LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
International News

ಅಶಾಂತಿಗೆ ಇಸ್ರೇಲ್ ಆಕ್ರಮಣವೇ ಕಾರಣ: 4 ರಾಷ್ಟ್ರಗಳ ಜಂಟಿ ಹೇಳಿಕೆ

ಇಸ್ತಾಂಬುಲ್: ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಸಂಘರ್ಷ ಹಾಗೂ ಪ್ರಾದೇಶಿಕ ಅಸ್ಥಿರತೆಗೆ ಇಸ್ರೇಲ್‌ನ ಆಕ್ರಮಣಕಾರಿ ನೀತಿಗಳೇ ಪ್ರಮುಖ ಕಾರಣವೆಂದು ಈಜಿಪ್ಟ್, ಸೌದಿ ಅರೇಬಿಯ, ತುರ್ಕಿಯೆ ಮತ್ತು ಪಾಕಿಸ್ತಾನ ಆರೋಪಿಸಿವೆ. ಈ ನಾಲ್ಕು ರಾಷ್ಟ್ರಗಳ ವಿದೇಶಾಂಗ ಸಚಿವರು ಜಂಟಿ ಹೇಳಿಕೆ ಬಿಡುಗಡೆ ಮಾಡಿ, ಪ್ರಾದೇಶಿಕ ಶಾಂತಿ ಸ್ಥಾಪನೆಗೆ ರಾಜತಾಂತ್ರಿಕ ಪ್ರಯತ್ನಗಳನ್ನು ಚುರುಕುಗೊಳಿಸುವಂತೆ ಕರೆ ನೀಡಿದ್ದಾರೆ.

ಇಸ್ತಾಂಬುಲ್‌ನಲ್ಲಿ ನಡೆದ ನಾಲ್ಕು ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯ ಬಳಿಕ ಪ್ರಕಟಿಸಲಾದ ಹೇಳಿಕೆಯಲ್ಲಿ, ಇಸ್ರೇಲ್‌ನ ಕ್ರಮಗಳು ಮಧ್ಯಪ್ರಾಚ್ಯಕ್ಕೆ ಮಾತ್ರ ಸೀಮಿತವಾಗದೆ ಇತರ ಪ್ರದೇಶಗಳಲ್ಲಿಯೂ ಅಸ್ಥಿರತೆಗೆ ಕಾರಣವಾಗಿವೆ. ಅದರ ನೀತಿಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನ್ಯಾಯದ ಭಾವನೆ ಹೆಚ್ಚುತ್ತಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಫೆಲೆಸ್ತೀನ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 1967ರ ಪೂರ್ವದ ಗಡಿಗಳನ್ನು ಆಧರಿಸಿ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪಿಸಬೇಕು. ಪೂರ್ವ ಜೆರುಸಲೆಮ್ ಅದರ ರಾಜಧಾನಿಯಾಗಿರಬೇಕು. ಇಸ್ರೇಲ್ ಮತ್ತು ಫೆಲೆಸ್ತೀನ್ ಪ್ರತ್ಯೇಕ ರಾಷ್ಟ್ರಗಳಾಗಿ ಶಾಂತಿಯುತ ಸಹಬಾಳ್ವೆ ನಡೆಸುವ ದ್ವಿರಾಷ್ಟ್ರ ಪರಿಹಾರವನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಯೆಮನ್‌ನ ಹೌತಿ ಬಂಡುಕೋರರು ನಡೆಸುತ್ತಿರುವ ಸೇನಾ ಕಾರ್ಯಾಚರಣೆಗಳನ್ನೂ ನಾಲ್ಕೂ ರಾಷ್ಟ್ರಗಳು ಖಂಡಿಸಿವೆ. ಸೌದಿ ಅರೇಬಿಯದ ಭದ್ರತೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಸಚಿವರು, ಹೌತಿಗಳು ಸಶಸ್ತ್ರ ಸಂಘರ್ಷವನ್ನು ಕೈಬಿಟ್ಟು ರಾಜಕೀಯ ಮಾತುಕತೆಗೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಸಚಿವರು, ಸೇನಾ ಕಾರ್ಯಾಚರಣೆಗಳ ಬದಲು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಪ್ರತಿಪಾದಿಸಿದ್ದಾರೆ.

ಜಾಗತಿಕ ತೈಲ ಸಾಗಣೆ ಹಾಗೂ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಅತ್ಯಂತ ಮಹತ್ವದ್ದಾಗಿರುವ ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಯಾವುದೇ ಅಡ್ಡಿಯಾಗಬಾರದು. ಕಾನೂನುಬದ್ಧ ನೌಕಾಯಾನಕ್ಕೆ ಅಡ್ಡಿಪಡಿಸುವ ಕ್ರಮಗಳನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಾದೇಶಿಕ ಸಂಘರ್ಷಗಳಿಗೆ ರಾಜಕೀಯ ಪರಿಹಾರ ಕಂಡುಕೊಳ್ಳುವುದು, ಫೆಲೆಸ್ತೀನ್ ಜನರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಸಮುದ್ರ ವ್ಯಾಪಾರದ ಸುರಕ್ಷತೆ ಖಚಿತಪಡಿಸುವ ಅಗತ್ಯವನ್ನು ನಾಲ್ಕೂ ರಾಷ್ಟ್ರಗಳು ಒತ್ತಿಹೇಳಿವೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಿನಿ ರಜನೀಶ ಸೇರಿ 6 ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಹಕ್ಕುಚ್ಯುತಿ ಕ್ರಮಕ್ಕೆ ಆಗ್ರಹಅಶಾಂತಿಗೆ ಇಸ್ರೇಲ್ ಆಕ್ರಮಣವೇ ಕಾರಣ: 4 ರಾಷ್ಟ್ರಗಳ ಜಂಟಿ ಹೇಳಿಕೆವಿದ್ಯಾರ್ಥಿಗಳ ಹೋರಾಟಕ್ಕೆ ನಾಸಿರುದ್ದೀನ್ ಶಾ, ಪಾಯಲ್ ಕಪಾಡಿಯಾ ಬೆಂಬಲಕಾನೂನಿನ ಭಯವೇ ಇಲ್ಲವೇ?: ಉದ್ರಿ ನೀಡಲು ನಿರಾಕರಿಸಿದ್ದಕ್ಕೆ ಹೋಟೆಲ್ ಮಾಲಕನ ಹತ್ಯೆಗೋಲ್ಡನ್ ಚಾರಿಯಟ್ ರೈಲಿಗೆ ಮರುಚಾಲನೆ: ಟಿಕೆಟ್ ದರ 3.5 ಲಕ್ಷದಿಂದ 4.4 ಲಕ್ಷ ರೂ.ಪೆಲೆಟ್ ಗನ್ ಬಳಕೆ, ಮಹಿಳೆಯರಿಗೆ ಕಿರುಕುಳ : ಸುಪ್ರೀಂ ಕೋರ್ಟ ಸಮಿತಿಯಿಂದ ವಿಚಾರಣೆಸಿದ್ದರಾಮಯ್ಯ ಕುಟುಕು ಕಾರ್ಯಾಚರಣೆ : ದೆಹಲಿಯ ರಿತೇಶ ಪಾಂಡೆ ಬಂಧನಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಸಿಲುಕಿ ಯುವಕನ ಮುಖಕ್ಕೆ ಗಂಭೀರ ಗಾಯಚಿರತೆ ಸೆರೆ ವೇಳೆ ಅರಣ್ಯ ಇಲಾಖೆ ವೈದ್ಯರ ಮೇಲೆ ಹಲ್ಲೆ: 15 ಮಂದಿ ವಿರುದ್ಧ ಪ್ರಕರಣಸರ್ಕಾರವನ್ನು ಪ್ರಶ್ನಿಸಿದರೆ ಶಾಂತಿ ಭಂಗವೇ?: ಬಾಂಡ್‌ಗೆ ಸಹಿ ಹಾಕಲು ನೇಹಾ ಬೋರಾ ನಿರಾಕರಣೆ