LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಡಿ.ಕೆ. ಶಿವಕುಮಾರ ತಾಯಿಗೆ ನೋಟಿಸ್ ನೀಡಿಲ್ಲ

ಬೆಂಗಳೂರು, ಸೆ 10 : (ಸಮದರ್ಶಿ ಸುದ್ದಿ) - ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ತಾಯಿ ಗೌರಮ್ಮ ಅವರಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಡಿ ಯಾವುದೇ ನೋಟಿಸ್ ನೀಡಿಲ್ಲ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕಾರ ಸ್ಪಷ್ಟಪಡಿಸಿದ್ದಾರೆ.

ಕನಕಪುರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 249ರ ಮತದಾರರ ಪಟ್ಟಿಯಲ್ಲಿ ‘ಗೌರಮ್ಮ’ ಹೆಸರಿನ ಮೂವರು ಮತದಾರರಿದ್ದಾರೆ. ಈ ಪೈಕಿ ಕ್ರಮ ಸಂಖ್ಯೆ 01ರಲ್ಲಿರುವ ಗೌರಮ್ಮ ಅವರು ಮುಖ್ಯಮಂತ್ರಿ ಶಿವಕುಮಾರ ಅವರ ತಾಯಿಯಾಗಿದ್ದು, ಅವರಿಗೆ ನೋಟಿಸ್ ನೀಡಿಲ್ಲ. ಅದೇ ಹೆಸರಿನ ಕ್ರಮ ಸಂಖ್ಯೆ 02 ಮತ್ತು 03ರಲ್ಲಿರುವ ಇಬ್ಬರು ಮತದಾರರಿಗೆ ಮಾತ್ರ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಹೆಸರಿನ ಸಾಮ್ಯತೆಯಿಂದ ಉಂಟಾದ ಗೊಂದಲದಿಂದ ಮುಖ್ಯಮಂತ್ರಿ ಅವರ ತಾಯಿಗೂ ನೋಟಿಸ್ ನೀಡಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ತಪ್ಪಾಗಿ ವರದಿಯಾಗಿದೆ ಎಂದು ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತೀಶ ಜಾರಕಿಹೊಳಿ, ಆಪ್ತರ ಮನೆಗಳಲ್ಲಿ ಇಡಿ ಶೋಧ ಅಂತ್ಯಸತೀಶ ಜಾರಕಿಹೊಳಿ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ: ಲಕ್ಷ್ಮಿ ಹೆಬ್ಬಾಳಕರಡಿ.ಕೆ. ಶಿವಕುಮಾರ ತಾಯಿಗೆ ನೋಟಿಸ್ ನೀಡಿಲ್ಲಮತ್ತೆ ಗಾಯಗೊಂಡ ಹರ್ಷಿತ ರಾಣಾ: ಅಫ್ಘಾನಿಸ್ತಾನ ಸರಣಿ, ಏಷ್ಯನ್ ಗೇಮ್ಸ್‌ನಿಂದ ಹೊರಕ್ಕೆಎಸ್‌ಐಆರ್‌ ಅಚ್ಚರಿ: ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!14 ವರ್ಷದ ನಿಶುಗೆ ಅತ್ಯಾಚಾರ ಬೆದರಿಕೆ: ತಕ್ಷಣ ರಕ್ಷಣೆಗೆ ಸುಪ್ರೀಂ ಕೋರ್ಟ ಸೂಚನೆ‘ನನ್ನನ್ನು ಪ್ರಚಾರದ ಸಾಧನವಾಗಿ ಬಳಸಲಾಗಿದೆ’: ಭಾರತ ಸರ್ಕಾರದ ವಿರುದ್ಧ ವಿಜಯ ಮಲ್ಯ ಆರೋಪಉಳಿದ ಭರವಸೆಗಳ ಈಡೇರಿಕೆಗೆ ವೇಗ ನೀಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆಎಸ್‌ಐಆರ್ : ಡಿ.ಕೆ. ಶಿವಕುಮಾರ ತಾಯಿ ಸೇರಿ ಹಲವು ಗಣ್ಯರಿಗೆ ನೋಟಿಸ್ಗರ್ಬಾದಲ್ಲಿ ಮುಸ್ಲಿಮರಿಗೆ ನಿಷೇಧ ಸರಿಯಲ್ಲ; ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡಿದೆ: ಅಠಾವಳೆ