LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

‘ಕುಮಾರಕೃಪ’ ಹೆಸರು ಬದಲಾವಣೆಗೆ ವಾಟಾಳ್ ಆಕ್ರೋಶ: ಚಾಪೆ ಹಾಸಿ ಪ್ರತಿಭಟನೆಗೆ ನಿರ್ಧಾರ

ಬೆಂಗಳೂರು, ನ. 16: ಐತಿಹಾಸಿಕ ಕುಮಾರಕೃಪ ನಿವಾಸಕ್ಕೆ ‘ಗಂಗಾ’ ಎಂದು ಮರುನಾಮಕರಣ ಮಾಡಿರುವುದನ್ನು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ ತೀವ್ರವಾಗಿ ಖಂಡಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಈ ಕ್ರಮ ವಿರೋಧಿಸಿ ಚಾಪೆ ಹಾಸಿ ಮಲಗಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಕೃಪ ಐತಿಹಾಸಿಕ ಕಟ್ಟಡವಾಗಿದ್ದು, ಅದರ ಹೆಸರನ್ನು ಬದಲಾಯಿಸುವುದು ಅಕ್ಷಮ್ಯ ಅಪರಾಧ. ಇತಿಹಾಸಕ್ಕೆ ಅಪಚಾರ ಮಾಡುವ ಇಂತಹ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಡಿ.ಕೆ. ಶಿವಕುಮಾರ ನನ್ನ ಸ್ನೇಹಿತರು. ನಾವಿಬ್ಬರೂ ವಿಧಾನಸಭೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರೊಂದಿಗೆ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ. ಆದರೆ ಎಷ್ಟೇ ಸ್ನೇಹವಿದ್ದರೂ ಸಿದ್ದರಾಮಯ್ಯ ಅವರೇ ಶ್ರೇಷ್ಠ. ಅವರ ಕೆಲಸಗಳನ್ನು ಗಮನಿಸಿದರೆ ರಾಜ್ಯಕ್ಕೆ ಸದ್ಯ ಅವರೇ ಬೇಕಾಗಿದ್ದಾರೆ’ ಎಂದರು.

ಕುಮಾರಕೃಪ ಐತಿಹಾಸಿಕ ಮಹತ್ವ ಹೊಂದಿರುವ ನಿವಾಸ. ಅದಕ್ಕೆ ಗಂಗಾ ಎಂದು ನಾಮಕರಣ ಮಾಡುವ ಅಗತ್ಯವೇನಿತ್ತು? ಗಂಗಾ ಅಥವಾ ಕಾವೇರಿ ಹೆಸರಿಡುವುದಕ್ಕೆ ವಿರೋಧವಿಲ್ಲ. ಆದರೆ ಐತಿಹಾಸಿಕ ಕಟ್ಟಡದ ಮೂಲ ಹೆಸರನ್ನು ಉಳಿಸಿಕೊಳ್ಳಬೇಕು. ಶಿವಕುಮಾರ ಅವರು ಸದಾಶಿವನಗರದ ತಮ್ಮ ವಿಶಾಲ ನಿವಾಸದಲ್ಲಿಯೇ ಉಳಿದಿದ್ದರೆ ಗೌರವ ಹೆಚ್ಚಾಗುತ್ತಿತ್ತು ಎಂದು ಹೇಳಿದರು.

‘ಶಿವಕುಮಾರ ಅವರಿಗೆ ದರ್ಬಾರ್ ನಡೆಸುವ ಮನೋಭಾವ ಬಂದಿದೆ. ಹಿಂದೆ ನನಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡುವುದಾಗಿ ಹೇಳಿದ್ದರು. ನಿಮ್ಮ ಪ್ರಶಸ್ತಿ ಬೇಡ, ಕನ್ನಡಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಾಕು ಎಂದು ನಿರಾಕರಿಸಿದ್ದೆ’ ಎಂದು ತಿಳಿಸಿದರು.

ಬಡವರಿಗೆ ಮನೆ ಕೊಡಿ, ಐಷಾರಾಮಿ ನಿವಾಸವಲ್ಲ

ಚಾಮರಾಜನಗರದಲ್ಲಿ ಸುಮಾರು 50 ಸಾವಿರ ಜನರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಮನೆ ಒದಗಿಸುವ ಬದಲು ಐತಿಹಾಸಿಕ ನಿವಾಸವನ್ನು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನವೀಕರಿಸಿಕೊಂಡು ಆರಾಮವಾಗಿ ವಾಸಿಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

ರಾಜ್ಯದ ಬಡವರಿಗೆ ಮನೆ ನಿರ್ಮಿಸಿಕೊಟ್ಟರೆ ಸರ್ಕಾರಕ್ಕೆ ಗೌರವ ಬರುತ್ತದೆ. ಆದರೆ ಐತಿಹಾಸಿಕ ಕುಮಾರಕೃಪ ನಿವಾಸದ ಸ್ವರೂಪ ಮತ್ತು ಹೆಸರು ಬದಲಾಯಿಸುವುದು ಇತಿಹಾಸಕ್ಕೆ ಮಾಡಿದ ಅಪಚಾರ. ಈ ಬೆಳವಣಿಗೆ ವಿರುದ್ಧ ಯಾರೂ ಧ್ವನಿ ಎತ್ತದಿರುವುದು ವಿಷಾದನೀಯ ಎಂದು ವಾಟಾಳ್ ನಾಗರಾಜ ಹೇಳಿದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST