LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ಬೆಳಗಾವಿಯಲ್ಲಿ ತಲ್ವಾರನಿಂದ ದಾಳಿ : 6 ಆರೋಪಿಗಳ ಬಂಧನ

ಬೆಳಗಾವಿ, ಮೇ 5 : ಇಲ್ಲಿಯ ನ್ಯೂಗಾಂಧಿ ನಗರ ಪಕ್ಕದಲ್ಲಿರುವ ಅಮನ್ ನಗರದಲ್ಲಿ ಮೂವರು ಯುವಕರ ಮೇಲೆ ತಲ್ವಾರನಿಂದ ದಾಳಿ ಮಾಡಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿ ಮಾಳಮಾರುತಿ ಠಾಣೆ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಹಳೇ ವೈಷಮ್ಯ ಹಿನ್ನೆಲೆ ಆರೋಪಿಗಳು ಮಂಗಳವಾರ ಮೂವರು ಯುವಕರ ಮೇಲೆ ತಲ್ವಾರ‌ನಿಂದ ದಾಳಿ ನಡೆಸಿದ್ದಾರೆ. ಗಾಯಗೊಂಡ ಯುವಕರನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಲು ಯತ್ನಿಸಿದರೆನ್ನಲಾಗಿದ್ದು , ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಘಟನೆ ನಡೆದ ಒಂದು ಗಂಟೆಯೊಳಗೆ ಆರು ಮಂದಿಯನ್ನು ಬಂಧಿಸಿದರು ಎನ್ನಲಾಗಿದೆ.
ಬಂಧಿತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರಿದಿದ್ದು, ದಾಳಿಗೆ ನಿಖರ ಕಾರಣ ಏನು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ವೈಷಮ್ಯಕ್ಕೆ ಕಾರಣವಾದ ಅಂಶಗಳು ಹಾಗೂ ದಾಳಿಗೆ ಪೂರ್ವ ಯೋಜನೆ ಇದ್ದಿತ್ತೇ ಎಂಬುದರ ಕುರಿತು ಹಲವು ಕೋನಗಳಲ್ಲಿ ತನಿಖೆ ನಡೆಯುತ್ತಿದೆ. ಇನ್ನೂ ಯಾರಾದರೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತೂ ಪರಿಶೀಲನೆ ನಡೆಯುತ್ತಿದ್ದು, ಅಗತ್ಯವಿದ್ದಲ್ಲಿ ಮತ್ತಷ್ಟು ಬಂಧನ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. 
ಪ್ರಕರಣ ಸಂಬಂಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೆ.21ರಿಂದ ವಿಧಾನಮಂಡಲದ ವಿಶೇಷ ಅಧಿವೇಶನನೀರಾವರಿ ಸೌಲಭ್ಯಕ್ಕೆ ₹3.25 ಲಕ್ಷ ಸಹಾಯಧನ; ಅರ್ಜಿ ಸಲ್ಲಿಕೆಗೆ ಸೆ.30 ಕೊನೆಯ ದಿನಅಭಿನಂದನ್ ಅವಧಿಗೂ ಮುನ್ನ ನಿವೃತ್ತಿ; ಖಾಸಗಿ ವಿಮಾನ ಪೈಲಟ್ ಆಗಿ ಹೊಸ ವೃತ್ತಿಭಾರತದ ಆರ್ಥಿಕ ಬೆಳವಣಿಗೆ ಜಗತ್ತಿಗೆ ವಿಶ್ವಾಸದ ಮೂಲ: ಪ್ರಧಾನಿ ಮೋದಿನೇಪಾಳ: 7,500 ಮನೆ ಸಂಪೂರ್ಣ ನಾಶಕೈದಿಯೊಂದಿಗೆ ಸರಸ ಸಲ್ಲಾಪ : ಪಿಎಸ್‌ಐ ಜಯಶ್ರೀ ಅಮಾನತುಕರಡು ಮತದಾರರ ಪಟ್ಟಿಯಿಂದ ರಾಘವ ಚಡ್ಡಾ ಹೆಸರು ಡಿಲಿಟ್ಜಿಎಸ್‌ಟಿ ಸಂಗ್ರಹ ಶೇ. 14.8ರಷ್ಟು ಏರಿಕೆ: ಆಗಸ್ಟನಲ್ಲಿ ₹2 ಲಕ್ಷ ಕೋಟಿ ವರಮಾನಬಿಜೆಪಿ–ಜೆಡಿಎಸ್‌ನ ನೋಬಾಲ್, ಫುಲ್‌ಟಾಸ್‌ಗೆ ನನ್ನ ವಿಕೆಟ್ ಬೀಳುವುದಿಲ್ಲ: ಪ್ರಿಯಾಂಕ್ ಖರ್ಗೆಡಿಸಿಪಿ ನೇಮಗೌಡ ಮೇಲೆ ಹಲ್ಲೆ ಆರೋಪ: ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ವಿರುದ್ಧ ಜೆಡಿಎಸ್ ವಾಗ್ದಾಳಿ