LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಜುಲೈ 17ರಂದು ಪ್ರಧಾನಿ ಮೋದಿಯಿಂದ ಅಳ್ನಾವರ ರೈಲು ನಿಲ್ದಾಣ ಲೋಕಾರ್ಪಣೆ

ಅಳ್ನಾವರ, 11: ಅಮೃತ ಭಾರತ ಸ್ಟೇಷನ್ ಯೋಜನೆಯಡಿ ₹17.20 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಪುನರ್ ಅಭಿವೃದ್ಧಿಪಡಿಸಲಾದ ಅಳ್ನಾವರ ರೈಲು ನಿಲ್ದಾಣವನ್ನು ಜುಲೈ 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಹುಬ್ಬಳ್ಳಿ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಶನಿವಾರ ಅಳ್ನಾವರ ರೈಲು ನಿಲ್ದಾಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಳ್ನಾವರ ಸೇರಿದಂತೆ ನೈಋತ್ಯ ರೈಲ್ವೆ ವ್ಯಾಪ್ತಿಯ ನಾಲ್ಕು ನವೀಕರಿಸಲಾದ ರೈಲು ನಿಲ್ದಾಣಗಳನ್ನು ಪ್ರಧಾನಿ ಮೋದಿ ಒಂದೇ ಕಾರ್ಯಕ್ರಮದಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಎಂದು ಹೇಳಿದರು.

ಅಮೃತ ಭಾರತ ಸ್ಟೇಷನ್ ಯೋಜನೆಯ ಉದ್ದೇಶ ದೇಶದ ಪ್ರಮುಖ ರೈಲು ನಿಲ್ದಾಣಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಿ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವುದಾಗಿದೆ. ಇದೇ ಯೋಜನೆಯಡಿ ಅಳ್ನಾವರ ರೈಲು ನಿಲ್ದಾಣವನ್ನು ಪ್ರಯಾಣಿಕ ಸ್ನೇಹಿ, ಸುರಕ್ಷಿತ ಹಾಗೂ ಆಧುನಿಕ ಮಾದರಿಯ ನಿಲ್ದಾಣವನ್ನಾಗಿ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ಯೋಜನೆಯಡಿ ಸುಮಾರು 200 ಚದರ ಮೀಟರ್ ವಿಸ್ತೀರ್ಣದಲ್ಲಿ ನಿಲ್ದಾಣ ಕಟ್ಟಡವನ್ನು ವಿಸ್ತರಿಸಿ, ನೂತನ ಟಿಕೆಟ್ ಬುಕಿಂಗ್ ಕಚೇರಿ ಹಾಗೂ ವಿಶಾಲವಾದ ನಿರೀಕ್ಷಣಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರಿಗೆ ಸುಗಮ ಸೇವೆ ಒದಗಿಸುವ ಉದ್ದೇಶದಿಂದ ಎಲ್ಲಾ ಸೌಲಭ್ಯಗಳನ್ನು ಆಧುನಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಸುಮಾರು 900 ಚದರ ಮೀಟರ್ ವಿಸ್ತೀರ್ಣದಲ್ಲಿ ಸುತ್ತಾಟ ಪ್ರದೇಶ (ಸರ್ಕ್ಯುಲೇಟಿಂಗ್ ಏರಿಯಾ) ಅಭಿವೃದ್ಧಿಪಡಿಸಲಾಗಿದ್ದು, ವಾಹನಗಳ ಸುಗಮ ಸಂಚಾರ, ಪಾರ್ಕಿಂಗ್ ವ್ಯವಸ್ಥೆ ಹಾಗೂ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ರೈಲು ವೇದಿಕೆಗಳಲ್ಲಿ ಸುಮಾರು 3,500 ಮತ್ತು 4,500 ಚದರ ಮೀಟರ್ ವಿಸ್ತೀರ್ಣದಲ್ಲಿ ಹೊಸ ಶೆಲ್ಟರ್‌ಗಳನ್ನು ನಿರ್ಮಿಸಲಾಗಿದೆ. ನೂತನ ಫ್ಲೋರಿಂಗ್ ಅಳವಡಿಸಲಾಗಿದ್ದು, ಪ್ರಯಾಣಿಕರು ಮಳೆ ಹಾಗೂ ಬಿಸಿಲಿನಿಂದ ರಕ್ಷಣೆ ಪಡೆಯುವಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನಿರೀಕ್ಷಣಾ ಕೊಠಡಿಗಳು ಹಾಗೂ ಶೌಚಾಲಯಗಳನ್ನು ಸಂಪೂರ್ಣವಾಗಿ ಆಧುನೀಕರಿಸಲಾಗಿದೆ.

ಪ್ರಯಾಣಿಕರ ಸುರಕ್ಷಿತ ಸಂಚಾರಕ್ಕಾಗಿ 12 ಮೀಟರ್ ಅಗಲದ ನೂತನ ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಹಿರಿಯ ನಾಗರಿಕರು, ಮಹಿಳೆಯರು ಹಾಗೂ ದಿವ್ಯಾಂಗರ ಅನುಕೂಲಕ್ಕಾಗಿ ಎರಡು ಲಿಫ್ಟಗಳನ್ನು ಅಳವಡಿಸಲಾಗಿದ್ದು, ಎಲ್ಲ ವರ್ಗದ ಪ್ರಯಾಣಿಕರಿಗೆ ಸುಲಭ ಸಂಚಾರದ ವ್ಯವಸ್ಥೆ ಮಾಡಲಾಗಿದೆ.

ನಿಲ್ದಾಣದಲ್ಲಿ ಎಲ್‌ಇಡಿ ಬೆಳಕು ವ್ಯವಸ್ಥೆ, ಆಧುನಿಕ ಸೂಚನಾ ಫಲಕಗಳು, ಕೋಚ್ ಇಂಡಿಕೇಶನ್ ಬೋರ್ಡ್‌, ರೈಲು ಮಾಹಿತಿ ಪ್ರದರ್ಶನ ಫಲಕ, ಸಾರ್ವಜನಿಕ ಘೋಷಣೆ ವ್ಯವಸ್ಥೆ ಹಾಗೂ ಡಿಜಿಟಲ್ ಗಡಿಯಾರಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಹೊಸ ಆಸನ ವ್ಯವಸ್ಥೆ, ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸುವ ಕಲಾಕೃತಿಗಳು, ಸುಧಾರಿತ ಸಿಗ್ನಲಿಂಗ್ ಮತ್ತು ದೂರಸಂಪರ್ಕ ವ್ಯವಸ್ಥೆ, ನೂತನ ಶೌಚಾಲಯಗಳು, ಲ್ಯಾಂಡ್‌ಸ್ಕೇಪಿಂಗ್ ಹಾಗೂ ಪ್ರವೇಶ ದ್ವಾರದ ಅಭಿವೃದ್ಧಿ ಕಾಮಗಾರಿಗಳನ್ನೂ ಪೂರ್ಣಗೊಳಿಸಲಾಗಿದೆ.

ಈ ಪುನರ್ ಅಭಿವೃದ್ಧಿಯಿಂದ ಅಳ್ನಾವರ ರೈಲು ನಿಲ್ದಾಣವು ಸಂಪೂರ್ಣ ಆಧುನಿಕ, ಸುರಕ್ಷಿತ ಹಾಗೂ ಪ್ರಯಾಣಿಕ ಸ್ನೇಹಿ ನಿಲ್ದಾಣವಾಗಿ ರೂಪುಗೊಂಡಿದ್ದು, ರೈಲ್ವೆ ಸೇವೆಯ ಗುಣಮಟ್ಟ ಮತ್ತು ಪ್ರಯಾಣಿಕರ ಅನುಭವ ಮತ್ತಷ್ಟು ಉತ್ತಮವಾಗಲಿದೆ ಎಂದು ಮಂಜುನಾಥ ಕನಮಡಿ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಕಾರ್ಯಕ್ರಮದಲ್ಲಿ ಅಮೃತ ಭಾರತ ಸ್ಟೇಷನ್ ಯೋಜನೆಯಡಿ ₹21.10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಕೊಪ್ಪಳ ರೈಲು ನಿಲ್ದಾಣ, ₹15.10 ಕೋಟಿ ವೆಚ್ಚದಲ್ಲಿ ನವೀಕರಿಸಲಾದ ಬಾದಾಮಿ ರೈಲು ನಿಲ್ದಾಣ ಹಾಗೂ ₹26.18 ಕೋಟಿ ವೆಚ್ಚದಲ್ಲಿ ಪುನರ್ ಅಭಿವೃದ್ಧಿಪಡಿಸಲಾದ ಬಂಟವಾಳ ರೈಲು ನಿಲ್ದಾಣಗಳನ್ನೂ ಪ್ರಧಾನಿ ಮೋದಿ ವರ್ಚುವಲ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರೈಲ್ವೆ ಇಲಾಖೆಯ ಸಾರ್ವಜನಿಕ ಸಂಪರ್ಕ ನಿರೀಕ್ಷಕರಾದ ಐ.ಜಿ. ಉದ್ದನಯ್ಯ, ರಮೇಶ ಚವಾಣ ಹಾಗೂ ಹಿರಿಯ ವಿಭಾಗೀಯ ಎಂಜಿನಿಯರ್ ಓಂಪ್ರಕಾಶ್ ಉಪಸ್ಥಿತರಿದ್ದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್‌ ಜಾನಕಿ ನಿಧನಕ್ಕೆ ಗಣ್ಯರ ಕಂಬನಿಮೌನವಾದ ಗಾನಕೋಗಿಲೆ ಎಸ್.‌ ಜಾನಕಿ; ಅನಾಥಗೊಂಡ ಸಂಗೀತ ಲೋಕಜುಲೈ 17ರಂದು ಪ್ರಧಾನಿ ಮೋದಿಯಿಂದ ಅಳ್ನಾವರ ರೈಲು ನಿಲ್ದಾಣ ಲೋಕಾರ್ಪಣೆಭಾರತ ಜಗತ್ತಿಗೆ ಅಭಿವೃದ್ಧಿಯ ಹೊಸ ಸೂತ್ರ ತೋರಿಸುತ್ತಿದೆ : ಪ್ರಧಾನಿ ಮೋದಿಜವಾಬ್ದಾರಿ ಅರಿತು ನಿಮ್ಮ ಬದುಕಿಗೆ ನೀವೇ ಹೀರೊ ಆಗಿ : ಸೊನಮ್ ವಾಂಗ್ಚೂಕ ಕರೆತಂದೆಯ ಸಾವಿಗೆ ಸೇಡು ತೀರಿಸಿಕೊಳ್ಳುವುದಾಗಿ ಮೊಜ್ತಬಾ ಖಮೇನಿ ಪ್ರತಿಜ್ಞೆಸ್ನಾನ ಮಾಡುತ್ತಿದ್ದ ವೇಳೆ ಕೊಡಲಿಯಿಂದ ಕೊಚ್ಚಿ ಮಹಿಳೆಯ ಬರ್ಬರ ಹತ್ಯೆಹನಿಮೂನ್‌ ಸೂಟ್‌ ಆಗಿ ಮಾರ್ಪಟ್ಟ ರೈಲಿನ ಎಸಿ ಕ್ಯಾಬಿನ್‌; ವೈರಲ್‌ ವೀಡಿಯೊ ಬೆನ್ನಲ್ಲೇ ಟಿಟಿಇ ಅಮಾನತುಪೋಕ್ಸೋ ಪ್ರಕರಣದ ಆರೋಪಿ ಅಟ್ಟಹಾಸ; 17 ವರ್ಷದ ಬಾಲಕಿ ಸೇರಿ 6 ಮಂದಿಯ ಬರ್ಬರ ಹತ್ಯೆವಿಯೆಟ್ನಾಂನಲ್ಲಿ ಪ್ರವಾಸಿ ದೋಣಿ ದುರಂತ; 15 ಭಾರತೀಯರ ದುರ್ಮರಣ, 21 ಮಂದಿಯ ರಕ್ಷಣೆ