LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಚಿರತೆ ಸೆರೆಗೆ ಡಾರ್ಟ ಗನ್ ಕಾರ್ಯಾಚರಣೆ

ಬೆಳಗಾವಿ : ನಗರದ ಕ್ಲಬ್ ರಸ್ತೆಯಲ್ಲಿ ಕಳೆದ ಸೋಮವಾರ ಪೊಲೀಸ್ ಮತ್ತು ಅರಣ್ಯ ಇಲಾಖೆ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡು ಪುನಃ ಗಾಲ್ಫ  ಕೋರ್ಸ ಮೈದಾನಕ್ಕೆ ನುಸುಳಿರುವ ಚಿರತೆ ಸೆರೆ ಹಿಡಿಯಲು ಇಂದು ಬುಧವಾರ ಆನೆಯ ಮೇಲೆ ಕುಳಿತು ಡಾರ್ಟ್ ಗನ್ ಕಾರ್ಯಾಚರಣೆ ನಡೆಸಲು ತಯಾರಿ ನಡೆಸಲಾಗಿದೆ.



ಮನುಷ್ಯ ಹೋಗಲು ಕಷ್ಟವೇನ್ನಬಹುದಾದ ಅರಣ್ಯ ಪ್ರದೇಶದಲ್ಲಿ ಆನೆಗಳು ಸಲೀಸಾಗಿ ಹೋಗುತ್ತವೆ ಹಾಗಾಗಿ ಆನೆ ಮೇಲೆ ಕುಳಿತ ಮಾಹುತರು ಚಿರತೆ ಪತ್ತೆಯಾದ ತಕ್ಷಣ ಕೆಳಗಿರುವ ಡಾರ್ಟ ಗನ್ ಹೊಂದಿರುವರಿಗೆ ಅದು ಇರುವ ಸ್ಥಳ ತೋರಿಸುವರು.



ಆಗ ಅರವಳಿಕೆ ಔಷಧಿ ಹೊಂದಿರುವ ಗುಂಡುಗಳಿಂದ ಲೋಡ್ ಆದ ಡಾರ್ಟ ಗನ್ ನಿಂದ ಕೆಂಪು ಲೇಸರ್ ಕಿರಣಗಳು ನಿಗದಿತ ಪ್ರಾಣಿಗಳ ಮೇಲೆ ಬೀಳುತ್ತವೆ. ಆಗ ಗುಂಡು ಹಾರಿಸಿದರೆ ಲೇಸರ್ ಕಿರಣ ತೋರಿಸಿದ ಸ್ಥಳಕ್ಕೆ ಬೀಳುತ್ತದೆ. ಪ್ರಾಣಿ ಪ್ರಜ್ಞೆ ಕಳೆದುಕೊಂಡು ಬಿದ್ದ ನಂತರ ಮುಂದಿನ ಕೆಲಸ ಪ್ರಾರಂಭಿಸಲು ಅನುಕೂಲವಾಗಲಿದೆ. ಇನ್ನು ಕಾರ್ಯಾಚರಣೆಗೆ ಆರು ಡಾರ್ಟ್ ಗನ್ ಬಳಸಲಾಗುವದು. ಹಿರಿಯ ಅಧಿಕಾರಿಗಳ ಅಪ್ಪಣೆ ದೊರೆತ ತಕ್ಷಣ ಕಾರ್ಯಾಚರಣೆ ಆರಂಭಿಸಲಾಗುವದು ಎಂದು ಎಸಿಎಫ್ ಮಲ್ಲಿನಾಥ ಕುಸನಾಳ ತಿಳಿಸಿದರು.







ಡಾರ್ಟ ಗನ್ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಈಗಾಗಲೇ ನಾಗರಹೊಳೆ ಸೇರಿದಂತೆ ಹಲವೆಡೆ ಯಶಸ್ವಿಯಾಗಿ ಮಾಡಿದೆ.



ಚಿರತೆಯನ್ನು ಸುಲಭವಾಗಿ ಡಾಟ್ ಮಾಡಲು ತಜ್ಞರ ತಂಡ ಸಿದ್ದವಿದ್ದು ಹಿರಿಯ ಅಧಿಕಾರಿಗಳ ಒಪ್ಪಿಗೆ ಸಿಕ್ಕ ತಕ್ಷಣ 'ಚಿರತೆ ಡಾರ್ಟ ಗನ್' ಕಾರ್ಯಾಚರಣೆ ಆರಂಭಗೊಳ್ಳಲಿದೆ ಎಂದು ಎಸಿಎಫ್ ಕುಸನಾಳ ತಿಳಿಸಿದರು.



ಬೆಳಗಾವಿಯಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಅವರು ಈ ವೇಳೆ ಮಧ್ಯಮಗಳೊಂದಿಗೆ ಮಾತನಾಡಿ, ಈ ಕಾರ್ಯಾಚರಣೆಯನ್ನು ಕೈಗೊಳ್ಳಲು ಡಾಟ್ ಮಾಡುವವರು ಹಾಗೂ ಆನೆಯ ಮಾವುತರು ಆಗಮಿಸಿದ್ದಾರೆ. 6 'ಡಾರ್ಟ್ ಗನ್‍' ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಕಾರ್ಯಾಚರಣೆಯಲ್ಲಿ 75 ಜನ ಸಿಬ್ಬಂದಿ ಭಾಗಿಯಾಗಿದ್ದಾರೆ.



ಆನೆಯ ಮೇಲೆ ಕುಳಿತು ಕಾರ್ಯಾಚರಣೆಯನ್ನು ಮಾಡುವ ಮಾವುತರು ಒಳ್ಳೆಯ ಅನುಭವ ಹೊಂದಿದ್ದಾರೆ ಎಂದು ಕುಸನಾಳ ತಿಳಿಸಿದರು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವ ಉಳಿಸಿದ ಮಾನವೀಯತೆ : ದಿಲ್ಲಿ ಅಗ್ನಿ ದುರಂತದಲ್ಲಿ ಮುಸ್ಲಿಂ ಯುವಕರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆರೌಡಿಸಂಗೆ ಕಠಿಣ ಕಡಿವಾಣ: ಪ್ರತಿ ತಾಲ್ಲೂಕಿನಲ್ಲಿ ವಿಶೇಷ ನಿಗಾ ಪಡೆರಾಹುಲ್‌ ಗಾಂಧಿ-ಸಿದ್ದರಾಮಯ್ಯ ರಿಮೋಟ್‌ ಕಂಟ್ರೋಲ್‌ ಸರಕಾರ : ಆರ್‌.ಅಶೋಕಉ.ಪ್ರ. ವಿಧಿವಿಜ್ಞಾನ ಪ್ರಯೋಗಾಲಯಗಳ ದುಸ್ಥಿತಿಯಿಂದ ಕೊಲೆ, ಅತ್ಯಾಚಾರ ಆರೋಪಿಗಳಿಗೆ ಜಾಮೀನು: ಅಲಹಾಬಾದ ಹೈಕೋರ್ಟ ತೀವ್ರ ಕಳವಳಬೆಳಗಾವಿ : ಆದಿತ್ಯರಾಜ ಕ್ಯಾಪಿಟಲ್ ಮೇಲೆ ಅಧಿಕಾರಿಗಳ ದಾಳಿಟ್ರಂಪ್‌ಗೆ ಹಿನ್ನಡೆ : ಇರಾನ್ ಯುದ್ಧ ಅಂತ್ಯಗೊಳಿಸಲು ಅಮೆರಿಕ ಪ್ರತಿನಿಧಿಗಳ ಸಭೆ ನಿರ್ಣಯ ಅಂಗೀಕಾರಕೇರಳಕ್ಕೆ ಮುಂಗಾರು ಪ್ರವೇಶ: ಭಾರಿ ಮಳೆ ಮುನ್ಸೂಚನೆಕಾಂಗ್ರೆಸ್ ಹೈಕಮಾಂಡಗೆ ಹರಿಪ್ರಸಾದ ಕೃತಜ್ಞತೆಡಿ.ಕೆ. ಶಿವಕುಮಾರ ಪದಗ್ರಹಣಕ್ಕೆ ಕ್ಷಣಗಣನೆಹಿಂದೂ ಮಹಿಳೆ ಅಪಹರಣದ ಸುಳ್ಳು ಕಥೆ ಹೆಣೆದು ಮುಸ್ಲಿಂ ಯುವಕರನ್ನು ಸಿಲುಕಿಸಲು ಯತ್ನ, ಆರೋಪಿ ಪರಾರಿ