LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ತಂತ್ರಜ್ಞಾನವೇ ಬಲ

ಹೊಸದಿಲ್ಲಿ, ಮೇ 11 : ರಾಷ್ಟ್ರೀಯ ತಂತ್ರಜ್ಞಾನ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯ ಕೋರಿದ್ದು, ಸ್ವಾವಲಂಬಿ ಭಾರತದ ನಿರ್ಮಾಣದಲ್ಲಿ ತಂತ್ರಜ್ಞಾನ ಪ್ರಮುಖ ಆಧಾರ ಸ್ಥಂಭವಾಗಿದೆ ಎಂದು ಹೇಳಿದ್ದಾರೆ.

1998ರಲ್ಲಿ ರಾಜಸ್ಥಾನದ ಪೋಖ್ರಾನ್‌ನಲ್ಲಿ ಭಾರತ ಯಶಸ್ವಿಯಾಗಿ ನಡೆಸಿದ ಪರಮಾಣು ಪರೀಕ್ಷೆಗಳ ಸ್ಮರಣಾರ್ಥವಾಗಿ ಪ್ರತಿವರ್ಷ ರಾಷ್ಟ್ರೀಯ ತಂತ್ರಜ್ಞಾನ ದಿನ ಆಚರಿಸಲಾಗುತ್ತಿದೆ. ಆ ಐತಿಹಾಸಿಕ ಕ್ಷಣವು ಭಾರತದ ವೈಜ್ಞಾನಿಕ ಶ್ರೇಷ್ಠತೆ ಹಾಗೂ ಅಚಲ ಸಂಕಲ್ಪದ ಪ್ರತೀಕವಾಗಿದೆ ಎಂದು ಮೋದಿ ತಿಳಿಸಿದ್ದಾರೆ.

ರಾಷ್ಟ್ರೀಯ ತಂತ್ರಜ್ಞಾನ ದಿನದ ಶುಭಾಶಯಗಳು. ಪೋಖ್ರಾನ್‌ನಲ್ಲಿ ಯಶಸ್ವಿ ಪರೀಕ್ಷೆಗಳನ್ನು ಸಾಧ್ಯವಾಗಿಸಿದ ವಿಜ್ಞಾನಿಗಳ ಪರಿಶ್ರಮ ಮತ್ತು ಸಮರ್ಪಣೆಯನ್ನು ದೇಶ ಸದಾ ಹೆಮ್ಮೆಯಿಂದ ಸ್ಮರಿಸುತ್ತದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ತಂತ್ರಜ್ಞಾನವು ಸ್ವಾವಲಂಬಿ ಭಾರತದ ಕನಸಿಗೆ ಬಲ ನೀಡುತ್ತಿದ್ದು, ನವೋದ್ಯಮಕ್ಕೆ ಉತ್ತೇಜನ, ಹೊಸ ಅವಕಾಶಗಳ ಸೃಷ್ಟಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ದೇಶದ ಪ್ರಗತಿಗೆ ಕಾರಣವಾಗುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಪ್ರತಿಭಾವಂತರಿಗೆ ಪ್ರೋತ್ಸಾಹ, ಸಂಶೋಧನೆಗೆ ಬೆಂಬಲ ಹಾಗೂ ಜನರ ಆಶಯಗಳಿಗೆ ಸ್ಪಂದಿಸುವ ಪರಿಹಾರಗಳನ್ನು ರೂಪಿಸುವತ್ತ ಸರ್ಕಾರದ ಗಮನ ಮುಂದುವರಿದಿದೆ ಎಂದೂ ಅವರು ತಿಳಿಸಿದ್ದಾರೆ.

1998ರ ಮೇ 11 ಮತ್ತು 13ರಂದು ಪೋಖ್ರಾನ್ ಮರುಭೂಮಿಯಲ್ಲಿ ಭಾರತ 5 ಪರಮಾಣು ಪರೀಕ್ಷೆಗಳನ್ನು ನಡೆಸಿತ್ತು. ಮೇ 11ರಂದು ಮಧ್ಯಾಹ್ನ 3.45ಕ್ಕೆ ಮೊದಲ 3 ಸ್ಫೋಟಗಳು ಏಕಕಾಲದಲ್ಲಿ ನಡೆದಿದ್ದವು. ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದ ಮಹತ್ವದ ಕ್ಷಣವಾಗಿತ್ತು ಎಂದು ಮೋದಿ ಹೇಳಿದ್ದಾರೆ.

ದೇಶದ ವಿಜ್ಞಾನಿಗಳೇ ರಾಷ್ಟ್ರದ ಗೌರವ ಮತ್ತು ಸ್ವಾಭಿಮಾನದ ನಿಜವಾದ ಶಿಲ್ಪಿಗಳು ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST