LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಬೆಳಗಾವಿ ರಾಮತೀರ್ಥನಗರದ ಶ್ರೀ ಕರೆಮ್ಮಾದೇವಿ ಜಾತ್ರಾ ಮಹೋತ್ಸವ

ಬೆಳಗಾವಿ, ಸೆ. 19- ಇಲ್ಲಿಯ ರಾಮತೀರ್ಥ ನಗರದ ಬಸವೇಶ್ವರ ಬಡಾವಣೆಯ ಶ್ರೀ ಕರೆಮ್ಮ ದೇವಿಯ 13 ನೇ ವರ್ಷದ ಜಾತ್ರಾ ಮಹೋತ್ಸವ ಸೆಪ್ಟೆಂಬರ್ 20 ರಿಂದ ನಡೆಯಲಿದೆ.



ದಿನಾಂಕ 20 ರಂದು ಸಂಜೆ 7:00 ಕ್ಕೆ ಡೊಳ್ಳಿನ ಹಾಡಿಕೆ, ದಿನಾಂಕ 21 ರಂದು ಬೆಳಗ್ಗೆ 6:30 ಕ್ಕೆ ಶ್ರೀ ಕರೆಮ್ಮ ದೇವಿಗೆ ಪ್ರಾತಃಕಾಲದಲ್ಲಿ ಅಭಿಷೇಕ, ಮಹಾಪೂಜೆ ನೆರವೇರಲಿದೆ. 9:30 ಕ್ಕೆ ದೇವಿಯ ಪಲ್ಲಕಿ ಉತ್ಸವ ಬಸವೇಶ್ವರ ಬಡಾವಣೆಯ ಎಲ್ಲಾ ಓಣಿಗಳಲ್ಲಿ ಸಂಚರಿಸಲಿದೆ. ನಂತರ ಮುತ್ತೈದೆಯರಿಂದ ಉಡಿ ತುಂಬುವ ಕಾರ್ಯಕ್ರಮ, 12:30 ಕ್ಕೆ ಮಹಾಪ್ರಸಾದ ಏರ್ಪಡಿಸಲಾಗಿದೆ.



ದಿನಾಂಕ 22 ರಿಂದ ಪ್ರತಿದಿನ ಸಂಜೆ 7 ಕ್ಕೆ ಶ್ರೀ ಶಂಕರಯ್ಯ ಸ್ವಾಮಿಗಳು ಪೂರ್ವಿಮಠ ತಹಶೀಲ್ದಾರ ಗಲ್ಲಿ, ಬೆಳಗಾವಿ ಇವರಿಂದ ಪಾರಾಯಣ, ನಂತರ ಸಂಗೀತ ಕಾರ್ಯಕ್ರಮ ನಡೆಯಲಿದೆ.  ಅಕ್ಟೋಬರ್ 2 ರಂದು ಸಂಜೆ 6:30 ಕ್ಕೆ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬನ್ನಿ ಪೂಜೆ ನೆರವೇರಲಿದೆ ಎಂದು ಜಾತ್ರಾ ಮಹೋತ್ಸವ ಕಮಿಟಿ ತಿಳಿಸಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST