LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

14 ವರ್ಷದ ನಿಶುಗೆ ಅತ್ಯಾಚಾರ ಬೆದರಿಕೆ: ತಕ್ಷಣ ರಕ್ಷಣೆಗೆ ಸುಪ್ರೀಂ ಕೋರ್ಟ ಸೂಚನೆ

ಹೊಸದಿಲ್ಲಿ, ಸೆ 10 : (ಸಮದರ್ಶಿ ಸುದ್ದಿ) - ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಅತ್ಯಾಚಾರದ ಬೆದರಿಕೆ ಹಾಕಲಾಗಿದೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂಬ ಆರೋಪಗಳನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ಬಾಲಕಿ ಮತ್ತು ಕುಟುಂಬಕ್ಕೆ ತಕ್ಷಣ ಅಗತ್ಯ ಭದ್ರತೆ ಒದಗಿಸುವಂತೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರ ಪೀಠ, ಅಪರಾಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ ಕಾರಣಕ್ಕೆ ಯಾರನ್ನಾಗಲಿ ಅಥವಾ ಅವರ ಕುಟುಂಬವನ್ನು ಬೆದರಿಸಿ ಮೌನವಾಗಿಸಲು ಅವಕಾಶ ನೀಡಲಾಗದು ಎಂದು ಹೇಳಿದೆ.

ನಿಶು ಅವರ ತಂದೆ ಸಂಜಯ್ ಮೇಲೆ ಸಿಜೆಪಿ ಪ್ರತಿಭಟನೆ ಸಂದರ್ಭದಲ್ಲಿ ಹಿಂದುತ್ವ ಕಾರ್ಯಕರ್ತ ಸ್ವತಂತ್ರ ಭಾರದ್ವಾಜ್ ಹಲ್ಲೆ ನಡೆಸಿದ್ದರು ಎಂಬ ಆರೋಪವಿದೆ. ಬಳಿಕ ಈ ಘಟನೆ ಕುರಿತು ಭಾರದ್ವಾಜ್ ಮಾತನಾಡಿರುವ ವಿಡಿಯೊ ವೈರಲ್ ಆಗಿತ್ತು. ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ ನಂತರ ತಮಗೆ ಅಶ್ಲೀಲ ಮತ್ತು ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ನಿಶು ಪೊಲೀಸರಿಗೆ ದೂರು ನೀಡಿದ್ದರು.

ನಿಶು ತಮ್ಮ ವಿರುದ್ಧ ಬಂದಿರುವ ಬೆದರಿಕೆ ಸಂದೇಶಗಳ ಸ್ಕ್ರೀನ್‌ಶಾಟ್‌ಗಳು ಹಾಗೂ ಮನೆ ಮೇಲೆ ಕಲ್ಲು ತೂರಾಟ ನಡೆದಿರುವುದಾಗಿ ಹೇಳಲಾದ ವಿಡಿಯೊಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

“ಮಗು ಎಂದರೆ ಮಗು. ಅದರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ ಸುಪ್ರೀಂ ಕೋರ್ಟ್, ನಿಶು ನೀಡಿರುವ ದೂರಿನ ಮೇಲೆ ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಬಾಲಕಿ ಮತ್ತು ಕುಟುಂಬಕ್ಕೆ ಒದಗಿಸಿರುವ ಭದ್ರತೆ, ದಾಖಲಾಗಿರುವ ಎಫ್‌ಐಆರ್‌ಗಳು ಹಾಗೂ ಆರೋಪಿಗಳ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಉತ್ತರ ಪ್ರದೇಶ ಮತ್ತು ದೆಹಲಿ ಸರ್ಕಾರಗಳಿಂದ ಸ್ಥಿತಿಗತಿ ವರದಿ ಕೇಳಿದೆ.

ನ್ಯಾಯಾಲಯದ ಮಧ್ಯಪ್ರವೇಶಕ್ಕೆ ನಿಶು ಆಜಾದ್ ಕೃತಜ್ಞತೆ ಸಲ್ಲಿಸಿದ್ದು, ನಿರ್ದೇಶನಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪ್ರಾಮಾಣಿಕವಾಗಿ ಪಾಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತೀಶ ಜಾರಕಿಹೊಳಿ, ಆಪ್ತರ ಮನೆಗಳಲ್ಲಿ ಇಡಿ ಶೋಧ ಅಂತ್ಯಸತೀಶ ಜಾರಕಿಹೊಳಿ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ: ಲಕ್ಷ್ಮಿ ಹೆಬ್ಬಾಳಕರಡಿ.ಕೆ. ಶಿವಕುಮಾರ ತಾಯಿಗೆ ನೋಟಿಸ್ ನೀಡಿಲ್ಲಮತ್ತೆ ಗಾಯಗೊಂಡ ಹರ್ಷಿತ ರಾಣಾ: ಅಫ್ಘಾನಿಸ್ತಾನ ಸರಣಿ, ಏಷ್ಯನ್ ಗೇಮ್ಸ್‌ನಿಂದ ಹೊರಕ್ಕೆಎಸ್‌ಐಆರ್‌ ಅಚ್ಚರಿ: ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!14 ವರ್ಷದ ನಿಶುಗೆ ಅತ್ಯಾಚಾರ ಬೆದರಿಕೆ: ತಕ್ಷಣ ರಕ್ಷಣೆಗೆ ಸುಪ್ರೀಂ ಕೋರ್ಟ ಸೂಚನೆ‘ನನ್ನನ್ನು ಪ್ರಚಾರದ ಸಾಧನವಾಗಿ ಬಳಸಲಾಗಿದೆ’: ಭಾರತ ಸರ್ಕಾರದ ವಿರುದ್ಧ ವಿಜಯ ಮಲ್ಯ ಆರೋಪಉಳಿದ ಭರವಸೆಗಳ ಈಡೇರಿಕೆಗೆ ವೇಗ ನೀಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆಎಸ್‌ಐಆರ್ : ಡಿ.ಕೆ. ಶಿವಕುಮಾರ ತಾಯಿ ಸೇರಿ ಹಲವು ಗಣ್ಯರಿಗೆ ನೋಟಿಸ್ಗರ್ಬಾದಲ್ಲಿ ಮುಸ್ಲಿಮರಿಗೆ ನಿಷೇಧ ಸರಿಯಲ್ಲ; ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡಿದೆ: ಅಠಾವಳೆ