LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

1,331ಕ್ಕೆ ಏರಿದ ದಿಲ್ಲಿ ವಾಯುಮಾಲಿನ್ಯ!

ಹೊಸದಿಲ್ಲಿ, ನ. 9: ದೀಪಾವಳಿ ಸಂಭ್ರಮದ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರಗೊಂಡಿದ್ದು, ಜನರು ಉಸಿರಾಟದ ತೊಂದರೆ ಎದುರಿಸುವಂತಾಗಿದೆ. ನಗರದಾದ್ಯಂತ ದಟ್ಟ ಹೊಗೆ ಆವರಿಸಿದ್ದು, ರಸ್ತೆಗಳು ಹಾಗೂ ಎತ್ತರದ ಕಟ್ಟಡಗಳು ಮಸುಕಾಗಿ ಕಾಣುತ್ತಿವೆ.

ಸೋಮವಾರ ಬೆಳಿಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕೃತ ವಾಯು ಗುಣಮಟ್ಟ ಸೂಚ್ಯಂಕ 371 ದಾಖಲಾಗಿದ್ದು, ಅತ್ಯಂತ ಕಳಪೆ ಮಟ್ಟದಲ್ಲಿತ್ತು. ಇದೇ ವೇಳೆ ಖಾಸಗಿ ಮಾಪನ ಸಂಸ್ಥೆಯ ದಾಖಲೆಗಳ ಪ್ರಕಾರ, ತಡರಾತ್ರಿ 1.31ಕ್ಕೆ ಸೂಚ್ಯಂಕ 1,331ಕ್ಕೆ ಏರಿದ್ದು, ಬೆಳಿಗ್ಗೆ 663 ದಾಖಲಾಗಿತ್ತು. ಕಳೆದ ವರ್ಷ ದೀಪಾವಳಿಯ ಮರುದಿನ ಇದೇ ಖಾಸಗಿ ಸಂಸ್ಥೆ ದಾಖಲಿಸಿದ್ದ 393ಕ್ಕೆ ಹೋಲಿಸಿದರೆ ಇದು ಸುಮಾರು ಶೇ. 69ರಷ್ಟು ಹೆಚ್ಚಾಗಿದೆ.

ನಿರ್ಬಂಧಗಳ ನಡುವೆಯೂ ಭಾನುವಾರ ಸಂಜೆ ದೆಹಲಿಯ ಹಲವು ಪ್ರದೇಶಗಳಲ್ಲಿ ಪಟಾಕಿಗಳನ್ನು ಸಿಡಿಸಿದ್ದರಿಂದ ವಾತಾವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹೊಗೆ ಹಾಗೂ ಸೂಕ್ಷ್ಮ ಧೂಳಿನ ಕಣಗಳು ಸೇರಿಕೊಂಡಿವೆ. ಗೋಚರತೆ ಕಡಿಮೆಯಾಗಿರುವುದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗಿದೆ.

ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ ಸಾಂಪ್ರದಾಯಿಕ ಪಟಾಕಿಗಳ ಬಳಕೆಗೆ ನಿರ್ಬಂಧ ವಿಧಿಸಿ, ನಿಗದಿತ ಅವಧಿಯಲ್ಲಿ ಹಸಿರು ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿತ್ತು. ಆದರೆ, ಹಸಿರು ಪಟಾಕಿಗಳಿಂದಲೂ ಮಾಲಿನ್ಯ ಉಂಟಾಗುತ್ತದೆ.

ವಾಹನಗಳ ಹೊಗೆ, ಕೈಗಾರಿಕಾ ಚಟುವಟಿಕೆಗಳು, ನಿರ್ಮಾಣ ಕಾಮಗಾರಿಗಳ ಧೂಳು ಹಾಗೂ ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ತ್ಯಾಜ್ಯ ಸುಡುವುದು ದೆಹಲಿಯ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿವೆ. ಚಳಿಗಾಲದಲ್ಲಿ ತಾಪಮಾನ ಹಾಗೂ ಗಾಳಿಯ ವೇಗ ಕಡಿಮೆಯಾಗುವುದರಿಂದ ಮಾಲಿನ್ಯಕಾರಕಗಳು ವಾತಾವರಣದಲ್ಲಿಯೇ ಸಂಗ್ರಹಗೊಂಡು ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.

ಮಾಲಿನ್ಯ ನಿಯಂತ್ರಣಕ್ಕಾಗಿ ನಿರ್ಮಾಣ ಚಟುವಟಿಕೆಗಳು, ಡೀಸೆಲ್ ಜನರೇಟರ್‌ಗಳು ಹಾಗೂ ಪಟಾಕಿಗಳ ಬಳಕೆಯ ಮೇಲೆ ನಿರ್ಬಂಧ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶುದ್ಧ ಇಂಧನ ಬಳಕೆಗೆ ಆದ್ಯತೆ ನೀಡುವುದರ ಜೊತೆಗೆ ವಾಹನಗಳು ಹಾಗೂ ಕೈಗಾರಿಕೆಗಳಿಂದ ಹೊರಸೂಸುವ ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕೆಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ಪ್ರಧಾನಿಯ ಸುಳ್ಳುಗಳನ್ನು ಸೈನಿಕರು ನಂಬಿಲ್ಲ’: ರಾಹುಲ್ಬೆಲೆ ಏರಿಕೆಯಿಂದ ಜನಸಾಮಾನ್ಯರು ಬದುಕುವುದು ಹೇಗೆ? : ಹೈಕೋರ್ಟ ಪ್ರಶ್ನೆಚುನಾವಣಾ ಅಕ್ರಮಗಳ ಕುರಿತು 10 ಆರೋಪಗಳ ಪಟ್ಟಿ ಮಾಡಿದ ಗೌರವ ಗೊಗೊಯ್ಎಥೆನಾಲ್ ಮಿಶ್ರಣ : ಗ್ರಾಹಕರಿಗೆ ಇಂಧನ ಆಯ್ಕೆಯ ಸ್ವಾತಂತ್ರ್ಯ ನೀಡಲಿಇರಾನ್ ಯುದ್ಧ ಅಂತ್ಯಕ್ಕೆ ಟ್ರಂಪ್ ಪ್ರಯತ್ನ: ಪುಟಿನ್, ಷಿ ಜತೆ ಮಾತುಕತೆ ಸಾಧ್ಯತೆಸಂಧಾನಕ್ಕೆ ಬನ್ನಿ, ಇಲ್ಲವೇ ನರಕ ಸೃಷ್ಟಿಸುತ್ತೇವೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ 1,331ಕ್ಕೆ ಏರಿದ ದಿಲ್ಲಿ ವಾಯುಮಾಲಿನ್ಯ!ಬೆಳಗಾವಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಮಗನ ಕೊಲೆ, ತಾಯಿ ಸೇರಿ 6 ಮಂದಿ ಬಂಧನ, ಬಾಲಕ ವಶಕ್ಕೆದೇಶದ ಜನತೆಗೆ ಹಬ್ಬದ ಪ್ರಧಾನಿ ಮೋದಿ ದೀಪಾವಳಿ ಶುಭಾಶಯವಿಜಯಪುರ ಕೊಲೆ ಪ್ರಕರಣ: ಪ್ರಮುಖ ಆರೋಪಿ ಕಾಲಿಗೆ ಗುಂಡಿಕ್ಕಿ ಬಂಧನ