ಬೆಳಗಾವಿ, ಜುಲೈ 23: ನಗರದ ಸ್ವಿಮ್ಮರ್ಸ್ ಕ್ಲಬ್‌ನ ಪ್ರತಿಭಾವಂತ ಈಜುಪಟು ಸ್ವಾತಿಕ್ ಪಾಟೀಲ ಅವರು ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಜುಲೈ 23ರಿಂದ ಆಗಸ್ಟ್ 2ರವರೆಗೆ ನಡೆಯಲಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವಕ್ಕೆ ಪಾತ್ರರಾಗಿದ್ದಾರೆ.
ಪುರುಷರ 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಎಸ್‌ಬಿ–9 ವಿಭಾಗದಲ್ಲಿ ಸ್ವಾತಿಕ್ ಅರ್ಹತೆ ಪಡೆದಿದ್ದು, ದೇಶದ ಪರವಾಗಿ ಸ್ಪರ್ಧಿಸಲಿದ್ದಾರೆ.
ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಮೂಲದ ಸ್ವಾತಿಕ್ ಪಾಟೀಲ ಅವರು ಅಲಹಾಬಾದ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ)ಯಿಂದ ಪದವಿ ಪಡೆದಿದ್ದಾರೆ. ಪ್ರಸ್ತುತ ಅವರು ಝೋಪಿಂಗ್ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸ್ವಾತಿಕ್ ಅವರಿಗೆ ಉಮೇಶ ಕಲಘಟಗಿ ಹಾಗೂ ಅಂಕುಶ ಕಣಬರಕರ ಅವರು ತರಬೇತಿ ನೀಡಿದ್ದು, ಅವರ ಸಾಧನೆಗೆ ಕ್ರೀಡಾಭಿಮಾನಿಗಳು ಹಾಗೂ ಈಜು ಸಮುದಾಯದಿಂದ ಅಭಿನಂದನೆಗಳು ವ್ಯಕ್ತವಾಗಿವೆ.