ಅಥಣಿ, ಅ. 21 (ಸಮದರ್ಶಿ ಸುದ್ದಿ): ಬೆಳಗಾವಿ ಜಿಲ್ಲೆಯ ಅಥಣಿ ಸಮೀಪ ಎರಡು ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತ ಯುವಕನೊಬ್ಬನ ಜೀವ ಬಲಿ ಪಡೆದಿದೆ.
ಅಥಣಿ ಪಟ್ಟಣದ ಶಂಕರ ಪ್ರಕಾಶ ಪೂಜಾರಿ (32) ಮೃತಪಟ್ಟ ದುರ್ದೈವಿ. ಅಥಣಿ–ತಂಗಡಿ ರಸ್ತೆಯಲ್ಲಿ ಬುಲೆರೋ ಹಾಗೂ ಟ್ರ್ಯಾಕ್ಟರ್ ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಬುಲೆರೋ ವಾಹನ ಜಖಂಗೊಂಡಿದ್ದು, ಅದರ ಚಾಲಕ ಶಂಕರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಥಣಿ ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.