LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಆರು ದಿನಗಳ ನಂತರ ಪತ್ತೆಯಾಯ್ತು ರಾಜು ಝವರ್‌ ಶವ

ಗೋಕಾಕ, ೧೭-  ಕಳೆದ ಶುಕ್ರವಾರ ದಿ.೧೦ ರ ಸಂಜೆಯಿಂದ ಕಾಣೆಯಾಗಿದ್ದ ಗೋಕಾಕದ ಪ್ರತಿಷ್ಠಿತ ಝವರ್ ಕುಟುಂಬದ  ಬಂಗಾರದ ವ್ಯಾಪಾರಿ ರಾಜು ಉರ್ಫ ಮುನ್ನಾ ಝವರ್ ಅವರ ಶವ ಆರು ದಿನಗಳ ಬಳಿಕ ಸತತ ಹುಡುಕಾಟದ ನಂತರ ಪತ್ತೆಯಾಗಿದೆ.



ಗೋಕಾಕ ತಾಲೂಕಿನ ಪಂಚನಾಯ್ಕನಹಟ್ಟಿ ಬಳಿ ಗುರುವಾರ ರಾತ್ರಿ ಶವ ಪತ್ತೆಯಾಗಿದೆ. ಕೆನಾಲ್ ನ ಪೈಪಿನಲ್ಲಿ ಸೇರಿಕೊಂಡಿದ್ದ ಶವವನ್ನು ಪೈಪ್‌ ಒಡೆದು ಹೊರ ತೆಗೆಯಲಾಯಿತು.



ಘಟನೆಯ ವಿವರ : ರಾಜು ಝವರ್ ಅವರನ್ನು ವೈದ್ಯ ಸಚಿನ ಶಿರಗಾವಿ ಮತ್ತು ಹುಕ್ಕೇರಿ ತಾಲೂಕಿನ ವೈದ್ಯ ಡಾ. ಶಿವಾನಂದ ಪಾಟೀಲ ಸೇರಿದಂತೆ ಮೂವರು ಸುಪಾರಿ ಹಂತಕರು ಹತ್ಯೆ ಮಾಡಿದ್ದಾರೆ. ಡಾ. ಶಿರಗಾವಿ ಕಾರಿನಲ್ಲಿ ಯೋಗಿಕೊಳ್ಳ ರಸ್ತೆಗೆ ಕರೆದುಕೊಂಡು ಹೋಗಿ ಹರಿತವಾದ ಚಾಕುವಿನಿಂದ ಕುತ್ತಿಗೆ ಕತ್ತರಿಸಿ ದೇಹದ ಇತರ ಭಾಗಗಳಿಗೂ ಇರಿದು ಕಾಲುವೆಗೆ ಎಸೆದಿದ್ದಾರೆ.



ಮೊದಲು ಅಲ್ಪಸ್ವಲ್ಪ ಪರಿಚಯವಿದ್ದ ರಾಜು ಝವರ ಮತ್ತು ಡಾ. ಶಿರಗಾವಿಯ ಸ್ನೇಹ ಕೋವಿಡ್ ಸಮಯದಲ್ಲಿ ಹೆಚ್ಚು ದೃಢವಾಗಿತ್ತು. ಆಗ ರಾಜು ಝವರ ಅವರ ಬಳಿ ತಮ್ಮ ಸ್ಥಿರಾಸ್ತಿಯ ಕಾಗದಪತ್ರಗಳನ್ನು ಒತ್ತೆಯಿಟ್ಟು, ಡಾ.ಸಚಿನ ಬಡ್ಡಿಯ ಮೇಲೆ 1.90 ಕೋಟಿ ರೂಪಾಯಿ ಸಾಲ ಪಡೆದಿದ್ದ. ಆದರೆ ಈ ವರೆಗೂ ಒಂದು ರೂಪಾಯಿಯನ್ನೂ ಹಿಂದಿರುಗಿಸಿರಲಿಲ್ಲ ಹಾಗು ಈ ಕುರಿತು ಇಬ್ಬರ ನಡುವೆ ಹಲವು ಬಾರಿ ವಾದ ವಿವಾದವುಂಟಾಗಿತ್ತು ಎನ್ನಲಾಗಿದೆ.



ನೀಡಿದ್ದ ಸಾಲ ಹಿಂದಿರುಗಿಸಲು ಒತ್ತಡ ಹೇರುತ್ತಿದ್ದ ಝವರ್ ಅವರನ್ನು ಸ್ವಲ್ಪ ಹಣ ಹಿಂದಿರುಗಿಸುವದಾಗಿಯೂ, ತಮ್ಮ ಆಸ್ಪತ್ರೆಗೆ ಬರಬೇಕೆಂದು ಕರೆಯಿಸಿಕೊಂಡಿದ್ದ ಡಾ. ಶಿರಗಾವಿ, ಅವರ ಬೈಕ್ ತಮ್ಮ ಆಸ್ಪತ್ರೆ ಮುಂದೆ ನಿಲ್ಲಿಸಿ ತಮ್ಮ ಕಾರಿನಲ್ಲಿ ಯೋಗಿಕೊಳ್ಳಕ್ಕೆ ಕರೆದುಕೊಂಡು ಹೋಗಿದ್ದ. ಆಗ ಜೊತೆಯಲ್ಲಿ ಬಾಡಿಗೆ ಹಂತಕರೂ ಇದ್ದರು. ಯೋಗಿಕೊಳ್ಳಕ್ಕೆ ಕರೆದೊಯ್ದು ಚಾಕುವಿನಿಂದ ಅವರ ಮೇಲೆ ದಾಳಿ ಮಾಡಿ ಕುತ್ತಿಗೆಗೆ ಮತ್ತು ಇತರ ಅಂಗಗಳಿಗೆ ಇರಿದು ಕಾಲುವೆಗೆ ಎಸೆದು ಬಂದಿದ್ದರು.



“ಡಾ. ಶಿರಗಾವಿ ಹಣ ನೀಡಲು ಕರೆದಿದ್ದಾರೆ, ಹೋಗಿ ಬರುತ್ತೇನೆʼʼ ಎಂದು ಮನೆಯವರಿಗೆ ತಿಳಿಸಿದ್ದ ರಾಜು ಅವರು, ತಡರಾತ್ರಿಯಾದರೂ ಹಿಂದಿರುಗದ್ದರಿಂದ ಮತ್ತು ಅವರ ಮೊಬೈಲ್ ಬಂದ್ ಆಗಿದ್ದರಿಂದ ಮನೆಯವರು ಡಾ. ಶಿರಗಾವಿಗೆ ಕಾಲ್ ಮಾಡಿದ್ದಾರೆ. ಆದರೆ ಅವರು ಕಾಲ್ ತೆಗೆದುಕೊಂಡಿಲ್ಲ. ಆಗ ಮನೆಯವರು ಗೋಕಾಕ ಪೊಲೀಸರಿಗೆ ರಾಜು ಅವರು ಕಾಣೆಯಾಗಿದ್ದ ಬಗ್ಗೆ ಪ್ರಕರಣ ದಾಖಲಿಸಿದ್ದರು.



ಅದೇ ರಾತ್ರಿ ಡಾ. ಶಿರಗಾವಿ ಆಸ್ಪತ್ರೆಗೆ ಹೋಗಿದ್ದ ಪೊಲೀಸರು, ರಾಜು ಅವರ ಬೈಕ್ ಆಸ್ಪತ್ರೆಯ ಆವರಣದಲ್ಲಿ ನಿಂತಿರುವದನ್ನು ಕಂಡು ಡಾ. ಶಿರಗಾವಿಯವರನ್ನು ವಿಚಾರಿಸಿದಾಗ ರಾಜು ಝವರ್‌ ಅವರು ಯಾವಾಗ ಬೈಕ್ ನಿಲ್ಲಿಸಿ ಹೋದರು ತಮಗೆ ಗೊತ್ತಿಲ್ಲ. ತಾವು ಫೋನ್ ತೆಗೆದುಕೊಳ್ಳದೇ ಇರುವದಕ್ಕೆ ಫೋನ್ ಸೈಲೆಂಟ್ ಮೋಡ್ ನಲ್ಲಿಟ್ಟಿದ್ದೇ ಕಾರಣವೆಂದು ತಿಳಿಸಿದ್ದರು. ಆದರೂ ಸಂಶಯಗೊಂಡ ಗೋಕಾಕ ಪೊಲೀಸರು ರಾಜು ಝವರ್‌ ಅವರ ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಮಾಡಿದಾಗ ಡಾ. ಸಚಿನ ಶಿರಗಾವಿ ಅವರು ತಮ್ಮ ಅಪರಾಧವನ್ನು ಒಪ್ಪಿಕೊಂಡು, ತಾವು ಝವರ್ ಅವರನ್ನು ಯೋಗಿಕೊಳ್ಳದಲ್ಲಿ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದರು.



ರಾಜು ಝವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಡಾ. ಸಚಿನ್ ಶಿರಗಾವಿ ಮತ್ತು ಹುಕ್ಕೇರಿಯ ತಾಲ್ಲೂಕಿನ ಶಿರಾಡಾಣ ಗ್ರಾಮದ ವೈದ್ಯ ಡಾ. ಶಿವಾನಂದ ಪಾಟೀಲ ಅವರನ್ನು ಪೊಲೀಸರು ಬಂಧಿಸಿ ಬುಧವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು, ನ್ಯಾಯಾಲಯವು ಅವರನ್ನು 14 ದಿನ ಕಸ್ಟಡಿಗೆ ಒಪ್ಪಿಸಿತ್ತು.



“ರಾಜು ಝವರ್ ಅವರನ್ನು ಕೊಲೆಗೆ ಡಾ. ಶಿವಾನಂದ ಪಾಟೀಲ ಮತ್ತು ಮೂವರು ಬಾಡಿಗೆ ಹಂತಕರ ಸಹಾಯ ಬಳಸಲಾಗಿದೆ. ಮೂವರೂ ಬಾಡಿಗೆ ಹಂತಕರು ಇನ್ನೂ ಪತ್ತೆಯಾಗಿಲ್ಲ” ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವ ಉಳಿಸಿದ ಮಾನವೀಯತೆ : ದಿಲ್ಲಿ ಅಗ್ನಿ ದುರಂತದಲ್ಲಿ ಮುಸ್ಲಿಂ ಯುವಕರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆರೌಡಿಸಂಗೆ ಕಠಿಣ ಕಡಿವಾಣ: ಪ್ರತಿ ತಾಲ್ಲೂಕಿನಲ್ಲಿ ವಿಶೇಷ ನಿಗಾ ಪಡೆರಾಹುಲ್‌ ಗಾಂಧಿ-ಸಿದ್ದರಾಮಯ್ಯ ರಿಮೋಟ್‌ ಕಂಟ್ರೋಲ್‌ ಸರಕಾರ : ಆರ್‌.ಅಶೋಕಉ.ಪ್ರ. ವಿಧಿವಿಜ್ಞಾನ ಪ್ರಯೋಗಾಲಯಗಳ ದುಸ್ಥಿತಿಯಿಂದ ಕೊಲೆ, ಅತ್ಯಾಚಾರ ಆರೋಪಿಗಳಿಗೆ ಜಾಮೀನು: ಅಲಹಾಬಾದ ಹೈಕೋರ್ಟ ತೀವ್ರ ಕಳವಳಬೆಳಗಾವಿ : ಆದಿತ್ಯರಾಜ ಕ್ಯಾಪಿಟಲ್ ಮೇಲೆ ಅಧಿಕಾರಿಗಳ ದಾಳಿಟ್ರಂಪ್‌ಗೆ ಹಿನ್ನಡೆ : ಇರಾನ್ ಯುದ್ಧ ಅಂತ್ಯಗೊಳಿಸಲು ಅಮೆರಿಕ ಪ್ರತಿನಿಧಿಗಳ ಸಭೆ ನಿರ್ಣಯ ಅಂಗೀಕಾರಕೇರಳಕ್ಕೆ ಮುಂಗಾರು ಪ್ರವೇಶ: ಭಾರಿ ಮಳೆ ಮುನ್ಸೂಚನೆಕಾಂಗ್ರೆಸ್ ಹೈಕಮಾಂಡಗೆ ಹರಿಪ್ರಸಾದ ಕೃತಜ್ಞತೆಡಿ.ಕೆ. ಶಿವಕುಮಾರ ಪದಗ್ರಹಣಕ್ಕೆ ಕ್ಷಣಗಣನೆಹಿಂದೂ ಮಹಿಳೆ ಅಪಹರಣದ ಸುಳ್ಳು ಕಥೆ ಹೆಣೆದು ಮುಸ್ಲಿಂ ಯುವಕರನ್ನು ಸಿಲುಕಿಸಲು ಯತ್ನ, ಆರೋಪಿ ಪರಾರಿ