LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಪ್ರಧಾನಿ ನಿವಾಸದ ಎದುರಿನ ಪ್ರತಿಭಟನೆ ಖಂಡಿಸಿ ಬಿಜೆಪಿಯಿಂದ ಮೆರವಣಿಗೆ

ಧಾರವಾಡ, ಜುಲೈ 23: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿವಾಸದ ಎದುರು ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದೆ ಎಂದು ಆರೋಪಿಸಿ, ಅದನ್ನು ಖಂಡಿಸಿ ಬಿಜೆಪಿ ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಘಟಕದ ವತಿಯಿಂದ ಗುರುವಾರ ಧಾರವಾಡದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.

ಜಿಲ್ಲಾ ಬಿಜೆಪಿ ಕಚೇರಿಯಿಂದ ಆರಂಭವಾದ ಮೆರವಣಿಗೆಯಲ್ಲಿ ಪಕ್ಷದ ಮುಖಂಡರು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಹಕ್ಕಾಗಿದ್ದರೂ, ಹಿಂಸಾಚಾರ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡುವುದು ಖಂಡನೀಯ ಎಂದು ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಹೇಳಿದರು.

ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹಿಂಸೆಯ ಮೂಲಕ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಶಾಂತಿಯುತ ಹಾಗೂ ಸಂವಿಧಾನಬದ್ಧ ಹೋರಾಟವೇ ಪ್ರಜಾಪ್ರಭುತ್ವದ ಮೌಲ್ಯ ಎಂದು ಮಾಜಿ ಮಹಾಪೌರ ಈರೇಶ ಅಂಚಟಗೇರಿ ಹೇಳಿದರು.

ಪ್ರತಿಭಟನೆಯಲ್ಲಿ ಜಯತೀರ್ಥ ಕಟ್ಟಿ, ಸೀಮಾ ಮಸೂತಿ, ನಿಂಗಪ್ಪ ಸುತಗಟ್ಟಿ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದಲ್ಲಿ ಶುದ್ಧ ಪೆಟ್ರೋಲ್ ಮರುಪೂರೈಕೆ ಇಲ್ಲ; ಇ–20 ಮುಂದುವರಿಕೆನೀಟ್‌ ಅಕ್ರಮ ವಿರುದ್ಧ ಮಹಾರಾಷ್ಟ್ರ ಬಂದ್‌ಗೆ ವ್ಯಾಪಕ ಪ್ರತಿಕ್ರಿಯೆ; ಸಾವಿರಾರು ಕಾರ್ಯಕರ್ತರ ವಶ, ಹಲವು ಕಡೆ ಪ್ರತಿಭಟನೆಪ್ರಧಾನಿ ನಿವಾಸದ ಪ್ರತಿಭಟನೆ ಬದಲು ವಿದ್ಯಾರ್ಥಿಗಳ ಜೊತೆ ನಿಲ್ಲಬೇಕಿತ್ತು: ಕಾಂಗ್ರೆಸ್ ನಡೆ ಬಗ್ಗೆ ವಾಂಗಚುಕ್‌ ಪತ್ನಿ ಟೀಕೆಸಿಜೆಪಿ ಪ್ರತಿಭಟನೆಗೆ ಅಡ್ಡಿಪಡಿಸಲು ಬಿಜೆಪಿಯಿಂದ ‘ಗೂಂಡಾಗಳ’ ಬಳಕೆ: ಅಭಿಜೀತ ದೀಪ್ಕೆ ಆರೋಪನೀಟ್ ವಿವಾದಕ್ಕೆ ಉಭಯ ಸದನ ಕಲಾಪ ನಾಲ್ಕನೇ ದಿನವೂ ಮುಂದೂಡಿಕೆಮಳೆ ಹನಿಗಳೊಂದಿಗೆ ಅರಳಿದ ಅಳ್ನಾವರ: ಹಸಿರಿನ ಸೊಬಗು, ರೈತರ ಸಂಭ್ರಮಪ್ರಧಾನಿ ನಿವಾಸದ ಎದುರಿನ ಪ್ರತಿಭಟನೆ ಖಂಡಿಸಿ ಬಿಜೆಪಿಯಿಂದ ಮೆರವಣಿಗೆಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಬೆಳಗಾವಿಯ ಸ್ವಾತಿಕ್ ಪಾಟೀಲ ಆಯ್ಕೆನೀಟ್‌ ಅಕ್ರಮ ಖಂಡಿಸಿ ಬೆಳಗಾವಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ; ಪ್ರಧಾನ್‌ ರಾಜೀನಾಮೆಗೆ ಆಗ್ರಹವಿದ್ಯಾರ್ಥಿಗಳ ರಕ್ಷಣೆಗೆ ಪೊಲೀಸ್ ವ್ಯಾನ್‌ ತಡೆದ ಯುವತಿ; ರಿಯಾ ಅಹಿರ್‌ ಧೈರ್ಯಕ್ಕೆ ಮೆಚ್ಚುಗೆ