LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬೆಲೆ ಏರಿಕೆಯಿಂದ ಜನಸಾಮಾನ್ಯರು ಬದುಕುವುದು ಹೇಗೆ? : ಹೈಕೋರ್ಟ ಪ್ರಶ್ನೆ

ಬೆಂಗಳೂರು, ನ. 9: ಒಂದೆಡೆ ಸರ್ಕಾರ ಉಚಿತ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೆ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರುತ್ತಿದೆ. ದಿನಬಳಕೆಯ ವಸ್ತುಗಳ ದರದ ಜತೆಗೆ ಸಾರಿಗೆ ವೆಚ್ಚವೂ ಹೆಚ್ಚಾಗುತ್ತಿರುವಾಗ ಸಾಮಾನ್ಯ ಜನರು ಜೀವನ ಸಾಗಿಸುವುದಾದರೂ ಹೇಗೆ? ಒಂದು ಕಡೆ ಉಚಿತವಾಗಿ ಕೊಟ್ಟು ಮತ್ತೊಂದು ಕಡೆ ಬೆಲೆ ಹೆಚ್ಚಿಸುತ್ತಾ ಹೋದರೆ ಜನಸಾಮಾನ್ಯರ ಬದುಕಿನ ಗತಿಯೇನು ಎಂದು ಕರ್ನಾಟಕ ಹೈಕೋರ್ಟ ತೀವ್ರ ಕಳವಳ ವ್ಯಕ್ತಪಡಿಸಿದೆ.

ಮೈಸೂರಿನ ಸರ್ಕಾರಿ ಉಗ್ರಾಣದಲ್ಲಿ ಅನ್ನಭಾಗ್ಯ ಯೋಜನೆಯಡಿ ಸಂಗ್ರಹಿಸಲಾಗಿದ್ದ 320 ಕ್ವಿಂಟಲ್ ಅಕ್ಕಿ ಹಾಗೂ 85 ಕ್ವಿಂಟಲ್ ಗೋಧಿ ದಾಸ್ತಾನು ಕೊರತೆಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಸರ್ಕಾರದ ಉಚಿತ ಯೋಜನೆಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಕುರಿತು ತೀಕ್ಷ್ಣ ಮೌಖಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿವರಿಸಿದ ನ್ಯಾಯಮೂರ್ತಿ, ಕಳೆದ ತಿಂಗಳು ತುಪ್ಪದ ಬೆಲೆ ಪ್ರತಿ ಕೆ.ಜಿ.ಗೆ ₹650 ಇತ್ತು. ಈಗ ₹850ಕ್ಕೆ ಏರಿಕೆಯಾಗಿದೆ. ಕೇವಲ ಒಂದು ತಿಂಗಳಲ್ಲಿ ಇಷ್ಟೊಂದು ಬೆಲೆ ಹೆಚ್ಚಾದರೆ ಸಾಮಾನ್ಯ ಜನರು ಏನು ಮಾಡಬೇಕು? ದೀಪಾವಳಿಗೆ ತುಪ್ಪದ ದೀಪ ಹಚ್ಚುವುದಾದರೂ ಹೇಗೆ? ಯಮದೀಪ ಹಚ್ಚುವ ಬದಲು ನನ್ನನ್ನೇ ಕರೆದುಕೊಂಡು ಹೋಗು ಎಂದು ಯಮನನ್ನು ಕೇಳಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಅಕ್ಕಿಯ ಬೆಲೆ ಕೆ.ಜಿ.ಗೆ ₹103 ತಲುಪಿದೆ. ಬಡವರು ಮತ್ತು ಮಧ್ಯಮ ವರ್ಗದವರು ಜೀವನ ನಿರ್ವಹಿಸುವುದು ಹೇಗೆ ಎಂದು ಪ್ರಶ್ನಿಸಿದರು. ಕಬ್ಬಿಗೆ ಪ್ರತಿ ಟನ್‌ಗೆ ₹3,000ಕ್ಕೂ ಅಧಿಕ ಬೆಲೆ ನಿಗದಿಪಡಿಸಲಾಗಿದೆ. ಸರ್ಕಾರ ಈ ಹಣವನ್ನು ತನ್ನ ಜೇಬಿನಿಂದ ನೀಡುವುದಿಲ್ಲ. ಅಂತಿಮವಾಗಿ ಜನರ ತೆರಿಗೆ ಹಣವೇ ಇದಕ್ಕೆ ಆಧಾರವಾಗುತ್ತದೆ. ಇದೇ ಪರಿಸ್ಥಿತಿ ಮುಂದುವರಿದರೆ ದೀಪಾವಳಿ ಬಳಿಕ ಸಕ್ಕರೆಯ ಬೆಲೆ ಕೆ.ಜಿ.ಗೆ ₹90 ತಲುಪಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಬಸ್ ಪ್ರಯಾಣ ದರವೂ ಹೆಚ್ಚಿರುವುದನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ, ಜನರು ದಿನಸಿ ಖರೀದಿಸಲು ಮಾರುಕಟ್ಟೆಗೆ ಹೋಗಬೇಕಾದರೂ ಹೆಚ್ಚಿನ ಹಣ ಖರ್ಚು ಮಾಡಬೇಕು. ಬಸ್ ಟಿಕೆಟ್ ದರವೂ ಹೆಚ್ಚಾಗಿದೆ. ಹೀಗೆ ಪ್ರತಿಯೊಂದು ಹಂತದಲ್ಲಿಯೂ ಜನರ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತಿದ್ದರೆ ಅವರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಬಡವರ ಆಹಾರಧಾನ್ಯ ಕಾಳಸಂತೆಗೆ ಹೋದರೆ ಸಹಿಸಲಾಗದು

ಮೈಸೂರಿನ ಸರ್ಕಾರಿ ಉಗ್ರಾಣದಲ್ಲಿ ಅನ್ನಭಾಗ್ಯ ಯೋಜನೆಯಡಿ ವಿತರಿಸಲು ಸಂಗ್ರಹಿಸಲಾಗಿದ್ದ ಆಹಾರಧಾನ್ಯಗಳ ದಾಸ್ತಾನಿನಲ್ಲಿ 320 ಕ್ವಿಂಟಲ್ ಅಕ್ಕಿ ಮತ್ತು 85 ಕ್ವಿಂಟಲ್ ಗೋಧಿ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ಕೋರಿ ಉಗ್ರಾಣದ ಹಿರಿಯ ವ್ಯವಸ್ಥಾಪಕರೊಬ್ಬರು ಹೈಕೋರ್ಟ ಮೆಟ್ಟಿಲೇರಿದ್ದರು.

ಬಡವರಿಗೆ ಉಚಿತವಾಗಿ ವಿತರಿಸಬೇಕಾದ ಆಹಾರಧಾನ್ಯಗಳನ್ನು ಕ್ವಿಂಟಲ್‌ಗಟ್ಟಲೆ ದುರ್ಬಳಕೆ ಮಾಡಿಕೊಂಡು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದು ನ್ಯಾಯಮೂರ್ತಿ ಎಚ್ಚರಿಸಿದರು. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಭಾರಿ ಪ್ರಮಾಣದ ಆಹಾರಧಾನ್ಯಗಳ ಕೊರತೆ ಕಂಡುಬರುವುದು ಗಂಭೀರ ವಿಚಾರವಾಗಿದೆ ಎಂದು ಅಭಿಪ್ರಾಯಪಟ್ಟರು.

ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದಾಗ ಉಗ್ರಾಣಗಳಲ್ಲಿ ಮೊದಲೇ ಸಂಗ್ರಹಿಸಿಟ್ಟಿರುವ ಹಳೆಯ ದಾಸ್ತಾನಿನ ಮೇಲೂ ಹೊಸ ದರ ಮುದ್ರಿಸಿ ಮಾರಾಟ ಮಾಡಲಾಗುತ್ತದೆ. ಕಡಿಮೆ ಬೆಲೆಯಲ್ಲಿ ಖರೀದಿಸಿದ ಸರಕನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದರಿಂದ ಗ್ರಾಹಕರಿಗೆ ಅನ್ಯಾಯವಾಗುತ್ತದೆ. ಇದು 'ಹಳೇ ಮಾಲು, ಹೊಸ ಸೀಲು' ಎಂಬಂತಾಗಿದೆ ಎಂದು ವ್ಯಂಗ್ಯವಾಡಿದರು.

ಪ್ರಕರಣದ ಮುಂದಿನ ವಿಚಾರಣೆಯನ್ನು ಹೈಕೋರ್ಟ ನವೆಂಬರ್ 11ಕ್ಕೆ ನಿಗದಿಪಡಿಸಿದೆ. ನ್ಯಾಯಮೂರ್ತಿಯವರ ಹೇಳಿಕೆಗಳು ವಿಚಾರಣೆ ಸಂದರ್ಭದ ಮೌಖಿಕ ಅವಲೋಕನಗಳಾಗಿದ್ದು, ಪ್ರಕರಣದ ಅಂತಿಮ ತೀರ್ಪು ಇನ್ನೂ ಹೊರಬಿದ್ದಿಲ್ಲ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ಪ್ರಧಾನಿಯ ಸುಳ್ಳುಗಳನ್ನು ಸೈನಿಕರು ನಂಬಿಲ್ಲ’: ರಾಹುಲ್ಬೆಲೆ ಏರಿಕೆಯಿಂದ ಜನಸಾಮಾನ್ಯರು ಬದುಕುವುದು ಹೇಗೆ? : ಹೈಕೋರ್ಟ ಪ್ರಶ್ನೆಚುನಾವಣಾ ಅಕ್ರಮಗಳ ಕುರಿತು 10 ಆರೋಪಗಳ ಪಟ್ಟಿ ಮಾಡಿದ ಗೌರವ ಗೊಗೊಯ್ಎಥೆನಾಲ್ ಮಿಶ್ರಣ : ಗ್ರಾಹಕರಿಗೆ ಇಂಧನ ಆಯ್ಕೆಯ ಸ್ವಾತಂತ್ರ್ಯ ನೀಡಲಿಇರಾನ್ ಯುದ್ಧ ಅಂತ್ಯಕ್ಕೆ ಟ್ರಂಪ್ ಪ್ರಯತ್ನ: ಪುಟಿನ್, ಷಿ ಜತೆ ಮಾತುಕತೆ ಸಾಧ್ಯತೆಸಂಧಾನಕ್ಕೆ ಬನ್ನಿ, ಇಲ್ಲವೇ ನರಕ ಸೃಷ್ಟಿಸುತ್ತೇವೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ 1,331ಕ್ಕೆ ಏರಿದ ದಿಲ್ಲಿ ವಾಯುಮಾಲಿನ್ಯ!ಬೆಳಗಾವಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಮಗನ ಕೊಲೆ, ತಾಯಿ ಸೇರಿ 6 ಮಂದಿ ಬಂಧನ, ಬಾಲಕ ವಶಕ್ಕೆದೇಶದ ಜನತೆಗೆ ಹಬ್ಬದ ಪ್ರಧಾನಿ ಮೋದಿ ದೀಪಾವಳಿ ಶುಭಾಶಯವಿಜಯಪುರ ಕೊಲೆ ಪ್ರಕರಣ: ಪ್ರಮುಖ ಆರೋಪಿ ಕಾಲಿಗೆ ಗುಂಡಿಕ್ಕಿ ಬಂಧನ