LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಬೆಳಗಾವಿ ಸಮೀಪ ಹೊತ್ತಿ ಉರಿದ ಕಾರು

ಬೆಳಗಾವಿ, ಫೆ. 15 : ರವಿವಾರ ಸಂಜೆ 6.30 ಗಂಟೆ ಸುಮಾರಿಗೆ ಬೆಳಗಾವಿ ಸಮೀಪದ ಅಷ್ಟೆ ಗ್ರಾಮದ ಬಳಿ ಗೋಕಾಕ–ಬೆಳಗಾವಿ ರಸ್ತೆಯಲ್ಲಿ ಬೆಳಗಾವಿ ಕಡೆಗೆ ಸಾಗುತ್ತಿದ್ದ ಡ್ಯಾಟ್ಸನ್ ರೆಡಿ-ಗೋ ಕಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾಯಿತು.



ಕಾರಿನಿಂದ ಮೊದಲು ಹೊಗೆ ಬರುತ್ತಿರುವುದನ್ನು ಗಮನಿಸಿದ ವಾಹನದಲ್ಲಿದ್ದವರು ತಕ್ಷಣ ಕೆಳಗೆ ಇಳಿದು ರಸ್ತೆ ಪಕ್ಕದಲ್ಲಿದ್ದ ಮನೆಯಿಂದ ನೀರು ತಂದು ಬೆಂಕಿ ಆರಿಸಲು ಪ್ರಯತ್ನಿಸಿದರಾದರೂ ಪ್ರಯತ್ನ ಫಲಕಾರಿಯಾಗದೇ ಹೊಗೆ ಜ್ವಾಲೆಯಾಗಿ ಮಾರ್ಪಟ್ಟು ಕೆಲವೇ ಕ್ಷಣಗಳಲ್ಲಿ ಇಡೀ ವಾಹನವನ್ನು ಆವರಿಸಿತು.


 


ಘಟನೆಯ ವೇಳೆ ವಾಹನದಲ್ಲಿದ್ದವರು ತಕ್ಷಣ ಹೊರಬಂದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST