LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಮರಾಠಿ ಭಾಷೆಗೆ ಭಾಷಾ ಸ್ಥಾನಮಾನಕ್ಕಾಗಿ ಪ್ರಧಾನಿಗೆ ಪತ್ರ ಬರೆದ ಶಿಂಧೆ

ಮುಂಬೈ: ಮರಾಠಿ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲು ಅನುಮತಿ ನೀಡಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.



ಈ ಬಗ್ಗೆ ಮಹಾರಾಷ್ಟ್ರ ಸರ್ಕಾರವು 2013ರ ನವೆಂಬರ್ 16 ರಂದು ಕೇಂದ್ರ ಸರ್ಕಾರಕ್ಕೆ ವಿವರವಾದ ಪ್ರಸ್ತಾವನೆಯನ್ನು ಕಳುಹಿಸಿತ್ತು ಎಂದು ಏಕನಾಥ ಶಿಂಧೆ ಪ್ರಧಾನಿಗೆ ಪತ್ರ ಬರೆದಿದ್ದಾರೆ.



ಈ ಪ್ರಸ್ತಾವನೆಯ ಸ್ಥಿತಿಗತಿಯ ಕುರಿತು ಮಹಾರಾಷ್ಟ್ರ ನಿಯಮಿತವಾಗಿ ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ. ಮಹಾರಾಷ್ಟ್ರದ ಜನರು ಸಹಿ ಅಭಿಯಾನವನ್ನು ನಡೆಸಿದ್ದಾರೆ. ಈ ಬೇಡಿಕೆಯನ್ನು ಬೆಂಬಲಿಸಿ 1.20 ಲಕ್ಷ ಸಹಿಗಳನ್ನು ಸಂಗ್ರಹಿಸಲಾಗಿದೆ. ಇದನ್ನು ಭಾರತದ ರಾಷ್ಟ್ರಪತಿಗಳಿಗೆ ಕಳುಹಿಸಲಾಗಿದೆ ಎಂದು ಏಕನಾಥ ಶಿಂಧೆ ಹೇಳಿದ್ದಾರೆ.



ಈ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಈ ವರ್ಷದ ಫೆಬ್ರವರಿ 3ರಂದು ರಾಜ್ಯಸಭೆಗೆ ತಿಳಿಸಿದ್ದರು. ಈ ಪ್ರಸ್ತಾವನೆಯು ಬಹಳ ಸಮಯದಿಂದ ಪರಿಗಣನೆಯಲ್ಲಿದೆ. ಆದಷ್ಟು ಬೇಗ ಇದಕ್ಕೆ ಅನುಮೋದನೆಯನ್ನು ನೀಡಬೇಕು ಎಂದು ನಾನು ವಿನಂತಿಸುತ್ತೇನೆ ಎಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Author
Samadarshi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿಯಲ್ಲಿ ಅಕ್ರಮ ಮದ್ಯ ಮಾರಾಟ: ₹44,175 ಮೌಲ್ಯದ ಮದ್ಯ, ಬಿಯರ್ ಬಾಟಲಿ ವಶಬೆಳಗಾವಿಯಲ್ಲಿ ಅಕ್ರಮ ಮದ್ಯ ಮಾರಾಟ: ₹44,175 ಮೌಲ್ಯದ ಮದ್ಯ, ಬಿಯರ್ ಬಾಟಲಿ ವಶರಸ್ತೆ ಕಾಮಗಾರಿ ವೇಳೆ ವಿದ್ಯುತ್ ಸ್ಪರ್ಶ: 8 ಕಾರ್ಮಿಕರ ದುರ್ಮರಣಜಾತಿ ಬಲದಿಂದಲೇ ಕುಮಾರಸ್ವಾಮಿ ಸಿಎಂ ಆಗಿದ್ದು: ಪ್ರಿಯಾಂಕ್ ಖರ್ಗೆ ವಾಗ್ದಾಳಿಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಪ್ರಕರಣ: ಕೃಪಾ ಆಳ್ವಾ ಸೇರಿ ಮೂವರಿಗೆ ಮಧ್ಯಂತರ ಜಾಮೀನುಎಪಿಎಂಸಿಗಳಲ್ಲಿ ಕಮಿಷನ್ ಹಾವಳಿ ತಡೆಗೆ ಆಗ್ರಹಿಸಿ ರೈತರ ಅನಿರ್ದಿಷ್ಟಾವಧಿ ಧರಣಿಸಕ್ಕರೆ ಮಾರಾಟ ದರ ಆಧರಿಸಿ ಕಬ್ಬಿನ ಬೆಲೆ ನಿಗದಿ ಅಸಾಧ್ಯ: ಸತೀಶ ಜಾರಕಿಹೊಳಿನನ್ನ ವಿರುದ್ಧ ಕೇಂದ್ರ ಸಚಿವರಿಂದ ರಾಜಕೀಯ ಸಂಚು: ಪ್ರಿಯಾಂಕ್ ಖರ್ಗೆಆಯೋಗದ ಪರ ಬಿಜೆಪಿ ಬ್ಯಾಟಿಂಗ್; ಹೆಸರು ತೆಗೆದುಹಾಕುವುದು ಕಳ್ಳತನವಲ್ಲಎಸ್‌ಐಆರ್ ಪಟ್ಟಿ ತಿರಸ್ಕರಿಸಲು ರಾಜ್ಯ ಸರ್ಕಾರಕ್ಕೆ ಜನಪರ ಸಂಘಟನೆಗಳ ಒತ್ತಾಯ