ಬೆಳಗಾವಿ, ಅ. 21 : ಬೆಂಗಳೂರಿನ ವಿಧಾನಸೌಧದಲ್ಲಿ ಚಾಲನೆ ನೀಡಲಾದ ಕಿತ್ತೂರು ರಾಣಿ ಚೆನ್ನಮ್ಮ ಉತ್ಸವದ ಜ್ಯೋತಿ ಬುಧವಾರ ಬೆಳಗಾವಿ ನಗರಕ್ಕೆ ಆಗಮಿಸಿದ್ದು, ಆಟೋನಗರ ಮತ್ತು ರಾಮತೀರ್ಥ ನಗರದಲ್ಲಿ ಕಿತ್ತೂರು ಮಹಾರಾಣಿ ಚೆನ್ನಮ್ಮ ಜನಕಲ್ಯಾಣ ಸಂಘದ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ವೀರರಾಣಿ ಕಿತ್ತೂರು ಚೆನ್ನಮ್ಮನ ಶೌರ್ಯ, ಸಾಹಸ ಹಾಗೂ ಸ್ವಾತಂತ್ರ್ಯ ಹೋರಾಟದ ಸ್ಮರಣಾರ್ಥ ಹಮ್ಮಿಕೊಳ್ಳಲಾದ ಉತ್ಸವದ ಜ್ಯೋತಿಯನ್ನು ಸ್ಥಳೀಯ ಮುಖಂಡರು, ಹಿರಿಯರು ಹಾಗೂ ಸಾರ್ವಜನಿಕರು ವಿಜೃಂಭಣೆಯಿಂದ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ವಂಶಸ್ಥರಾದ ಅಶೋಕ ದೇಸಾಯಿ ಹಾಗೂ ಅವರ ಕುಟುಂಬದ ಸದಸ್ಯರು, ಬೆಳಗಾವಿ ಮಹಾನಗರ ಪಾಲಿಕೆಯ ಉಪಮಹಾಪೌರ ಹನುಮಂತ ಕೊಂಗಾಲಿ, ಗ್ರಾಮ ಲೆಕ್ಕಾಧಿಕಾರಿ, ಕಣಬರ್ಗಿ ಬಡಾವಣೆಯ ಹಿರಿಯರಾದ ವಿಠ್ಠಲ ಬಡಿಗೇರ, ಬಸವರಾಜ ವರ್ಜನ್ನವರ, ಸುರೇಶ ಯಾದವ, ಮುಕ್ತಾರ, ಆನಂದ ಕರಲಿಂಗನವರ, ನಾನಾಗೌಡ ಪಾಟೀಲ, ಗಿರೀಶ ಗಾಣಿಗೇರ, ಸಂಜು ಸಿದ್ರಾಮಣಿ, ಅಪ್ಪಾಸಾಹೇಬ ಕಾಂಬಳೆ, ಬಸವರಾಜ ಚಿಟಿ ಸೇರಿದಂತೆ ಅನೇಕ ಗಣ್ಯರು ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.