LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮತಗಳ್ಳತನಕ್ಕೆ ಚುನಾವಣಾ ಆಯೋಗ ಅವಕಾಶ ನೀಡುತ್ತಿದೆ :  ಡಿ.ಕೆ.ಶಿವಕುಮಾರ

ಬೆಂಗಳೂರು, ನ. 5: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕುವ ಪ್ರಯತ್ನ ನಡೆಯುತ್ತಿದ್ದು, ಈ ವಿಚಾರದಲ್ಲಿ ನಾವು ಸಕಾಲದಲ್ಲಿ ಎಚ್ಚೆತ್ತುಕೊಂಡಿದ್ದೇವೆ. ಇಲ್ಲದಿದ್ದರೆ ದೊಡ್ಡ ಪ್ರಮಾಣದಲ್ಲಿ ಮತದಾರರು ತಮ್ಮ ಹಕ್ಕು ಕಳೆದುಕೊಳ್ಳುತ್ತಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆರೋಪಿಸಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಇಂಡಿಯಾ ಒಕ್ಕೂಟ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿ ಆರಂಭಿಸಿದ ಹೋರಾಟ ದೇಶಾದ್ಯಂತ ಜಾಗೃತಿ ಮೂಡಿಸಿದೆ ಎಂದರು.

‘ನಮ್ಮ ಮತ, ನಮ್ಮ ಹಕ್ಕು ಎಂಬ ಹೋರಾಟಕ್ಕೆ ಸ್ವಾತಂತ್ರ್ಯ ಉದ್ಯಾನ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಆರಂಭವಾದ ಮತಗಳ್ಳತನ ವಿರೋಧಿ ಹೋರಾಟ ಇಡೀ ದೇಶಕ್ಕೆ ಸಂದೇಶ ನೀಡಿದೆ. ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿಯೂ ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆದಿದೆ. ಇದಕ್ಕೆ ಸಾಕ್ಷ್ಯಗಳಿವೆ’ ಎಂದು ಹೇಳಿದರು.

ಚುನಾವಣಾ ಆಯೋಗವೇ ಮತಗಳ್ಳತನಕ್ಕೆ ಅವಕಾಶ ಮಾಡಿಕೊಡುತ್ತಿದೆ ಎಂದು ಆರೋಪಿಸಿದ ಅವರು, ನಟ ಪ್ರಕಾಶ ರಾಜ್ ಅವರು ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತು ದಾಖಲೆಗಳೊಂದಿಗೆ ಮನವಿ ಸಲ್ಲಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು 15ರಿಂದ 20 ಸಾವಿರ ಮತದಾರರ ಹೆಸರುಗಳನ್ನು ತೆಗೆದುಹಾಕಲು ಪ್ರಯತ್ನಿಸಿದ್ದರು. ವಿಶೇಷವಾಗಿ ಅಹಿಂದ ಸಮುದಾಯದ ಮತದಾರರನ್ನು ಗುರಿಯಾಗಿಸಲಾಗಿತ್ತು ಎಂದು ದೂರಿದರು.

‘ಮತದಾರರ ಹೆಸರುಗಳನ್ನು ತೆಗೆದುಹಾಕಲು ನಮೂನೆ 7ರ ಅರ್ಜಿಗಳನ್ನು ವಿವಿಧ ಕ್ಷೇತ್ರಗಳಿಗೆ ಕಳುಹಿಸಲಾಗಿತ್ತು. ಈ ವಿಚಾರದಲ್ಲಿ ನಾವು ಎಚ್ಚೆತ್ತುಕೊಂಡಿದ್ದರಿಂದ ಸಂಚು ಬಯಲಾಗಿದೆ. ಇಲ್ಲದಿದ್ದರೆ ನಾವು ಯಾಮಾರುತ್ತಿದ್ದೆವು’ ಎಂದರು.

ನಮೂನೆ 7ರ ಮೂಲಕ ಮತದಾರರ ಹೆಸರುಗಳನ್ನು ತೆಗೆದುಹಾಕಲು ಯತ್ನಿಸಿದವರನ್ನು ರಕ್ಷಿಸಲು ಬಿಜೆಪಿ ನಾಯಕರು ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದರು ಎಂದು ಆರೋಪಿಸಿದ ಅವರು, ‘ಅಶೋಕಣ್ಣ, ಕೊಲೆ ಮಾಡುವುದಷ್ಟೇ ಅಲ್ಲ, ಕೊಲೆಗೆ ಯತ್ನಿಸುವುದೂ ಗಂಭೀರ ಅಪರಾಧ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರನ್ನು ಉದ್ದೇಶಿಸಿ ಹೇಳಿದರು.

ಮತದಾರರ ಹೆಸರುಗಳನ್ನು ತೆಗೆದುಹಾಕಲು ಸಲ್ಲಿಸಲಾದ ಅರ್ಜಿಗಳನ್ನು ಯಾರು ಸಿದ್ಧಪಡಿಸಿದರು, ಯಾರು ವಿತರಿಸಿದರು ಮತ್ತು ಯಾರ ಬಳಿ ಅವುಗಳಿವೆ ಎಂಬುದನ್ನು ಪತ್ತೆಹಚ್ಚಲಾಗುವುದು. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳೂ ಲಭ್ಯವಿದ್ದು, ಕಾನೂನು ಚೌಕಟ್ಟಿನಲ್ಲಿ ಸಮಗ್ರ ತನಿಖೆ ನಡೆಸಲು ಸರ್ಕಾರ ಬದ್ಧವಾಗಿದೆ ಎಂದು ಡಿ.ಕೆ. ಶಿವಕುಮಾರ ತಿಳಿಸಿದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೊನಾಲ್ಡೊ ನಿವೃತ್ತಿ ; 23 ವರ್ಷಗಳ ಅಂತಾರಾಷ್ಟ್ರೀಯ ಪಯಣಕ್ಕೆ ತೆರೆಅಮೆರಿಕ ಚುನಾವಣೆ ಪರಿಣಾಮ: ಷೇರುಪೇಟೆಯಲ್ಲಿ ಭಾರಿ ಏರಿಕೆಮತಗಳ್ಳತನಕ್ಕೆ ಚುನಾವಣಾ ಆಯೋಗ ಅವಕಾಶ ನೀಡುತ್ತಿದೆ :  ಡಿ.ಕೆ.ಶಿವಕುಮಾರರೈತರ ಹೋರಾಟ ತೀವ್ರ: ಜಿಲ್ಲೆಯಾದ್ಯಂತ ಹೆದ್ದಾರಿ ಬಂದ್ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಗೆ ಮೊಸಳೆ ಕಡಿತ: ಸ್ಥಳೀಯರಿಂದ ರಕ್ಷಣೆವಿದೇಶ ಪ್ರವಾಸಗಳ ವಿವರ ಬಹಿರಂಗಪಡಿಸಿ: ರಾಹುಲ್‌ಗೆ ಅಮಿತ್ ಶಾ ಸವಾಲುವಶಕ್ಕೆ ಪಡೆದ ಕ್ಷಣದಿಂದಲೇ ಬಂಧನದ ಅವಧಿ ಲೆಕ್ಕ: ಸುಪ್ರೀಂ ಕೋರ್ಟಬೆಳಗಾವಿ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕಲು ರೈತರ ಯತ್ನ₹2.68 ಕೋಟಿ ದರೋಡೆ ಪ್ರಕರಣ; ಏಳು ಆರೋಪಿಗಳ ಬಂಧನ, ಇಬ್ಬರು ಪರಾರಿ, ₹2.39 ಕೋಟಿ ನಗದು ವಶ : ಕಾರು, ಎರಡು ಬೈಕ್ ಹಾಗೂ ಹಣ ಎಣಿಕೆ ಯಂತ್ರಗಳು ಜಪ್ತಿ