Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಭಾರತೀಯ ವಾಯುಪಡೆಗೆ ನೂತನ ಸಾರಥಿ ಅಶುತೋಷ ದೀಕ್ಷಿತ

ನವದೆಹಲಿ, ಅ. 31: ಭಾರತೀಯ ವಾಯುಪಡೆಯ ಅತ್ಯುನ್ನತ ಹುದ್ದೆಯ ಜವಾಬ್ದಾರಿಯನ್ನು ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಶನಿವಾರ ವಹಿಸಿಕೊಂಡಿದ್ದಾರೆ. ಇದರೊಂದಿಗೆ ಅವರು ದೇಶದ ವಾಯುಪಡೆಯ 29ನೇ ಮುಖ್ಯಸ್ಥರಾಗಿದ್ದಾರೆ.

ಸುಮಾರು 43 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರ ಸ್ಥಾನಕ್ಕೆ ದೀಕ್ಷಿತ್ ನೇಮಕಗೊಂಡಿದ್ದಾರೆ. ಕೇಂದ್ರ ಸರ್ಕಾರದ ಆದೇಶದಂತೆ 2028ರ ಡಿಸೆಂಬರ್‌ವರೆಗೆ ಅವರು ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

1986ರ ಡಿಸೆಂಬರ್‌ನಲ್ಲಿ ಯುದ್ಧವಿಮಾನ ಪೈಲಟ್ ಆಗಿ ವಾಯುಪಡೆಗೆ ಪ್ರವೇಶಿಸಿದ ದೀಕ್ಷಿತ್, ನಾಲ್ಕು ದಶಕಗಳ ಸೇನಾ ವೃತ್ತಿಜೀವನದಲ್ಲಿ ವಿವಿಧ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. 3,500 ಗಂಟೆಗಳಿಗೂ ಹೆಚ್ಚು ವಿಮಾನ ಹಾರಾಟದ ಅನುಭವ ಹೊಂದಿರುವ ಅವರು, ಮಿರಾಜ್–2000, ಜಾಗ್ವಾರ್, ಹಾಕ್, ಮಿಗ್, ಐಎಲ್–78 ಹಾಗೂ ಸ್ವದೇಶಿ ತೇಜಸ್ ಸೇರಿದಂತೆ ಹಲವು ಬಗೆಯ ವಿಮಾನಗಳನ್ನು ಹಾರಿಸಿದ್ದಾರೆ.

ಕಾರ್ಗಿಲ್ ಸಂಘರ್ಷದ ಸಂದರ್ಭದಲ್ಲಿ ನಡೆದ ಆಪರೇಷನ್ ಸಫೇದ್ ಸಾಗರ್, ಆಪರೇಷನ್ ರಕ್ಷಕ್ ಮತ್ತು ಇತ್ತೀಚಿನ ಆಪರೇಷನ್ ಸಿಂಧೂರ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡ ಅನುಭವವೂ ಅವರಿಗಿದೆ.

ಆಧುನಿಕ ಯುದ್ಧವಿಮಾನಗಳ ಸಾಮರ್ಥ್ಯ ವೃದ್ಧಿ, ವಾಯು ರಕ್ಷಣಾ ವ್ಯವಸ್ಥೆಯ ಸುಧಾರಣೆ ಹಾಗೂ ಸ್ವದೇಶಿ ರಕ್ಷಣಾ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವ ಮಹತ್ವದ ಹೊಣೆಗಾರಿಕೆಗಳು ನೂತನ ವಾಯುಪಡೆ ಮುಖ್ಯಸ್ಥರ ಮುಂದಿವೆ.

Author
Samadarshi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಜಿನದತ್ತ ದೇಸಾಯಿ ನಿಧನಸಕ್ಕರೆ ಕನಿಷ್ಠ ಮಾರಾಟ ದರ 50 ರೂ.ಗೆ ಹೆಚ್ಚಿಸಲಿ: ಡಿ.ಕೆ. ಶಿವಕುಮಾರಘಟಪ್ರಭಾದಲ್ಲಿ ರೈತರ ಬಂದ್‌ಗೆ ಬೆಂಬಲ: ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತರೈತರ ಹೋರಾಟ ತೀವ್ರ: ಬೆಳಗಾವಿ, ಧಾರವಾಡ, ವಿಜಯಪುರದಲ್ಲಿ ಪ್ರತಿಭಟನೆದೀಪಾವಳಿ : ಪ್ರಯಾಣಿಕರಿಗಾಗಿ 2,600 ಹೆಚ್ಚುವರಿ ಬಸ್‌ಗಳ ವ್ಯವಸ್ಥೆಜ್ಞಾನೇಶ ಕುಮಾರ ವಿರುದ್ಧ ಜನತಾ ಮಹಾಭಿಯೋಗ: ಖರ್ಗೆ ನಿವಾಸದಲ್ಲಿ ಅಣಕು ಸಂಸತ್ಭಾರತೀಯ ವಾಯುಪಡೆಗೆ ನೂತನ ಸಾರಥಿ ಅಶುತೋಷ ದೀಕ್ಷಿತಶಿವಾನಂದ ನೀಲಣ್ಣನವರಗೆ ಇಡಿ ಬಿಗ್ ಶಾಕ್: ₹427 ಕೋಟಿ ಆಸ್ತಿ ಜಪ್ತಿಪಂಚತಾರಾ ಹೋಟೆಲ್ ಈಜುಕೊಳದಲ್ಲಿ ವಿದ್ಯುತ್ ಆಘಾತ: ಇಬ್ಬರು ವಿದೇಶಿಗರ ಸಾವುಹಾಲಿನ ದರ ಏರಿಕೆ ಅನಿವಾರ್ಯ: ಡಿ.ಕೆ. ಶಿವಕುಮಾರ ಸಮರ್ಥನೆ