಾಂಕ್ ಖಾತೆಗಳಲ್ಲಿರುವ ₹44.38 ಕೋಟಿ, ₹13.69 ಕೋಟಿ ಮೌಲ್ಯದ 42 ಸ್ಥಿರಾಸ್ತಿಗಳು ಹಾಗೂ ₹1.32 ಕೋಟಿ ಮೌಲ್ಯದ ಷೇರು ಹೂಡಿಕೆಗಳನ್ನು ಜಪ್ತಿ ಮಾಡಲಾಗಿದೆ. ಕೃಷಿ ಜಮೀನು, ಬಂಗಲೆಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿನ ಹೂಡಿಕೆಗಳೂ ಇದರಲ್ಲಿ ಸೇರಿವೆ.

ಶಿವಂ ಅಸೋಸಿಯೇಟ್ಸ್ ಮೂಲಕ ಮಾಸಿಕ ಶೇ.3ರಷ್ಟು ಲಾಭಾಂಶ ಹಾಗೂ ಹೊಸ ಹೂಡಿಕೆದಾರರನ್ನು ಪರಿಚಯಿಸಿದವರಿಗೆ ಶೇ.0.5ರಷ್ಟು ಕಮಿಷನ್ ನೀಡುವುದಾಗಿ ಆಮಿಷವೊಡ್ಡಿ 35 ಸಾವಿರಕ್ಕೂ ಹೆಚ್ಚು ಜನರಿಂದ ₹2,459.49 ಕೋಟಿ ಸಂಗ್ರಹಿಸಲಾಗಿದೆ ಎಂದು ಇಡಿ ಆರೋಪಿಸಿದೆ.

ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರಿಂದ ₹185.95 ಕೋಟಿ ನಷ್ಟ ಸಂಭವಿಸಿದೆ. ಸುಮಾರು ₹25 ಕೋಟಿ ಹಣವನ್ನು ಸಹಕಾರಿ ಸಾಲ ಸಂಸ್ಥೆಗಳ ಮೂಲಕ ವರ್ಗಾಯಿಸಲಾಗಿದೆ. ಅಲ್ಲದೆ, ಸಂಗ್ರಹಿಸಿದ ಹಣವನ್ನು ಜಮೀನು ಖರೀದಿ, ಸ್ಥಿರಾಸ್ತಿ ಹೂಡಿಕೆ ಹಾಗೂ ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಇಡಿ ತಿಳಿಸಿದೆ.

ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಆಧಾರದಲ್ಲಿ ಇಡಿ ತನಿಖೆ ಆರಂಭಿಸಿತ್ತು. ಆಗಸ್ಟ್‌ನಲ್ಲಿ ಬೆಳಗಾವಿ, ಚಿಕ್ಕೋಡಿ ಮತ್ತು ನಿಪ್ಪಾಣಿ ಸೇರಿದಂತೆ 8 ಸ್ಥಳಗಳಲ್ಲಿ ಶೋಧ ನಡೆಸಿ ಮಹತ್ವದ ದಾಖಲೆಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಆಗಸ್ಟ್ 13ರಂದು ಶಿವಾನಂದ ನೀಲಣ್ಣನವರ್ ಅವರನ್ನು ಬಂಧಿಸಲಾಗಿದ್ದು, ಅಕ್ಟೋಬರ್ 9ರಂದು ಅವರೂ ಸೇರಿದಂತೆ ಐವರು ಆರೋಪಿತ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಮಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್ ದೂರು ಸಲ್ಲಿಸಲಾಗಿದೆ.

ಪ್ರಕರಣದಲ್ಲಿ ಇದುವರೆಗೆ ₹427.16 ಕೋಟಿ ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದ್ದು, ಹಣದ ವರ್ಗಾವಣೆ ಹಾಗೂ ಇತರ ಆಸ್ತಿಗಳ ಕುರಿತು ತನಿಖೆ ಮುಂದುವರಿದಿದೆ.

Author
Samadarshi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಜಿನದತ್ತ ದೇಸಾಯಿ ನಿಧನಸಕ್ಕರೆ ಕನಿಷ್ಠ ಮಾರಾಟ ದರ 50 ರೂ.ಗೆ ಹೆಚ್ಚಿಸಲಿ: ಡಿ.ಕೆ. ಶಿವಕುಮಾರಘಟಪ್ರಭಾದಲ್ಲಿ ರೈತರ ಬಂದ್‌ಗೆ ಬೆಂಬಲ: ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತರೈತರ ಹೋರಾಟ ತೀವ್ರ: ಬೆಳಗಾವಿ, ಧಾರವಾಡ, ವಿಜಯಪುರದಲ್ಲಿ ಪ್ರತಿಭಟನೆದೀಪಾವಳಿ : ಪ್ರಯಾಣಿಕರಿಗಾಗಿ 2,600 ಹೆಚ್ಚುವರಿ ಬಸ್‌ಗಳ ವ್ಯವಸ್ಥೆಜ್ಞಾನೇಶ ಕುಮಾರ ವಿರುದ್ಧ ಜನತಾ ಮಹಾಭಿಯೋಗ: ಖರ್ಗೆ ನಿವಾಸದಲ್ಲಿ ಅಣಕು ಸಂಸತ್ಭಾರತೀಯ ವಾಯುಪಡೆಗೆ ನೂತನ ಸಾರಥಿ ಅಶುತೋಷ ದೀಕ್ಷಿತಶಿವಾನಂದ ನೀಲಣ್ಣನವರಗೆ ಇಡಿ ಬಿಗ್ ಶಾಕ್: ₹427 ಕೋಟಿ ಆಸ್ತಿ ಜಪ್ತಿಪಂಚತಾರಾ ಹೋಟೆಲ್ ಈಜುಕೊಳದಲ್ಲಿ ವಿದ್ಯುತ್ ಆಘಾತ: ಇಬ್ಬರು ವಿದೇಶಿಗರ ಸಾವುಹಾಲಿನ ದರ ಏರಿಕೆ ಅನಿವಾರ್ಯ: ಡಿ.ಕೆ. ಶಿವಕುಮಾರ ಸಮರ್ಥನೆ