LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಶಿವ ಸೇನೆ ಕಾರ್ಯಕರ್ತರಿಂದ ಕರ್ನಾಟಕದ ಬಸ್ಸಿಗೆ ಜೈ ಮಹಾರಾಷ್ಟ್ರ ಸ್ಟಿಕ್ಕರ್

ಬೆಳಗಾವಿ: ಕೊಲ್ಲಾಪುರದಲ್ಲಿ ಶಿವ ಸೇನೆಯ ಕಾರ್ಯಕರ್ತರು ಕರ್ನಾಟಕದ ಬಸ್ಸಿಗೆ ಜೈ ಮಹಾರಾಷ್ಟ್ರ ಎಂಬ ಸ್ಟಿಕ್ಕರ್ ಅಂಟಿಸಿದ್ದಾರೆ. ಪುಣೆಯಿಂದ ಹಳಿಯಾಳಕ್ಕೆ ಹೊರಟಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಜೈ ಮಹಾರಾಷ್ಟ್ರ ಸ್ಟಿಕ್ಕರ್ ಅಂಟಿಸಿರುವ ಈ ಘಟನೆ ಸೋಮವಾರ ನಡೆದಿದೆ.



ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನಕ್ಕೆ ಪರ್ಯಾಯವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮಹಾಮೇಳಾವ ಹಮ್ಮಿಕೊಂಡಿದ್ದು ಇದಕ್ಕೆ ಬೆಳಗಾವಿ ಜಿಲ್ಲಾಡಳಿತ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ಕೊಲ್ಲಾಪುರದಲ್ಲಿ ಶಿವ ಸೇನೆ ಕಾರ್ಯಕರ್ತರು ಅಲ್ಲಿನ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ತಡೆದು ಜೈ ಮಹಾರಾಷ್ಟ್ರ ಸ್ಟಿಕರ್ ಅಂಟಿಸಿದರು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST