LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
National News

ಎಪ್‌ಸ್ಟೀನ್ ಜೊತೆ ಹರ್ದೀಪ್ ಪುರಿ ಏಕಾಂಗಿ ಭೇಟಿ: ಫೋಟೊ ಬಿಡುಗಡೆ ಮಾಡಿ ಪ್ರತಿಪಕ್ಷಗಳ ಪ್ರಶ್ನೆ

ಹೊಸದಿಲ್ಲಿ, ಅ. 21: ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಕುಖ್ಯಾತಿ ಪಡೆದಿದ್ದ ಅಮೆರಿಕದ ಉದ್ಯಮಿ ಜೆಫ್ರಿ ಎಪ್‌ಸ್ಟೀನ್ ಅವರೊಂದಿಗೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಏಕಾಂಗಿಯಾಗಿ ಕಾಣಿಸಿಕೊಂಡಿರುವ ಫೋಟೊಗಳು ಬಹಿರಂಗವಾಗಿದ್ದು, ರಾಜಕೀಯ ವಿವಾದಕ್ಕೆ ಕಾರಣವಾಗಿವೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎನ್‌ಸಿಪಿ ಹಾಗೂ ಶಿವಸೇನೆ ನಾಯಕರು ಭೇಟಿಯ ಉದ್ದೇಶದ ಕುರಿತು ಸ್ಪಷ್ಟನೆ ಕೇಳಿದ್ದಾರೆ.

ಎಪ್‌ಸ್ಟೀನ್ ಅವರನ್ನು ಕೇವಲ ಅಧಿಕೃತ ನಿಯೋಗದ ಸದಸ್ಯನಾಗಿ ಭೇಟಿಯಾಗಿದ್ದೆ ಎಂಬ ಪುರಿ ಅವರ ಹಿಂದಿನ ಹೇಳಿಕೆಗೆ ಈಗ ಬಹಿರಂಗವಾಗಿರುವ ಫೋಟೊಗಳು ವ್ಯತಿರಿಕ್ತವಾಗಿವೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇಟ್, ಎಪ್‌ಸ್ಟೀನ್ ಅವರನ್ನು ಎಂದಿಗೂ ಏಕಾಂಗಿಯಾಗಿ ಭೇಟಿಯಾಗಿಲ್ಲ ಎಂದು ಹೇಳಿದ್ದ ಪುರಿ ಈಗ ದೇಶದ ಜನತೆಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಸುತ್ತಮುತ್ತ ಯಾವ ರೀತಿಯ ವ್ಯಕ್ತಿಗಳನ್ನು ಇರಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ಎಪ್‌ಸ್ಟೀನ್ ಅವರನ್ನು ನಿಯೋಗದೊಂದಿಗೆ ಕೇವಲ 3 ಅಥವಾ 4 ಬಾರಿ ಭೇಟಿಯಾಗಿದ್ದಾಗಿ ಪುರಿ ಹೇಳಿದ್ದರು. ಹಾಗಾದರೆ ಈಗಿನ ಫೋಟೊಗಳಲ್ಲಿ ಉಳಿದ ನಿಯೋಗದ ಸದಸ್ಯರು ಎಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಸಚಿವರ ಹಿಂದಿನ ವಿಡಿಯೊ ಹೇಳಿಕೆಯನ್ನೂ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಎನ್‌ಸಿಪಿ ಶರದ್ ಪವಾರ್ ಬಣದ ವಕ್ತಾರ ಅನೀಶ ಗಾವಂಡೆ, ಈ ಫೋಟೊಗಳು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದಿದ್ದಾರೆ. ಪುರಿ ಅವರು ರಾಜತಾಂತ್ರಿಕ ಹುದ್ದೆಯಲ್ಲಿದ್ದಾಗ ಎಪ್‌ಸ್ಟೀನ್ ಅವರನ್ನು ಭೇಟಿಯಾಗಿದ್ದರೂ ಅದರ ಉದ್ದೇಶ, ಚರ್ಚೆಯ ವಿಷಯ ಹಾಗೂ ಭೇಟಿಯ ಸ್ವರೂಪವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎಪ್‌ಸ್ಟೀನ್ ವಿರುದ್ಧದ ಅಪರಾಧ ಆರೋಪಗಳ ಬಗ್ಗೆ ಪುರಿ ಅವರಿಗೆ ಅಂದು ಮಾಹಿತಿ ಇತ್ತೇ ಎಂಬುದನ್ನೂ ಸ್ಪಷ್ಟಪಡಿಸಬೇಕು. ರಾಜತಾಂತ್ರಿಕ ಅಗತ್ಯದ ನೆಪದಲ್ಲಿ ಇಂತಹ ಭೇಟಿಗಳ ವಿವರಗಳನ್ನು ಮುಚ್ಚಿಡಬಾರದು ಎಂದು ಗಾವಂಡೆ ಹೇಳಿದ್ದಾರೆ.

ಶಿವಸೇನೆ ಉದ್ಧವ್ ಬಣದ ಸಂಸದ ಸಂಜಯ ರಾವತ್, ಪುರಿ ಅವರು ಎಪ್‌ಸ್ಟೀನ್ ಅವರನ್ನು ಏಕಾಂಗಿಯಾಗಿ ಭೇಟಿಯಾಗುವ ಅಗತ್ಯವೇನಿತ್ತು? ಆ ಭೇಟಿಯಲ್ಲಿ ಯಾರ ಸಂದೇಶವನ್ನು ತಲುಪಿಸಲಾಗುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಫೆಬ್ರವರಿಯಲ್ಲಿ ಸ್ಪಷ್ಟನೆ ನೀಡಿದ್ದ ಹರ್ದೀಪ್ ಪುರಿ, ಎಪ್‌ಸ್ಟೀನ್ ಅವರೊಂದಿಗಿನ ಸಂಪರ್ಕ ಸಂಪೂರ್ಣವಾಗಿ ವೃತ್ತಿಪರವಾಗಿತ್ತು ಎಂದು ಹೇಳಿದ್ದರು. ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ ನಂತರ ಹಾಗೂ 2017ರಲ್ಲಿ ಕೇಂದ್ರ ಸಚಿವರಾಗುವ ಮೊದಲು ಈ ಭೇಟಿಗಳು ನಡೆದಿದ್ದವು ಎಂದು ವಿವರಿಸಿದ್ದರು.

ಅಂತಾರಾಷ್ಟ್ರೀಯ ಶಾಂತಿ ಸಂಸ್ಥೆಗೆ ಸಂಬಂಧಿಸಿದ ನಿಯೋಗದ ಸದಸ್ಯನಾಗಿ ಎಪ್‌ಸ್ಟೀನ್ ಅವರನ್ನು 3 ಅಥವಾ ಗರಿಷ್ಠ 4 ಬಾರಿ ಭೇಟಿಯಾಗಿದ್ದೆ. ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದ ಟೆರ್ಜೆ ರೋಡ್-ಲಾರ್ಸೆನ್ ಅವರಿಗೆ ಎಪ್‌ಸ್ಟೀನ್ ಪರಿಚಿತರಾಗಿದ್ದರು. ಅವರ ಮೂಲಕವೇ ಭೇಟಿಗಳು ನಡೆದಿದ್ದವು ಎಂದು ಪುರಿ ತಿಳಿಸಿದ್ದರು.

ಎಪ್‌ಸ್ಟೀನ್ ವಿರುದ್ಧದ ಲೈಂಗಿಕ ಅಪರಾಧ ಆರೋಪಗಳಿಗೂ ತಮ್ಮ ವೃತ್ತಿಪರ ಭೇಟಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದರು.

ಆದರೆ ಈಗ ಬಹಿರಂಗವಾಗಿರುವ ಫೋಟೊಗಳು ಪುರಿ ಅವರ ಹಿಂದಿನ ವಿವರಣೆಯ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಭೇಟಿಯ ಸಂದರ್ಭ, ಚರ್ಚೆಯ ವಿಷಯ ಹಾಗೂ ನಿಯೋಗದ ಇತರ ಸದಸ್ಯರ ಉಪಸ್ಥಿತಿಯ ಕುರಿತು ಸಂಪೂರ್ಣ ಮಾಹಿತಿ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿವೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಲಿಕೇರಿ ಕೆರೆಯಲ್ಲಿ ಮುಳುಗಿ ಯುವಕನ ಸಾವುಚುನಾವಣಾ ಆಯುಕ್ತರಿಗೆ ಕಾನೂನು ರಕ್ಷಣೆ ರದ್ದುಪಡಿಸಿ, ಜ್ಞಾನೇಶ ಕುಮಾರ ವಜಾಗೊಳಿಸಿ: ಖರ್ಗೆ ಆಗ್ರಹಬುಲೆರೋ–ಟ್ರ್ಯಾಕ್ಟರ್ ಅಪಘಾತ: ಯುವಕ ಸಾವುಪೊಲೀಸರು ಎಲ್ಲರನ್ನೂ ಸಮಾನವಾಗಿ ಕಾಣಬೇಕು: ಡಿ.ಕೆ. ಶಿವಕುಮಾರಅಜರುದ್ದೀನ್ ಅವರ 28 ವರ್ಷಗಳ ದಾಖಲೆ ಮುರಿದ ಬವುಮಾಮೈಸೂರು ದಸರಾ ಜಂಬೂಸವಾರಿಗೆ ಚಾಲನೆ: ಚಾಮುಂಡೇಶ್ವರಿಗೆ ಡಿ.ಕೆ. ಶಿವಕುಮಾರ ಪುಷ್ಪಾರ್ಚನೆಎಪ್‌ಸ್ಟೀನ್ ಜೊತೆ ಹರ್ದೀಪ್ ಪುರಿ ಏಕಾಂಗಿ ಭೇಟಿ: ಫೋಟೊ ಬಿಡುಗಡೆ ಮಾಡಿ ಪ್ರತಿಪಕ್ಷಗಳ ಪ್ರಶ್ನೆಸಾಂವಿಧಾನಿಕ ಕರ್ತವ್ಯಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಿ: ರಾಜ್ಯಪಾಲರಿಗೆ ರಮೇಶ್ ಬಾಬು ಪತ್ರತೃಣಮೂಲ ತೊರೆದು ಎನ್‌ಡಿಎ ಬೆಂಬಲಿಸಿದ ಯೂಸುಫ ಪಠಾಣಗೆ ₹20.53 ಕೋಟಿ ಮೌಲ್ಯದ ಜಮೀನುಎಸ್‌ಐಆರ್‌ ಪ್ರಕ್ರಿಯೆಯಲ್ಲಿ 4 ನಿಯಮ ಸಡಿಲಿಸಿದ ಚುನಾವಣಾ ಆಯೋಗ