LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
National News

ಮಸೀದಿ ಧ್ವಂಸಕ್ಕೆ ಆಕ್ಷೇಪ: ಕಚ್ ಜಿಲ್ಲಾಧಿಕಾರಿಗೆ ಹೈಕೋರ್ಟ ಸಮನ್ಸ

ಅಹಮದಾಬಾದ್, ಅ. 23: ಗುಜರಾತನ ಕಚ್ ಜಿಲ್ಲೆಯಲ್ಲಿ ಮೊಹಮ್ಮದಿ ಮಸೀದಿ ಧ್ವಂಸಗೊಳಿಸಲು ಅಧಿಕಾರಿಗಳು ತೋರಿದ ಅತಿಯಾದ ಆತುರಕ್ಕೆ ಗುಜರಾತ್ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಕ್ಟೋಬರ್ 30ರಂದು ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಜಿಲ್ಲಾಧಿಕಾರಿ ಅನಿಲ್ ರಣವಾಸಿಯ ಅವರಿಗೆ ನ್ಯಾಯಮೂರ್ತಿ ನಿರಲ್ ಆರ್. ಮೆಹ್ತಾ ಸಮನ್ಸ್ ಜಾರಿಗೊಳಿಸಿದ್ದಾರೆ.

ಮಸೀದಿಯ ಟ್ರಸ್ಟಿ ಸಿದ್ದೀಕ್ ತೇಜ್ಮಲ್ ಸಾಮಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಕೇವಲ ಎರಡು ದಿನಗಳಲ್ಲಿ ಒತ್ತುವರಿ ತೆರವು ಪ್ರಕ್ರಿಯೆ ಪೂರ್ಣಗೊಳಿಸಿರುವುದಕ್ಕೆ ಜಿಲ್ಲಾಧಿಕಾರಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಸಮರ್ಪಕ ಕಾರಣಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕೈಗೊಳ್ಳಬಹುದಾದ ಶಿಸ್ತುಕ್ರಮ ಅಥವಾ ದಂಡನಾತ್ಮಕ ಕ್ರಮಗಳ ಕುರಿತು ವಿವರಣೆ ಕೇಳಿದೆ.

ಜೂನ್ 18ರಂದು ಮಸೀದಿ ಆಡಳಿತ ಮಂಡಳಿಗೆ ನೋಟಿಸ್ ನೀಡಲಾಗಿತ್ತು. ಜೂನ್ 19ರಂದು ನೋಟಿಸ್ ಸ್ವೀಕರಿಸಿದ ಆಡಳಿತ ಮಂಡಳಿ ಮರುದಿನ ಉತ್ತರ ಸಲ್ಲಿಸಿತ್ತು. ಆದರೆ, ಜೂನ್ 19ರಂದೇ ಒತ್ತುವರಿ ತೆರವು ಆದೇಶ ಹೊರಡಿಸಿ, ಜೂನ್ 21ರಂದು ಮಸೀದಿ ಧ್ವಂಸಗೊಳಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಮಸೀದಿ ಯಾವುದೇ ಅನುಮತಿಯಿಲ್ಲದೆ ಸರ್ಕಾರಿ ಜಮೀನಿನಲ್ಲಿ ನಿರ್ಮಾಣಗೊಂಡಿದ್ದು, ಆಡಳಿತ ಮಂಡಳಿ ಭೂಮಿಯ ಮೇಲಿನ ಕಾನೂನುಬದ್ಧ ಹಕ್ಕನ್ನು ಸಾಬೀತುಪಡಿಸಿಲ್ಲ ಎಂದು ಜಿಲ್ಲಾಧಿಕಾರಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಧ್ವಂಸ ಕಾರ್ಯಾಚರಣೆಯನ್ನು ಕಾನೂನುಬಾಹಿರವೆಂದು ಘೋಷಿಸಿ, ಮಸೀದಿ ಪುನರ್‌ನಿರ್ಮಾಣ, ಪರಿಹಾರ ಹಾಗೂ ಹೊಣೆಗಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರ್ಜಿದಾರರು ಕೋರಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 30ರಂದು ನಡೆಯಲಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಮತದಾನ; ಅ.27ರಂದು ಮತ ಎಣಿಕೆಕರ್ನಾಟಕದಲ್ಲಿ 43.82 ಲಕ್ಷ ಎಸ್‌ಐಆರ್ ನೋಟಿಸ್‌ಗಳ ವಿಚಾರಣೆ ಪೂರ್ಣ; ಅ.27ಕ್ಕೆ ಅಂತಿಮ ಮತದಾರರ ಪಟ್ಟಿಸ್ಟಿಂಗ್ ಕಾರ್ಯಾಚರಣೆ : ಪವರ್ ಟಿವಿ ಮುಖ್ಯಸ್ಥ ಶೆಟ್ಟಿಗೆ ನಿರೀಕ್ಷಣಾ ಜಾಮೀನುಎಂಎಲ್‌ಸಿ ಚುನಾವಣೆಯಲ್ಲಿ ಅಕ್ರಮ : ಸಮಾಜವಾದಿ ಪಕ್ಷಭಿನ್ನಾಭಿಪ್ರಾಯ ಅಪರಾಧವಲ್ಲ : ಹೈಕೋರ್ಟಎಸ್ಐಆರ್ ರದ್ದತಿಗೆ ಆಗ್ರಹಿಸಿ ದಲಿತ, ರೈತ, ಕಾರ್ಮಿಕ ಸಂಘಟನೆಗಳ ಒಗ್ಗಟ್ಟಿನ ಪ್ರತಿಭಟನೆಎಸ್ಐಆರ್ ಸ್ಥಗಿತಕ್ಕೆ ಆಗ್ರಹಿಸಿ ಮುಂದುವರಿದ ಪ್ರತಿಭಟನೆ: ಹಲವರು ಪೊಲೀಸ್ ವಶಕ್ಕೆಮಸೀದಿ ಧ್ವಂಸಕ್ಕೆ ಆಕ್ಷೇಪ: ಕಚ್ ಜಿಲ್ಲಾಧಿಕಾರಿಗೆ ಹೈಕೋರ್ಟ ಸಮನ್ಸಸ್ಟಿಂಗ್ ಕಾರ್ಯಾಚರಣೆ ಹಿಂದೆ ಕೃಪಾ ಆಳ್ವಾ, ರಾಕೇಶ ಶೆಟ್ಟಿ: ಸಿದ್ದರಾಮಯ್ಯಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಕಾರ್ಯಾಚರಣೆಯಲ್ಲಿ ಕಾಂಗ್ರೆಸ್‌ನವರ ಕೈವಾಡ: ಯತೀಂದ್ರ ಆರೋಪ