LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಯುವತಿಯೊಂದಿಗೆ ಹೊಟೇಲ್‌ಗೆ ತೆರಳಿದ್ದ ಯುವಕನ ಮೇಲೆ ಹಲ್ಲೆ

ಹುಬ್ಬಳ್ಳಿ, ಜೂನ್ 20: ಯುವತಿಯೊಂದಿಗೆ ಊಟಕ್ಕೆ ತೆರಳಿದ್ದ ಕ್ರಿಶ್ಚಿಯನ್ ಯುವಕನನ್ನು ಹೊಟೇಲ್‌ನಿಂದಲೇ ಕರೆದೊಯ್ದು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ನೈತಿಕ ಪೊಲೀಸ್‌ಗಿರಿಯ ಮತ್ತೊಂದು ಪ್ರಕರಣ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಸಮೀಪ ಬೆಳಕಿಗೆ ಬಂದಿದೆ. ಯುವಕನನ್ನು ಅಪಹರಿಸಿ ರೂಮ್‌ನಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಿರುವುದಲ್ಲದೆ, ಕುಟುಂಬಸ್ಥರಿಗೆ ಹಣಕ್ಕಾಗಿ ಬೆದರಿಕೆ ಹಾಕಿರುವ ಗಂಭೀರ ಆರೋಪವೂ ಕೇಳಿಬಂದಿದೆ.

ಹುಬ್ಬಳ್ಳಿಯ ಬಾಸೆಲ್ ಮಿಷನ್ ಕಾಂಪೌಂಡ್ ನಿವಾಸಿ ಶರವೀನ ಜೋಗುಳ ಹಲ್ಲೆಗೊಳಗಾದ ಯುವಕನಾಗಿದ್ದಾನೆ. ಮೂಲತಃ ಧಾರವಾಡ ಜಿಲ್ಲೆಯ ಅನ್ಯಕೋಮಿನ ಯುವತಿಯೊಂದಿಗೆ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಶರವೀನ, ಶುಕ್ರವಾರ ಯುವತಿಯೊಂದಿಗೆ ಅಂಚಟಗೇರಿ ಬಳಿಯ ರಾಸ್ತಾ-63 ಹೊಟೇಲ್‌ಗೆ ಊಟಕ್ಕಾಗಿ ತೆರಳಿದ್ದನು.ಇಬ್ಬರೂ ಹೊಟೇಲ್‌ನಲ್ಲಿದ್ದ ವೇಳೆ ಮಹಿಳೆಯೊಬ್ಬರು ಸೇರಿದಂತೆ 8ರಿಂದ 10 ಜನರ ಗುಂಪು ಅಲ್ಲಿಗೆ ಆಗಮಿಸಿದೆ. ಬಳಿಕ ಯುವಕನನ್ನು ಪ್ರಶ್ನಿಸಿದ ಗುಂಪು, ಅಲ್ಲಿಂದ ಬಲವಂತವಾಗಿ ಕರೆದೊಯ್ದಿದೆ ಎನ್ನಲಾಗಿದೆ. ಹೊಟೇಲ್‌ನಿಂದ ಹೊರತೆಗೆದ ಬಳಿಕ ಬೈಕ್‌ನಲ್ಲಿ ಹುಬ್ಬಳ್ಳಿಗೆ ಕರೆತಂದು, ಸಿದ್ಧಾರೂಢ ಮಠದ ಸಮೀಪದ ಬಾರ್‌ವೊಂದರ ಶೆಡ್‌ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಆರೋಪಿಗಳು ಯುವಕನಿಗೆ ಜಾತಿ ಹಾಗೂ ಧರ್ಮದ ವಿಚಾರವಾಗಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಯುವತಿಯೊಂದಿಗೆ ಸಂಪರ್ಕ ಮುಂದುವರಿಸದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಜೀವ ಬೆದರಿಕೆ ಹಾಕಿರುವುದರ ಜೊತೆಗೆ, ಯುವಕನ ತಾಯಿಗೆ ಕರೆ ಮಾಡಿ ₹5 ಲಕ್ಷ ಹಣ ನೀಡುವಂತೆ ಒತ್ತಡ ಹೇರಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಶರವೀನನನ್ನು ತಕ್ಷಣ ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ಯ ಗುಂಜನ್, ಡಿವೈಎಸ್‌ಪಿ ವಿನೋದ ಮುಕ್ತೇದಾರ ಹಾಗೂ ಇನ್ಸಪೆಕ್ಟರ್ ಮುರುಗೇಶ ಚನ್ನಣ್ಣವರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಯುವಕನಿಂದ ಮಾಹಿತಿ ಸಂಗ್ರಹಿಸಿದ್ದಾರೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯುವತಿಯೊಂದಿಗೆ ಹೊಟೇಲ್‌ಗೆ ತೆರಳಿದ್ದ ಯುವಕನ ಮೇಲೆ ಹಲ್ಲೆಮುತಗಾದ 300 ವರ್ಷದ ಬಾವಿ ಪುನರುಜ್ಜೀವನಗೊಳಿಸಿದ ಪ್ಯಾಸ್ ಫೌಂಡೇಶನ್ಬುರ್ಖಾ ಅವನತಿಯ ಸಂಕೇತ : ಇಮ್ತಿಯಾಜ ಅಲಿ ಸೆಲ್ಫಿಗೆ ಜೀವಬಲಿ: ಭಾವಿ ಪತ್ನಿ ಎದುರೇ 400 ಅಡಿ ಕಂದಕಕ್ಕೆ ಬಿದ್ದು ಸಾವುಜನರ ಮನೆಬಾಗಿಲಿಗೆ ಸರ್ಕಾರ: ‘ಪ್ರಜಾಸೇವೆ’ ಇಲಾಖೆ ಸ್ಥಾಪನೆಗೆ ಡಿ.ಕೆ.ಶಿವಕುಮಾರ ಘೋಷಣೆನೀಟ್ ಪರೀಕ್ಷೆಗೆ ಬಿಗಿ ಭದ್ರತೆ: ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಿತ ಪ್ರದೇಶ ಘೋಷಣೆಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 1,421 ಹುದ್ದೆಗಳ ನೇಮಕಾತಿ: ಜೂನ್ 22ರಿಂದ ಅರ್ಜಿ ಸಲ್ಲಿಕೆ ಆರಂಭಅಮಿತ್ ಶಾ ಭೇಟಿಗೆ ಹೊರಟಿದ್ದ ಎಂಇಎಸ್ ಪುಂಡರ ತಡೆ: ಹತ್ತರಗಿ ಟೋಲ್‌ನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆಬೆಳಗಾವಿ ಬಳಿ ಭೀಕರ ಅಪಘಾತ: ಹೊತ್ತಿ ಉರಿದ ಲಾರಿಗಳುನಾಯಿ ಉಳಿಸಲು ಹೋಗಿ ತಾಯಿಯ ಸಾವು!