LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

“ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ” : ಪ್ರಧಾನಿ ಮೋದಿ ಹೇಳಿಕೆಯ ವ್ಯಾಪಕ ಅಪಹಾಸ್ಯ

ಹೊಸದಿಲ್ಲಿ, ಮೇ ೨೩: ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಎಂದು ನನಗೆ ಮನವರಿಕೆಯಾಗಿದೆ, ರೀತಿಯ ಶಕ್ತಿಯು ಜೈವಿಕ ದೇಹದಿಂದ ಬರಲು ಸಾಧ್ಯವಿಲ್ಲ, ದೇವರು ಮಾತ್ರ ಅಂಥ ಶಕ್ತಿಯನ್ನು ನೀಡಬಲ್ಲನು ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆ ಎಲ್ಲೆಡೆ ವ್ಯಾಪಕ ಅಪಹಾಸ್ಯಕ್ಕೀಡಾಗಿದೆ.



ಪ್ರಧಾನಿ ಮೋದಿಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನೀಡುತ್ತಿರುವಂತಹ ಹೇಳಿಕೆಗಳನ್ನು ಜನಸಾಮಾನ್ಯರಲ್ಲಿ ಯಾರಾದರೂ ನೀಡಿದ್ದರೆ ಅವರನ್ನು ನೇರವಾಗಿ ಮಾನಸಿಕ ತಜ್ಞರ ಬಳಿ ಕರೆದೊಯ್ಯಲಾಗುತ್ತದೆ ಎಂದು ಹೇಳಿದ್ದಾರೆ.



ಈಶಾನ್ಯ ದಿಲ್ಲಿಯಲ್ಲಿ ಕಾಂಗ್ರೆಸ್ಅಭ್ಯರ್ಥಿ ಕನ್ಹಯ್ಯ ಕುಮಾರ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ಗಾಂಧಿ, ಪ್ರಧಾನಿಯ ಇತ್ತೀಚಿಗಿನ ಸಂದರ್ಶನಗಳಲ್ಲಿ ಅವರು ನೀಡುತ್ತಿರುವ ಹೇಳಿಕೆಗಳನ್ನು ಉಲ್ಲೇಖಿಸಿ,ದೇವರು ಕಳುಹಿಸಿದ ವ್ಯಕ್ತಿಕೇವಲ 22 ಜನರಿಗೆ ಕೆಲಸ ಮಾಡುತ್ತಿದ್ದು ಕೇವಲ 22 ಜನರಿಗೆ ಮಾತ್ರ ಪ್ರಧಾನಿ. ಪ್ರಧಾನಿ ಮೋದಿ ಎಲ್ಲವನ್ನೂ ಅಂಬಾನಿ ಮತ್ತು ಅದಾನಿ ಅವರ ಇಚ್ಛೆಗಳಂತೆ ಮಾಡುತ್ತಾರೆ. ದೇಶದ ಆಸ್ತಿ, ರೈಲ್ವೆ, ಬಂದರು, ವಿಮಾನ ನಿಲ್ದಾಣಗಳು ಅದಾನಿಗೆ ನೀಡುತ್ತಾರೆ. ಆದರೆ ಬಡ ಜನರು ಸಾಲ ಮನ್ನಾ, ರಸ್ತೆ, ಆಸ್ಪತ್ರೆ, ಶಿಕ್ಷಣ ಇತ್ಯಾದಿಗೆ ಕೇಳಿದಾಗ ಮೋದಿ ಏನನ್ನೂ ಮಾಡುವುದಿಲ್ಲ ಎಂದು ರಾಹುಲ್ಹೇಳಿದರು.



ಗಂಗಾ ನದಿಯ ದಡದಲ್ಲಿ ಮೃತದೇಹಗಳು ಜಮಾಯಿಸುತ್ತಿದ್ದಾಗ, ‘ದೇವರ ದೂತರುಮೊಬೈಲ್ ಫೋನ್ಪ್ಲ್ಯಾಶ್‌‌ ಲೈಟನ್ನು ಆನ್ ಮಾಡಲು ಜನರಿಗೆ ಹೇಳಿದ್ದಾರೆ ಎಂದು ಕೋವಿಡ್ಮೊದಲ ಹಂತದ ಲಾಕಡೌನ್ವೇಳೆ ಪ್ರಧಾನಿ ಮೋದಿ ದೀಪಗಳು ಅಥವಾ ಟಾರ್ಚಗಳನ್ನು ಬೆಳಗಿಸಲು ನಾಗರಿಕರಿಗೆ ಸೂಚಿಸಿದ್ದನ್ನು ರಾಹುಲ್ ನೆನಪಿಸಿಕೊಂಡರು.



ಯಾರಾದರೂ ನನ್ನ ಬಳಿಗೆ ಬಂದು ತಾನು ಜೈವಿಕನಲ್ಲ ಮತ್ತು ದೇವರಿಂದ ಕಳುಹಿಸಲ್ಪಟ್ಟವನು ಎಂದು ಹೇಳಿದರೆ, ಅದನ್ನು ಯಾರಿಗೂ ಹೇಳಬೇಡಿ ಅಥವಾ ಇದನ್ನು ಜೋರಾಗಿ ಹೇಳಬೇಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಆದರೆ ಪ್ರಧಾನಿ ತಾನು ಜೈವಿಕ ಅಲ್ಲ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಬೇರೆ ಎಲ್ಲಾ ಜನರು ಜೈವಿಕರು ಮತ್ತು ನಾನು ಮಾತ್ರ ಅಲ್ಲ ಎಂದು ಹೇಳುತ್ತಿದ್ದಾರೆ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.



ಬೇರೆ ಯಾರಾದರೂ ಅಂತಹ ಮಾತುಗಳನ್ನು ಹೇಳಿದರೆ, ನೀವು ಏನು ಹೇಳುತ್ತೀರಿ? ನೀನು ನನ್ನನ್ನು ಕ್ಷಮಿಸು ಸಹೋದರ, ನೀನು ನಿನ್ನ ಕೆಲಸ ಮಾಡು, ನನ್ನ ಕೆಲಸ ಮಾಡಲು ನನಗೆ ಬಿಡು ಎಂದು ಹೇಳುತ್ತೀರಿ. ಆದರೆ ಅವರ ಭಕ್ತರು ಪ್ರಧಾನಿಯನ್ನು ಹೊಗಳುತ್ತಾರೆ ಮತ್ತು ಅವರು ದೇವರಿಂದ ಕಳುಹಿಸಲ್ಪಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಚಪ್ಪಾಳೆ ತಟ್ಟುವಂತೆ ಅವರು ಜನರಿಗೆ ಹೇಳಿದ್ದಾರೆ. ಜನರು ಆಸ್ಪತ್ರೆಗಳ ಹೊರಗೆ ಕೊನೆಯುಸಿರೆಳೆದಾಗ, ಪ್ರಧಾನಿ ಇರಲಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.



ಜನರು ಯಾವತ್ತೂ ಭಾರತದ ಸಂವಿಧಾನ ಅಥವಾ ಧ್ವಜವನ್ನು ಒಪ್ಪಿಲ್ಲ. ಚುನಾವಣೆ ಭಾರತದ ಸಂವಿಧಾನವನ್ನು ರಕ್ಷಿಸಲು. ಅದು ಕೇವಲ ಒಂದು ಪುಸ್ತಕವಲ್ಲ, ಅದು ಸಾವಿರಾರು ವರ್ಷಗಳ ಸೈದ್ಧಾಂತಿಕ ಪರಂಪರೆಯನ್ನು ಹೊಂದಿದೆ ಎಂದು ರಾಹುಲ್ಹೇಳಿದರು.



ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ದ್ರಾವಿಡ ಮುನ್ನೇತ್ರ ಕಳಗಂ ನಾಯಕ ರಾಜಾ ಅವರು, ಪೆರಿಯಾರ್ ಅವರುದೇವರು ಅಸ್ತಿತ್ವದಲ್ಲಿಲ್ಲಎಂದು ಏಕೆ ಹೇಳಿದರು ಎಂಬುವುದು ಈಗ ಅನೇಕರಿಗೆ ಅರ್ಥವಾಗಿದೆ ಎಂದು ಹೇಳಿದ್ದಾರೆ.



ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮಹುವಾ ಮೊಯಿತ್ರಾ ಮೋದಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದು, ಅವರು ರಾಮನ ಬದಲಿಗೆ ದೇವಸ್ಥಾನಗಳಲ್ಲಿ ನರೇಂದ್ರ ಮೋದಿಯವರ ವಿಗ್ರಹಗಳನ್ನು ಪ್ರತಿಷ್ಠಾಪಿಸಬೇಕಿತ್ತು. ನರೇಂದ್ರ ಮೋದಿ ಮಾತನಾಡುವ ಕ್ಲಿಪ್ನ್ನು ನೋಡಿದೆ, ಅವರು ನಿಜವಾಗಿಯೂ ಮಾನವನಲ್ಲ, ದೈವಿಕವಾಗಿ ಹುಟ್ಟಿದ್ದಾರೆ, ನಮ್ಮೆಲ್ಲರನ್ನು ಉದ್ಧಾರ ಮಾಡಲು ಭೂಮಿಗೆ ಕಳುಹಿಸಲಾಗಿದೆ ಎಂದು ಅವರು ನಂಬುತ್ತಾರೆ. ರಾಮಲಲ್ಲಾ ಯಾಕೆ? ಬಿಜೆಪಿಯವರು ಎಲ್ಲ ದೇವಾಲಯಗಳಲ್ಲಿ ನಮೋ ಲಲ್ಲಾಗಳನ್ನು ಪ್ರತಿಷ್ಠಾಪಿಸಬೇಕಿತ್ತು ಎಂದು ಹೇಳಿದ್ದಾರೆ.



ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಅವರು, “ನನ್ನ ತಾಯಿ ಬದುಕಿರುವವರೆಗೂ ನಾನು ಜೈವಿಕವಾಗಿ ಹುಟ್ಟಿದ್ದೇನೆ ಎಂದು ಭಾವಿಸುತ್ತಿದ್ದೆ. ಆಕೆಯ ನಿಧನದ ನಂತರ, ನನ್ನ ಅನುಭವಗಳನ್ನು ನೋಡಿದಾಗ, ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಎಂದು ನನಗೆ ಮನವರಿಕೆಯಾಗಿದೆ. ಶಕ್ತಿ ನನ್ನ ದೇಹದ್ದಲ್ಲ. ಅದನ್ನು ದೇವರು ನನಗೆ ಕೊಟ್ಟಿದ್ದಾನೆ. ಅದಕ್ಕಾಗಿಯೇ ದೇವರು ನನಗೆ ಸಾಮರ್ಥ್ಯ, ಶಕ್ತಿ, ಶುದ್ಧ ಹೃದಯ ಮತ್ತು ಇದನ್ನು ಮಾಡಲು ಸ್ಫೂರ್ತಿ ನೀಡಿದ್ದಾನೆ. ನಾನು ದೇವರು ಕಳುಹಿಸಿದ ಸಾಧನವಲ್ಲದೆ ಬೇರೇನೂ ಅಲ್ಲ” ಎಂದು ಹೇಳಿದ್ದರು!.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವ ಉಳಿಸಿದ ಮಾನವೀಯತೆ : ದಿಲ್ಲಿ ಅಗ್ನಿ ದುರಂತದಲ್ಲಿ ಮುಸ್ಲಿಂ ಯುವಕರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆರೌಡಿಸಂಗೆ ಕಠಿಣ ಕಡಿವಾಣ: ಪ್ರತಿ ತಾಲ್ಲೂಕಿನಲ್ಲಿ ವಿಶೇಷ ನಿಗಾ ಪಡೆರಾಹುಲ್‌ ಗಾಂಧಿ-ಸಿದ್ದರಾಮಯ್ಯ ರಿಮೋಟ್‌ ಕಂಟ್ರೋಲ್‌ ಸರಕಾರ : ಆರ್‌.ಅಶೋಕಉ.ಪ್ರ. ವಿಧಿವಿಜ್ಞಾನ ಪ್ರಯೋಗಾಲಯಗಳ ದುಸ್ಥಿತಿಯಿಂದ ಕೊಲೆ, ಅತ್ಯಾಚಾರ ಆರೋಪಿಗಳಿಗೆ ಜಾಮೀನು: ಅಲಹಾಬಾದ ಹೈಕೋರ್ಟ ತೀವ್ರ ಕಳವಳಬೆಳಗಾವಿ : ಆದಿತ್ಯರಾಜ ಕ್ಯಾಪಿಟಲ್ ಮೇಲೆ ಅಧಿಕಾರಿಗಳ ದಾಳಿಟ್ರಂಪ್‌ಗೆ ಹಿನ್ನಡೆ : ಇರಾನ್ ಯುದ್ಧ ಅಂತ್ಯಗೊಳಿಸಲು ಅಮೆರಿಕ ಪ್ರತಿನಿಧಿಗಳ ಸಭೆ ನಿರ್ಣಯ ಅಂಗೀಕಾರಕೇರಳಕ್ಕೆ ಮುಂಗಾರು ಪ್ರವೇಶ: ಭಾರಿ ಮಳೆ ಮುನ್ಸೂಚನೆಕಾಂಗ್ರೆಸ್ ಹೈಕಮಾಂಡಗೆ ಹರಿಪ್ರಸಾದ ಕೃತಜ್ಞತೆಡಿ.ಕೆ. ಶಿವಕುಮಾರ ಪದಗ್ರಹಣಕ್ಕೆ ಕ್ಷಣಗಣನೆಹಿಂದೂ ಮಹಿಳೆ ಅಪಹರಣದ ಸುಳ್ಳು ಕಥೆ ಹೆಣೆದು ಮುಸ್ಲಿಂ ಯುವಕರನ್ನು ಸಿಲುಕಿಸಲು ಯತ್ನ, ಆರೋಪಿ ಪರಾರಿ