ಬೆಳಗಾವಿ, ಸೆ 9 : (ಸಮದರ್ಶಿ ಸುದ್ದಿ) - ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ಹಾಗೂ ಬೆಳಗಾವಿಯ ಲೇಕ್ ವೀವ್ ಆಸ್ಪತ್ರೆಯ ವೈದ್ಯ ಡಾ. ಗಿರೀಶ ಸೋನವಾಲ್ಕರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.
ಬೆಳಗಾವಿ ನಗರದ ಲಕ್ಷ್ಮೀ ಟೆಕಡಿ ಪ್ರದೇಶದಲ್ಲಿರುವ ಡಾ. ಗಿರೀಶ್ ಸೋನವಾಲ್ಕರ ನಿವಾಸಕ್ಕೆ ಬುಧವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭೇಟಿ ನೀಡಿ ದಾಖಲೆಗಳು ಹಾಗೂ ಇತರ ಮಾಹಿತಿಗಳನ್ನು ಪರಿಶೀಲಿಸುತ್ತಿದ್ದಾರೆ.
ಅಧಿಕಾರಿಗಳ ತಂಡವು ನಿವಾಸದಲ್ಲಿ ಲಭ್ಯವಿರುವ ವಿವಿಧ ದಾಖಲೆಗಳು ಮತ್ತು ಸಂಬಂಧಿತ ಮಾಹಿತಿಗಳನ್ನು ಪರಿಶೀಲನೆ ನಡೆಸುತ್ತಿದ್ದು, ದಾಳಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.