ಬೆಂಗಳೂರು, ನ. 24: ನಟ ದರ್ಶನ್ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಳೆ ಪಟ್ಟಣಗೆರೆ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಮತ್ತಿಬ್ಬರು ಸಾಕ್ಷಿಗಳು ಹಿಂದಿನ ಹೇಳಿಕೆಗೆ ವ್ಯತಿರಿಕ್ತವಾಗಿ ಸಾಕ್ಷ್ಯ ನೀಡಿದ್ದು, ಅಭಿಯೋಜನಾ ಪಕ್ಷಕ್ಕೆ ಹಿನ್ನಡೆಯಾಗಿದೆ.
ಮಲ್ಲಿಕಾರ್ಜುನ ಮತ್ತು ವಿಜಯ ಕುಮಾರ ಪ್ರತಿಕೂಲ ಸಾಕ್ಷಿಗಳಾಗಿದ್ದಾರೆ.
‘ನನಗೆ ಏನೂ ಗೊತ್ತಿಲ್ಲ. ನಾನು ಕಚೇರಿಯಿಂದ ಹೊರಗೆ ಬಂದಿರಲಿಲ್ಲ. ಹೊರಗೆ ನಡೆದ ಘಟನೆಗಳ ಬಗ್ಗೆ ನನಗೆ ಅರಿವಿಲ್ಲ. ಯಾರನ್ನೂ ನೋಡಿಲ್ಲ’ ಎಂದು ವಿಜಯ ಕುಮಾರ ಕೋರ್ಟ ಮುಂದೆ ಹೇಳಿದ್ದಾರೆ.
ಈ ಹಿಂದೆ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಪುನೀತ್, ಕಿರಣ್ ಹಾಗೂ ಭದ್ರತಾ ಸಿಬ್ಬಂದಿ ನರೇಂದ್ರ ಸಿಂಗ್ ಕೂಡ ಶೆಡ್ನಲ್ಲಿ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳುವ ಮೂಲಕ ಪ್ರತಿಕೂಲ ಸಾಕ್ಷಿಗಳಾಗಿದ್ದರು.
ಇದೀಗ ಮಲ್ಲಿಕಾರ್ಜುನ ಮತ್ತು ವಿಜಯ ಕುಮಾರ ಕೂಡ ಪ್ರತಿಕೂಲ ಸಾಕ್ಷಿಗಳಾಗಿದ್ದು, ಪಟ್ಟಣಗೆರೆ ಶೆಡ್ನ ನಾಲ್ವರು ಕೆಲಸಗಾರರು ಹಾಗೂ ಓರ್ವ ಭದ್ರತಾ ಸಿಬ್ಬಂದಿ ಅಭಿಯೋಜನಾ ಪಕ್ಷದ ವಾದಕ್ಕೆ ಪೂರಕವಾಗಿ ಸಾಕ್ಷ್ಯ ನೀಡದಂತಾಗಿದೆ.