LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಬಾಲಕರಿಗೆ ಪೈಪ್‌ನಿಂದ ಹಿಗ್ಗಾಮುಗ್ಗಾ ಥಳಿತ; ಸೂಪರ್‌ ಬಜಾರ್‌ ಮಾಲೀಕನ ಬಂಧನ

ವಿಜಯಪುರ, ಆಗಸ್ಟ್ 31: ವಸ್ತುಗಳನ್ನು ಹಣ ಪಾವತಿಸದೆ ತೆಗೆದುಕೊಂಡಿದ್ದಾರೆ ಎಂಬ ಕಾರಣಕ್ಕೆ ಇಬ್ಬರು ಅಪ್ರಾಪ್ತ ಬಾಲಕರನ್ನು ಪೈಪ್‌ನಿಂದ ಹಿಗ್ಗಾಮುಗ್ಗಾ ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ ಆರೋಪದಡಿ ಸೂಪರ್‌ ಬಜಾರ್‌ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಮಲಘಾಣ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮ ಸಹಾಯಕ ರಹಮಾನ್ ವಾಲಿಕಾರ ಅವರ 11 ವರ್ಷದ ಪುತ್ರ ಹಾಗೂ ಆತನ 14 ವರ್ಷದ ಸ್ನೇಹಿತ ಹಲ್ಲೆಗೊಳಗಾದ ಬಾಲಕರು. ಆಗಸ್ಟ್ 28ರಂದು ಶುಕ್ರವಾರ ಇಬ್ಬರೂ ಸೂಪರ್‌ ಬಜಾರ್‌ಗೆ ತೆರಳಿದ್ದರು.

ಬಾಲಕರು ಮೊದಲು ಬೂಸ್ಟ್‌ ಪ್ಯಾಕೆಟ್‌ವೊಂದನ್ನು ತೆಗೆದುಕೊಂಡು ಅದಕ್ಕೆ ಹಣ ಪಾವತಿಸದೆ ಜೇಬಿನಲ್ಲಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಬಳಿಕ ತಿಂಡಿ ಹಾಗೂ ಇತರ ತಿನಿಸುಗಳನ್ನು ಖರೀದಿಸಲು ಸೂಪರ್‌ ಬಜಾರ್‌ನಲ್ಲಿ ಹುಡುಕಾಡುತ್ತಿದ್ದಾಗ ಅಂಗಡಿ ಮಾಲೀಕ ಅಶೋಕ ಪತ್ತಾರ ಅಲ್ಲಿಗೆ ಬಂದಿದ್ದಾನೆ.

ಬಾಲಕರು ಮೊದಲಿಗೆ ತೆಗೆದುಕೊಂಡಿದ್ದ ಬೂಸ್ಟ್‌ ಪ್ಯಾಕೆಟ್‌ಗೆ ಹಣ ಪಾವತಿಸುವಂತೆ ಸೂಚಿಸಿದ ಮಾಲೀಕ, ಬಳಿಕವೇ ಬೇರೆ ವಸ್ತುಗಳನ್ನು ಖರೀದಿಸುವಂತೆ ಹೇಳಿದ್ದಾನೆ. ಈ ಸಂದರ್ಭದಲ್ಲಿ ಕೋಪಗೊಂಡ ಆತ ಬಾಲಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.

ಇದಾದ ಬಳಿಕ ಪೈಪ್‌ನಿಂದ ಇಬ್ಬರು ಬಾಲಕರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಬಾಲಕರಿಗೆ ತೀವ್ರ ಗಾಯಗಳಾಗಿವೆ.

ಘಟನೆಯ ಬಳಿಕ ಗಾಯಗೊಂಡ ಬಾಲಕರನ್ನು ಸಿಂದಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹಲ್ಲೆ ನಡೆಸುತ್ತಿರುವ ದೃಶ್ಯಗಳನ್ನು ಯಾರೋ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಇದೀಗ ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಪ್ರಕರಣದ ಕುರಿತು ಆಕ್ರೋಶ ವ್ಯಕ್ತವಾಗಿದ್ದು, ಮಕ್ಕಳಿಂದ ತಪ್ಪಾಗಿದ್ದರೆ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಬಹುದಾಗಿತ್ತು. ಆದರೆ ಅವರನ್ನು ಪೈಪ್‌ನಿಂದ ಥಳಿಸಿರುವುದು ಖಂಡನೀಯ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬಾಲಕರ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೂಪರ್‌ ಬಜಾರ್‌ ಮಾಲೀಕ ಅಶೋಕ ಪತ್ತಾರನನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇರಾನ್ ಸಂಘರ್ಷದ ನಡುವೆಯೂ ಭಾರತದ ಜಿಡಿಪಿ ಶೇ 7.8ರ ಬೆಳವಣಿಗೆ: ಪ್ರಧಾನಿ ಮೋದಿಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಜೊತೆ ಪ್ರಧಾನಿ ಮೋದಿ ಭೇಟಿ; ವ್ಯಾಪಾರ ವಿಸ್ತರಣೆಗೆ ಒತ್ತು‘ಗೃಹಜ್ಯೋತಿ’ ಸಮೀಕ್ಷೆ ಅವಧಿ ವಿಸ್ತರಣೆಅಪರಾಧ ನಡೆಯುವಾಗ ಕಣ್ಮರೆಯಾಗುತ್ತಾರೆ: ದಿಲ್ಲಿ ಪೊಲೀಸರ ವಿರುದ್ಧ ಅಭಿಜೀತ ದೀಪ್ಕೆ ವಾಗ್ದಾಳಿಪ್ರಕಾಶ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿ : ದೂರು ದಾಖಲುಬಾಲಕರಿಗೆ ಪೈಪ್‌ನಿಂದ ಹಿಗ್ಗಾಮುಗ್ಗಾ ಥಳಿತ; ಸೂಪರ್‌ ಬಜಾರ್‌ ಮಾಲೀಕನ ಬಂಧನದೆಹಲಿ: ನಿರ್ಭಯಾ ಪ್ರಕರಣ ನೆನಪಿಸುವ ಘಟನೆ; ಚಲಿಸುತ್ತಿದ್ದ ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಮಹಿಳೆಯರು ಆಭರಣದಂತೆ ಮನೆಯಲ್ಲೇ ಇರಬೇಕು’ : ಮುಸ್ಲಿಂ ಧರ್ಮಗುರುವಿನ ಹೇಳಿಕೆ ವಿವಾದಕ್ಕೆಕೆಪಿಎಸ್‌ಸಿ ನೇಮಕಾತಿ ಹಗರಣ: ₹80 ಲಕ್ಷಕ್ಕೆ ಪ್ರಶ್ನೆಪತ್ರಿಕೆ ಮಾರಾಟ, ಬಿಜೆಪಿ ಮುಖಂಡ ಬಸವರಾಜ ಕನ್ನಾಳೆ ಬಂಧನಪೆಟ್ರೋಲ್‌ನಲ್ಲಿನ ಎಥನಾಲ್ ಪ್ರಮಾಣ ಬಹಿರಂಗಪಡಿಸಲು ಕೋರಿದ್ದ ಅರ್ಜಿ ವಜಾ ಮಾಡಿದ ಸುಪ್ರೀಮ ಕೋರ್ಟ