LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಇವಿಎಂ ಪರಿಶೀಲನೆ ಆರಂಭ

ಬೆಳಗಾವಿ, ಫೆ.13 : ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಹಂಚಿಕೆಯಾಗಿರುವ ಎಲೆಕ್ಟ್ರಾನಿಕ್ ಮತಯಂತ್ರಗಳ(ಇವಿಎಂ) ಪ್ರಥಮ ಹಂತದ ಪರಿಶೀಲನಾಕಾರ್ಯ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.



ಇಲ್ಲಿನ ಹಿಂಡಲಗಾ ಗ್ರಾಮದಲ್ಲಿರುವ ಭಾರತ ಚುನಾವಣಾ ಆಯೋಗದ ಮತಯಂತ್ರಗಳ ಉಗ್ರಾಣದಲ್ಲಿ ಸೋಮವಾರ ಆರಂಭಿಸಲಾಗಿರುವ ಪ್ರಥಮ ಹಂತದ ಪರಿಶೀಲನಾ (ಎಫ್.ಎಲ್‌.ಸಿ) ಕಾರ್ಯವನ್ನು ವೀಕ್ಷಿಸಿದ ಬಳಿಕ ಈ ವಿಷಯ ತಿಳಿಸಿದರು.



ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಳಕೆಗಾಗಿ ಜಿಲ್ಲೆಗೆ ನೀಡಲಾಗಿರುವ ಮತ ಯಂತ್ರಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕವೇ ಅವುಗಳನ್ನು ಬಳಕೆಗೆ ಖಾತ್ರಿಪಡಿಸಲಾಗುತ್ತದೆ.



ಜಿಲ್ಲೆಯ ಒಟ್ಟು 18 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಒಟ್ಟಾರೆ 8748 ಬ್ಯಾಲೆಟ್ ಯುನಿಟ್; 7216 ಕಂಟ್ರೋಲ್ ಯುನಿಟ್ ಹಾಗೂ 6319 ವಿವಿಪ್ಯಾಟ್ ಯಂತ್ರಗಳನ್ನು ಒದಗಿಸಲಾಗಿರುತ್ತದೆ ಎಂದು ತಿಳಿಸಿದರು.



ಇವಿಎಂ ಪರಿಶೀಲನೆ ಪಾರದರ್ಶಕ:



ಮತಯಂತ್ರಗಳ ಪ್ರಥಮಹಂತದ ಪರಿಶೀಲನಾಕಾರ್ಯವನ್ನು ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ರಾಷ್ಟ್ರೀಯ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಅತ್ಯಂತ ಪಾರದರ್ಶಕವಾಗಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.



ಇಂದಿನಿಂದ ಪರಿಶೀಲನಾ ಕಾರ್ಯ ಆರಂಭಗೊಂಡಿರುತ್ತದೆ. ಚುನಾವಣಾ ಆಯೋಗವೇ ನಿಯೋಜಿಸಿರುವ ಎಲೆಕ್ಟ್ರಾನಿಕ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್‌)ನ ನುರಿತ 30 ಎಂಜಿನಿಯರ್ ಗಳು ಪ್ರತಿಯೊಂದು ಮತಯಂತ್ರಗಳನ್ನು ನಿಯಮಾನುಸಾರ ಜೋಡಿಸಿ ಅವುಗಳ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸಲಾಗುತ್ತದೆ ಎಂದು ತಿಳಿಸಿದರು.



ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರಥಮ ಹಂತದ ಪರಿಶೀಲನಾ ಕಾರ್ಯ ನಡೆಯುತ್ತದೆ. ರಾಷ್ಟ್ರೀಯ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪರಿಶೀಲನಾ ಕಾರ್ಯವನ್ನು ವೀಕ್ಷಿಸಬಹುದಾಗಿದೆ ಎಂದು ನಿತೇಶ ಪಾಟೀಲ ಅವರು ತಿಳಿಸಿದರು.



ಪರಿಶೀಲನಾ ಕಾರ್ಯವು ಪಾರದರ್ಶಕವಾಗಿ ನಡೆಸಲು ಅನುಕೂಲವಾಗುವಂತೆ ವೆಬ್ ಕ್ಯಾಸ್ಟಿಂಗ್ ಕೂಡ ಮಾಡಲಾಗುತ್ತಿದ್ದು. ಎಲ್ಲಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿರುತ್ತದೆ. ಅಗತ್ಯ ಗುರುತಿನ ಚೀಟಿ ಹೊಂದಿರುವ ಅಧಿಕೃತ ವ್ಯಕ್ತಿಗಳಿಗೆ ಮಾತ್ರ ಪ್ರವೇಶವನ್ನು ಕಲ್ಪಿಸಲಾಗುತ್ತಿದೆ ಎಂದರು.



ಜಿಲ್ಲೆಗೆ ಹಂಚಿಕೆಯಾಗಿರುವ ಪ್ರತಿಯೊಂದು ಮತಯಂತ್ರವನ್ನು ಇ.ಎಂ.ಎಸ್. ಸಾಫ್ಟ್‌ವೇರ್ ಮೂಲಕ ಸ್ಕ್ಯಾನ್ ಮಾಡಿ ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಜೋಡಿಸಿ ಅವುಗಳನ್ನು ಯು.ಎ.ಟಿ. ಅಂದರೆ ಯೂಸರ್ ಅಕ್ಸೆಪ್ಟೆನ್ಸ್ ಟೆಸ್ಟ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.



ಹೈದರಾಬಾದನಿಂದ ಮತಯಂತ್ರಗಳನ್ನು ಸುರಕ್ಷಿತವಾಗಿ ತಂದು ಹಿಂಡಲಗಾ ಗ್ರಾಮದ ಉಗ್ರಾಣದಲ್ಲಿ ಸಂರಕ್ಷಿಸಿ ಇಡಲಾಗಿದ್ದು, ಹದಿನೈದು ದಿನಗಳ ಕಾಲ ಪ್ರಥಮ‌ ಹಂತದ ಪರಿಶೀಲನೆ ನಡೆಯಲಿದೆ ಎಂದು ಇವಿಎಂ ನೋಡಲ್ ಅಧಿಕಾರಿ ಮೋಹನ ಶಿವಣ್ಣನವರ ಹೇಳಿದರು.



ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ, ಬೆಳಗಾವಿ ಉಪ ವಿಭಾಗಾಧಿಕಾರಿ ಬಲರಾಮ ಚವಾಣ, ವಿವಿಧ ಕ್ಷೇತ್ರಗಳ ಚುನಾವಣಾಧಿಕಾರಿಗಳಾದ ಗೀತಾ ಕೌಲಗಿ, ಸತೀಶ ಕುಮಾರ, ಡಾ.ರಾಜೀವ ಕೂಲೇರ, ಇವಿಎಂ ನೋಡಲ್ ಅಧಿಕಾರಿ ಮೋಹನ ಶಿವಣ್ಣನವರ, ಚುನಾವಣಾ ಶಾಖೆಯ ತಹಶೀಲ್ದಾರ ಸಾರಿಕಾ ಶೆಟ್ಟಿ, ಸಹಾಯಕ ಚುನಾವಣಾಧಿಕಾರಿಗಳುಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Author
Samadarshi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಾತಿ ಬಲದಿಂದಲೇ ಕುಮಾರಸ್ವಾಮಿ ಸಿಎಂ ಆಗಿದ್ದು: ಪ್ರಿಯಾಂಕ್ ಖರ್ಗೆ ವಾಗ್ದಾಳಿಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಪ್ರಕರಣ: ಕೃಪಾ ಆಳ್ವಾ ಸೇರಿ ಮೂವರಿಗೆ ಮಧ್ಯಂತರ ಜಾಮೀನುಎಪಿಎಂಸಿಗಳಲ್ಲಿ ಕಮಿಷನ್ ಹಾವಳಿ ತಡೆಗೆ ಆಗ್ರಹಿಸಿ ರೈತರ ಅನಿರ್ದಿಷ್ಟಾವಧಿ ಧರಣಿಸಕ್ಕರೆ ಮಾರಾಟ ದರ ಆಧರಿಸಿ ಕಬ್ಬಿನ ಬೆಲೆ ನಿಗದಿ ಅಸಾಧ್ಯ: ಸತೀಶ ಜಾರಕಿಹೊಳಿನನ್ನ ವಿರುದ್ಧ ಕೇಂದ್ರ ಸಚಿವರಿಂದ ರಾಜಕೀಯ ಸಂಚು: ಪ್ರಿಯಾಂಕ್ ಖರ್ಗೆಆಯೋಗದ ಪರ ಬಿಜೆಪಿ ಬ್ಯಾಟಿಂಗ್; ಹೆಸರು ತೆಗೆದುಹಾಕುವುದು ಕಳ್ಳತನವಲ್ಲಎಸ್‌ಐಆರ್ ಪಟ್ಟಿ ತಿರಸ್ಕರಿಸಲು ರಾಜ್ಯ ಸರ್ಕಾರಕ್ಕೆ ಜನಪರ ಸಂಘಟನೆಗಳ ಒತ್ತಾಯಬೆಂಗಳೂರು–ಚೆನ್ನೈ ಬುಲೆಟ್ ರೈಲು ಘೋಷಣೆ!ರಾಮಮಂದಿರ ದೇಣಿಗೆ ಕಳ್ಳತನ : ವಿಚಾರಣೆ ಸ್ಥಳೀಯ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟನರಬಲಿ ಹೆಸರಿನಲ್ಲಿ 10 ವರ್ಷದ ಏಕೈಕ ಪುತ್ರನನ್ನೇ ಕೊಂದ ತಂದೆ!