LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಆರ್ಥಿಕ ವೈಫಲ್ಯಕ್ಕೆ ಉದ್ಯಮಿಗಳ ಮೇಲೆ ಗೂಬೆ ಕೂರಿಸಬೇಡಿ: ಕಾಂಗ್ರೆಸ್

ಹೊಸದಿಲ್ಲಿ, ನ. 20: ದೇಶದ ಆರ್ಥಿಕ ವೈಫಲ್ಯಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಕೈಗಾರಿಕೋದ್ಯಮಿಗಳನ್ನು ದೂಷಿಸುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿಯಿಂದ ಕಂಗಾಲಾಗಿರುವ ಅವರು, ಇತರರನ್ನು ಹೊಣೆ ಮಾಡುವ ಬದಲು ತಮ್ಮ ಸರಕಾರದ ನೀತಿಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದೆ.

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ ವಾರ್ಷಿಕ ಸಭೆಯಲ್ಲಿ ಮೋದಿ ನೀಡಿದ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ, ಕಳೆದ 12 ವರ್ಷಗಳಲ್ಲಿ ಹಣದುಬ್ಬರ ನಿಯಂತ್ರಣ, ಉದ್ಯೋಗ ಸೃಷ್ಟಿ ಹಾಗೂ ಖಾಸಗಿ ಹೂಡಿಕೆ ಹೆಚ್ಚಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.

‘ಕೇವಲ ಭಾಷಣ ಮಾಡುವುದರಿಂದ ಅಥವಾ ಉದ್ಯಮಿಗಳಿಗೆ ಸಲಹೆ ನೀಡುವುದರಿಂದ ಆರ್ಥಿಕತೆ ಸುಧಾರಿಸುವುದಿಲ್ಲ. ಅದಕ್ಕೆ ಸಮರ್ಥ ನೀತಿಗಳು, ವಿಶ್ವಾಸದ ವಾತಾವರಣ ಮತ್ತು ಜವಾಬ್ದಾರಿಯುತ ಆಡಳಿತ ಅಗತ್ಯ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

2024ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ ‘ನ್ಯಾಯ ಪತ್ರ’ದಲ್ಲಿ ಆದಾಯ ಸ್ಥಗಿತ, ಉದ್ಯೋಗಾವಕಾಶಗಳ ಕೊರತೆ, ಖಾಸಗಿ ಹೂಡಿಕೆ ಕುಸಿತ ಹಾಗೂ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ಕುರಿತು ಎಚ್ಚರಿಸಲಾಗಿತ್ತು. ಆಗ ಅದನ್ನು ‘ನಗರ ನಕ್ಸಲ್ ಚಿಂತನೆ’ ಎಂದು ಟೀಕಿಸಿದ್ದ ಮೋದಿ, ಈಗ ಅದೇ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಉದ್ಯಮಿಗಳನ್ನೇ ದೂಷಿಸುತ್ತಿರುವ ಪ್ರಧಾನಿ

ತೆರಿಗೆ ವಿನಾಯಿತಿ ನೀಡಿದರೂ ಉದ್ಯಮಿಗಳು ಉದ್ಯೋಗಿಗಳ ವೇತನ ಹೆಚ್ಚಿಸಿಲ್ಲ, ಹೊಸ ಉದ್ಯೋಗಗಳನ್ನು ಸೃಷ್ಟಿಸಿಲ್ಲ ಎಂದು ಪ್ರಧಾನಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಇದೇ ವಿಷಯ ಪ್ರಸ್ತಾಪಿಸಿದಾಗ ಉದ್ಯಮಿಗಳನ್ನು ಅವಮಾನಿಸುತ್ತಿದೆ ಎಂದು ಆರೋಪಿಸಲಾಗಿತ್ತು. ಈಗ ಪ್ರಧಾನಿಯವರೇ ಅದೇ ವಾದ ಮುಂದಿಡುತ್ತಿದ್ದಾರೆ ಎಂದು ರಮೇಶ ಹೇಳಿದರು.

‘ಪ್ರಧಾನಿ ಮೋದಿ ಹತಾಶರಾಗಿದ್ದಾರೆ. ತಾವು ಶೀಘ್ರದಲ್ಲೇ ಅಧಿಕಾರದಿಂದ ನಿರ್ಗಮಿಸುವ ಪರಿಸ್ಥಿತಿ ಬರಲಿದೆ ಎಂಬ ಆತಂಕದಿಂದ ತಮ್ಮ ವೈಫಲ್ಯಗಳಿಗೆ ಇತರರನ್ನು ಹೊಣೆ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ತನಿಖಾ ಸಂಸ್ಥೆಗಳ ಮೂಲಕ ಉದ್ಯಮಿಗಳ ಮೇಲೆ ಒತ್ತಡ ಹೇರಿ ಭಯದ ವಾತಾವರಣ ಸೃಷ್ಟಿಸಲಾಗಿದೆ. ಆರ್ಥಿಕ ಶಕ್ತಿ ಕೆಲವೇ ದೊಡ್ಡ ಉದ್ಯಮ ಸಮೂಹಗಳ ಕೈಯಲ್ಲಿ ಕೇಂದ್ರೀಕೃತವಾಗಿದ್ದು, ಸಣ್ಣ ಉದ್ಯಮಗಳ ಸ್ಪರ್ಧಾತ್ಮಕತೆ ಕುಗ್ಗಿದೆ ಎಂದು ಆರೋಪಿಸಿದರು.

ಚೀನಾ ವ್ಯಾಪಾರ ಕೊರತೆ ಹೆಚ್ಚಳ

ಚೀನಾದೊಂದಿಗಿನ ಭಾರತದ ವ್ಯಾಪಾರ ಕೊರತೆ ನಿರಂತರವಾಗಿ ಹೆಚ್ಚುತ್ತಿರುವುದರಿಂದ ಲಕ್ಷಾಂತರ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ. ನೋಟು ಅಮಾನ್ಯೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆಯ ಅನುಷ್ಠಾನವೂ ಸಣ್ಣ ಉದ್ಯಮಗಳ ಸಮಸ್ಯೆಗಳನ್ನು ಹೆಚ್ಚಿಸಿದೆ ಎಂದು ರಮೇಶ ದೂರಿದರು.

ಈ ಹಿಂದೆ ಕೈಗಾರಿಕೋದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ‘₹12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಿದ್ದೇವೆ. ಆದರೆ, ನೀವು ಉದ್ಯೋಗಿಗಳ ವೇತನ ಹೆಚ್ಚಿಸಿದ್ದೀರಾ? ಹೊಸ ಉದ್ಯೋಗಗಳನ್ನು ಸೃಷ್ಟಿಸಿದ್ದೀರಾ? ಎಲ್ಲವನ್ನೂ ಸರಕಾರವೇ ಮಾಡಬೇಕೆಂದು ನಿರೀಕ್ಷಿಸುತ್ತೀರಿ’ ಎಂದು ಪ್ರಶ್ನಿಸಿದ್ದರು.

ದೇಶದ ಆರ್ಥಿಕ ಸಮಸ್ಯೆಗಳಿಗೆ ಉದ್ಯಮಿಗಳನ್ನು ದೂಷಿಸುವ ಬದಲು ಸರಕಾರವೇ ತನ್ನ ನೀತಿಗಳ ಹೊಣೆಗಾರಿಕೆ ವಹಿಸಿಕೊಳ್ಳಬೇಕು ಎಂದು ಜೈರಾಮ್ ರಮೇಶ ಆಗ್ರಹಿಸಿದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST