LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

300 ಉದ್ಯೋಗಿಗಳನ್ನು ವಜಾಗೊಳಿಸಿದ ವಿಪ್ರೋ

ಹೊಸದಿಲ್ಲಿ : ಮೂನ್ ಲೈಟಿಂಗ್ ಕಾರಣ ವಿಪ್ರೋ ಕಂಪನಿ 300 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಳೆದ ಕೆಲವು ತಿಂಗಳಿನಿಂದ ವಿಪ್ರೋದ ಸುಮಾರು 300 ಉದ್ಯೋಗಿಗಳು ತಮ್ಮ ಕಂಪನಿ ಜೊತೆಗೆ ಇತರೆ ಕಂಪನಿಗಳಲ್ಲಿ ಸಹ ಕೆಲಸ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು.



ಈ ಹಿನ್ನೆಲೆಯಲ್ಲಿ 300 ಉದ್ಯೋಗಿಗಳನ್ನು ವಜಾಗೊಳಿಸಿದೆ. ಅಂತಹ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಕಂಪನಿಯಲ್ಲಿ ಸ್ಥಾನವಿಲ್ಲ ಎಂದು ರಿಷದ್ ಪ್ರೇಮ​ಜಿ ಸ್ಪಷ್ಟಪಡಿಸಿದರು.



ಇಂದು ವಿಪ್ರೋದಲ್ಲಿ ಕೆಲಸ ಮಾಡುವವರು ಮತ್ತು ನಮ್ಮ ಪ್ರತಿಸ್ಪರ್ಧಿಯೊಬ್ಬರೊಂದಿಗೆ ನೇರವಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ನಿಖರವಾಗಿ 300 ಜನರನ್ನು ಕಂಡುಹಿಡಿಯಲಾಗಿದೆ. ಅಂತಹವರನ್ನು ವಜಾ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST