LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ರಾಜ್ಯ ಪ್ರವೇಶಿಸಲು ಶಿವಸೇನೆ ವಿಫಲ ಯತ್ನ

ಬೆಳಗಾವಿ, ೧: ತಮ್ಮ ಪ್ರವೇಶಕ್ಕೆ ನಿಷೇಧವಿದ್ದರೂ ಬೆಳಗಾವಿಗೆ ಆಗಮಿಸಲು ಯತ್ನಿಸಿದ್ದ ಮಹಾರಾಷ್ಟ್ರದ ಸುಮಾರು 50 ಶಿವಸೇನೆಯ ಕಾರ್ಯಕರ್ತರನ್ನು ಕರ್ನಾಟಕ ಪೊಲೀಸರು ರಾಜ್ಯದ ನಿಪ್ಪಾಣಿ ಗಡಿಯಲ್ಲಿ ತಡೆದು ಮಹಾರಾಷ್ಟ್ರದ ಪೊಲೀಸರಿಗೆ ಹಸ್ತಾಂತರಿಸಿದರು.



ರಾಜ್ಯೋತ್ಸವದ ಹಿನ್ನಲೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ 'ಕರಾಳ ದಿನ' ಆಚರಣೆಗೆ ನೀಡಿದ್ದ ಕರೆಗೆ ಸ್ಪಂದಿಸಿ ಕೊಲ್ಹಾಪುರ ಉದ್ದವ ಠಾಕ್ರೆ ಬಣದ ಶಿವಸೇನೆಯ ಸುಮಾರು 50 ಕಾರ್ಯಕರ್ತರು ಕಾಗಲ್ ತಾಲೂಕಿನವರೆಗೂ ವಾಹನಗಳಲ್ಲಿ ಬಂದು ಅಲ್ಲಿಂದ ನಿಪ್ಪಾಣಿಯ ಬಳಿಯ ಕೊಗನೊಳ್ಳಿ ಗಡಿಯವರೆಗೂ ಪಾದಯಾತ್ರೆಯಲ್ಲಿ ಬಂದು ಕರ್ನಾಟಕ ಪ್ರವೇಶಿಸಲು ಯತ್ನಿಸಿದರು. ಆದರೆ ಕೊಗನೋಳ್ಳಿ ಚೆಕ್ ಪೋಸ್ಟನಲ್ಲಿದ್ದ ನಿಪ್ಪಾಣಿ ಪೊಲೀಸರು ಅವರನ್ನು ತಡೆದರು. ಇದನ್ನು ಪ್ರತಿಭಟಿಸಿ ಪುಣೆ-ಬೆಂಗಳೂರು ರಾಷ್ಟೀಯ ಹೆದ್ದಾರಿಯ ಮೇಲೆಯೇ ಕುಳಿತು ಎಂಇಎಸ್ ಸಾಂಪ್ರದಾಯಿಕ ಘೋಷಣೆಯಾದ ಬೆಳಗಾವಿ, ನಿಪ್ಪಾಣಿ, ಖಾನಾಪುರ, ಕಾರವಾರ, ಬೀದರ, ಭಾಲ್ಕಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಲೇಬೇಕೆಂದು ಘೋಷಣೆ ಮಾಡಿದರು.



ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಕೊಲ್ಹಾಪುರ ಪೊಲೀಸರು ಅವರನ್ನು ವಶಕ್ಕೆ ಪಡೆದು ಹಿಂದಕ್ಕೆ ಕರೆದುಕೊಂಡು ಹೋದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೆ.21ರಿಂದ ವಿಧಾನಮಂಡಲದ ವಿಶೇಷ ಅಧಿವೇಶನನೀರಾವರಿ ಸೌಲಭ್ಯಕ್ಕೆ ₹3.25 ಲಕ್ಷ ಸಹಾಯಧನ; ಅರ್ಜಿ ಸಲ್ಲಿಕೆಗೆ ಸೆ.30 ಕೊನೆಯ ದಿನಅಭಿನಂದನ್ ಅವಧಿಗೂ ಮುನ್ನ ನಿವೃತ್ತಿ; ಖಾಸಗಿ ವಿಮಾನ ಪೈಲಟ್ ಆಗಿ ಹೊಸ ವೃತ್ತಿಭಾರತದ ಆರ್ಥಿಕ ಬೆಳವಣಿಗೆ ಜಗತ್ತಿಗೆ ವಿಶ್ವಾಸದ ಮೂಲ: ಪ್ರಧಾನಿ ಮೋದಿನೇಪಾಳ: 7,500 ಮನೆ ಸಂಪೂರ್ಣ ನಾಶಕೈದಿಯೊಂದಿಗೆ ಸರಸ ಸಲ್ಲಾಪ : ಪಿಎಸ್‌ಐ ಜಯಶ್ರೀ ಅಮಾನತುಕರಡು ಮತದಾರರ ಪಟ್ಟಿಯಿಂದ ರಾಘವ ಚಡ್ಡಾ ಹೆಸರು ಡಿಲಿಟ್ಜಿಎಸ್‌ಟಿ ಸಂಗ್ರಹ ಶೇ. 14.8ರಷ್ಟು ಏರಿಕೆ: ಆಗಸ್ಟನಲ್ಲಿ ₹2 ಲಕ್ಷ ಕೋಟಿ ವರಮಾನಬಿಜೆಪಿ–ಜೆಡಿಎಸ್‌ನ ನೋಬಾಲ್, ಫುಲ್‌ಟಾಸ್‌ಗೆ ನನ್ನ ವಿಕೆಟ್ ಬೀಳುವುದಿಲ್ಲ: ಪ್ರಿಯಾಂಕ್ ಖರ್ಗೆಡಿಸಿಪಿ ನೇಮಗೌಡ ಮೇಲೆ ಹಲ್ಲೆ ಆರೋಪ: ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ವಿರುದ್ಧ ಜೆಡಿಎಸ್ ವಾಗ್ದಾಳಿ