LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಭಾರತ ರತ್ನ ಸಿ.ಎನ್.ಆರ್. ರಾವ್‌ಗೆ ನೋಟಿಸ್ : ಚುನಾವಣಾಧಿಕಾರಿ ಸ್ಪಷ್ಟನೆ

ಬೆಂಗಳೂರು, ಸೆ. 9 : ದೇಶದ ಖ್ಯಾತ ವಿಜ್ಞಾನಿ ಹಾಗೂ ಭಾರತ ರತ್ನ ಪುರಸ್ಕೃತ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿ ನೋಟಿಸ್ ನೀಡಲಾಗಿದೆ ಎಂಬ ವರದಿಗಳು ಹೊರಬಿದ್ದ ಬೆನ್ನಲ್ಲೇ, ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಸ್ಪಷ್ಟನೆ ನೀಡಿದ್ದು, ಅವರಿಗೆ ಯಾವುದೇ ನೋಟಿಸ್ ಜಾರಿ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ಸಿ.ಎನ್.ಆರ್. ರಾವ್ ಅವರ ಹೆಸರಿನಲ್ಲಿ ಕಂಡುಬಂದ ವ್ಯತ್ಯಾಸದ ಹಿನ್ನೆಲೆಯಲ್ಲಿ ಗುರುತು ದೃಢೀಕರಣಕ್ಕಾಗಿ ಮಲ್ಲೇಶ್ವರಂನಲ್ಲಿ ನಡೆಯುವ ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಆರಂಭದಲ್ಲಿ ವರದಿಯಾಗಿತ್ತು. ಹಳೆಯ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಪ್ರೊ. ಸಿ.ಎನ್.ಆರ್. ರಾವ್ ಎಂದು ದಾಖಲಾಗಿದ್ದರೆ, ಹೊಸ ಪಟ್ಟಿಯಲ್ಲಿ ಪ್ರೊಫೆಸರ್ ಪದದ ಇಂಗ್ಲಿಷ್ ರೂಪದಲ್ಲಿ ಹೆಚ್ಚುವರಿಯಾಗಿ ಒಂದು ಎಫ್ ಅಕ್ಷರ ಸೇರಿರುವುದು ಗೊಂದಲಕ್ಕೆ ಕಾರಣವಾಗಿತ್ತು.

ಈ ವ್ಯತ್ಯಾಸವನ್ನು ಸ್ವಯಂ ಹೆಸರಿನ ಹೊಂದಾಣಿಕೆಯಲ್ಲಿನ ದೋಷ ಎಂದು ಗುರುತಿಸಿ, ತಾಂತ್ರಿಕ ದೋಷ ಸರಿಪಡಿಸುವ ಜತೆಗೆ ಅವರ ಗುರುತನ್ನು ದೃಢಪಡಿಸಲು ವಿಚಾರಣೆಗೆ ಕರೆಯಲಾಗಿದೆ ಎಂದು ವರದಿಗಳು ತಿಳಿಸಿದ್ದವು.

ಯಾವುದೇ ನೋಟಿಸ್ ನೀಡಿಲ್ಲ

ಆದರೆ ಈ ವರದಿಗಳ ಕುರಿತು ಸ್ಪಷ್ಟನೆ ನೀಡಿರುವ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ಮಹೇಶ್ವರ ರಾವ್, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ಯಾವುದೇ ನೋಟಿಸ್ ಜಾರಿ ಮಾಡಿಲ್ಲ ಎಂದು ತಿಳಿಸಿದ್ದಾರೆ.

2002ರ 76-ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ಭಾಗ ಸಂಖ್ಯೆ 129ರಲ್ಲಿ ಕ್ರಮ ಸಂಖ್ಯೆ 431ರಲ್ಲಿ ರಾವ್ ಮತದಾರರಾಗಿದ್ದರು. ಪ್ರಸ್ತುತ 157-ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 59ರ ಕ್ರಮ ಸಂಖ್ಯೆ 187ರಲ್ಲಿ ಪ್ರೊಫೆಸರ್ ಸಿ.ಎನ್. ರಾವ್ ಎಂ ಎಂಬ ಹೆಸರಿನಲ್ಲಿ ಮತದಾರರಾಗಿ ನೋಂದಾಯಿತರಾಗಿದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿಯೂ ಅವರ ಹೆಸರು ಸೇರ್ಪಡೆಯಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ವಿಶೇಷ ಸಮಗ್ರ ಪರಿಷ್ಕರಣೆಯ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಅವರ ಹೆಸರಿನ ವ್ಯತ್ಯಾಸ ಕಂಡುಬಂದಿತ್ತು. ಆದರೂ ಬೂತ್ ಮಟ್ಟದ ಅಧಿಕಾರಿ ಯಾವುದೇ ನೋಟಿಸ್ ನೀಡದೆ, ಅಂತಿಮ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರ್ಪಡೆಗೊಳಿಸಲು ಶಿಫಾರಸು ಮಾಡಿದ್ದಾರೆ. ಅದರಂತೆ ಅಂತಿಮ ಪಟ್ಟಿಯಲ್ಲಿ ಹೆಸರು ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಈ ಮೂಲಕ ಅಕ್ಷರ ದೋಷದ ಕಾರಣಕ್ಕೆ ದೇಶದ ಹಿರಿಯ ವಿಜ್ಞಾನಿಯೊಬ್ಬರು ವಿಚಾರಣೆಗೆ ಹಾಜರಾಗಬೇಕಾಗಿದೆ ಎಂಬ ವರದಿಯಿಂದ ಉಂಟಾಗಿದ್ದ ಗೊಂದಲಕ್ಕೆ ಚುನಾವಣಾಧಿಕಾರಿಗಳ ಸ್ಪಷ್ಟನೆ ತೆರೆ ಎಳೆದಿದೆ.

ಬೆಂಗಳೂರಿನಲ್ಲಿ ಜನಿಸಿದ ಸಿ.ಎನ್.ಆರ್. ರಾವ್ ಅವರು ಘನಸ್ಥಿತಿ ಮತ್ತು ವಸ್ತು ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಯನ್ನು ಪರಿಗಣಿಸಿ ಅವರಿಗೆ 2014ರಲ್ಲಿ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಪ್ರದಾನ ಮಾಡಲಾಗಿತ್ತು. ಭಾರತ ರತ್ನ ಗೌರವಕ್ಕೆ ಪಾತ್ರರಾದ ದೇಶದ ಮೂರನೇ ವಿಜ್ಞಾನಿ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ.

ಭಾರತದ ವಿಜ್ಞಾನ ನೀತಿಗಳನ್ನು ರೂಪಿಸುವಲ್ಲಿಯೂ ರಾವ್ ಮಹತ್ವದ ಪಾತ್ರ ವಹಿಸಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿದ್ದ ಅವರು, ಬಳಿಕ ರಾಜೀವ್ ಗಾಂಧಿ, ಎಚ್.ಡಿ. ದೇವೇಗೌಡ, ಐ.ಕೆ. ಗುಜ್ರಾಲ್ ಮತ್ತು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ವೈಜ್ಞಾನಿಕ ಸಲಹಾ ಮಂಡಳಿಗಳ ನೇತೃತ್ವ ವಹಿಸಿದ್ದರು. ಪದ್ಮವಿಭೂಷಣ, ಪದ್ಮಶ್ರೀ ಮತ್ತು ಕರ್ನಾಟಕ ರತ್ನ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಅವರಿಗೆ ಸಂದಿವೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಸತೀಶ ಜಾರಕಿಹೊಳಿ ಸುತ್ತ ಇಡಿ ಬಲೆಬಳ್ಳಾರಿ ಚಲೋ ಪಾದಯಾತ್ರೆ ನಾಳೆ ಮುಕ್ತಾಯ, ಹೋರಾಟ ಮುಂದುವರಿಯಲಿದೆ: ವಿಜಯೇಂದ್ರ5 ರಾಜ್ಯಗಳ ಚುನಾವಣೆ ವೇಳೆ ಬಿಜೆಪಿಗೆ ₹1,473 ಕೋಟಿ ದೇಣಿಗೆ!ಅಮೆರಿಕದ ಮಾನವರಹಿತ ಜಲಾಂತರ್ಗಾಮಿ ವಶಕ್ಕೆ ಪಡೆದ ಇರಾನ್ಸೌದಿ ಮೇಲೆ ಕ್ಷಿಪಣಿ ದಾಳಿ; ನೌಕಾಯಾನ ಸ್ವಾತಂತ್ರ್ಯಕ್ಕೆ ಬೆದರಿಕೆ ಸಹಿಸುವುದಿಲ್ಲ ಎಂದ ಭಾರತಇನ್ನಷ್ಟು ನಾಯಕರ ಮೇಲೆ ದಾಳಿ ಸಾಧ್ಯತೆ, ಎಚ್ಚರಿಕೆಯಿಂದಿರಿ: ಮುಖ್ಯಮಂತ್ರಿಜಾತಿವಾದ ಕೊನೆಗೊಂಡರೆ ಮೀಸಲಾತಿಯ ಅಗತ್ಯವೂ ಇರುವುದಿಲ್ಲ: ಕೇಂದ್ರ ಸಚಿವ ಅಠವಳೆವಿದ್ಯಾರ್ಥಿಗೆ ನೋಟಿಸ್ ನೀಡಲು ಮ್ಯಾಜಿಸ್ಟ್ರೇಟ್‌ಗೆ ಎಷ್ಟು ಧೈರ್ಯ?: ಸುಪ್ರೀಂ ಕೋರ್ಟ ಕಿಡಿಭಾರತ ರತ್ನ ಸಿ.ಎನ್.ಆರ್. ರಾವ್‌ಗೆ ನೋಟಿಸ್ : ಚುನಾವಣಾಧಿಕಾರಿ ಸ್ಪಷ್ಟನೆಸತೀಶ ಜಾರಕಿಹೊಳಿ ಮೇಲಿನ ಇ.ಡಿ ಶೋಧ ರಾಜಕೀಯ ಪ್ರೇರಿತ: ಡಿ.ಕೆ.ಶಿವಕುಮಾರ