LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಮನಗೆದ್ದ ನಾಗಾಲ್ಯಾಂಡ್ ಸಚಿವರ ನೃತ್ಯ

ತಮ್ಮ ಪುಟ್ಟ ಕಣ್ಣುಗಳು ಹಾಗು ಹಾಸ್ಯಪ್ರಜ್ಞೆಯಿಂದ ಗಮನಸೆಳೆಯುವ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಅವರು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದಾರೆ.



ಈ ಬಾರಿ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಡ್ಯಾನ್ಸ್ ವಿಡಿಯೋದಿಂದಾಗಿ ಟ್ರೆಂಡಿಂಗ್ ಆಗಿದ್ದಾರೆ. ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಅವರ ಮಗಳ ಮದುವೆಯಲ್ಲಿ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಅವರು ತಮ್ಮ ನೃತ್ಯ ಪ್ರದರ್ಶಿಸಿದ್ದಾರೆ.



ಸಂಗೀತಕ್ಕೆ ತಕ್ಕಂತೆ ಕುಣಿದಿರುವ ಅವರ ನೃತ್ಯ ಹಲವರ ಹೃದಯ ಗೆದ್ದಿದೆ. ಪದಗಳಲ್ಲಿ ಹೇಳಲಾಗದ್ದನ್ನು ಶರೀರ ಹೇಳುತ್ತದೆ ಎಂದು ತಮ್ಮ ನೃತ್ಯದ ವಿಡಿಯೋ ಹಂಚಿಕೊಂಡಿರುವ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ , ನಾನು ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ನೆಫಿಯು ರಿಯೊ ಅವರ ಮಗಳ ಮದುವೆಯಲ್ಲಿ ನೃತ್ಯ ಮಾಡಿದ್ದೇನೆ ಎಂದು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.



ನಾಗಾಲ್ಯಾಂಡ್ ಸಚಿವರ ಪ್ರತಿಭೆಯಿಂದ ಟ್ವಿಟರ್ ಬಳಕೆದಾರರು ಪ್ರಭಾವಿತರಾಗಿದ್ದು, ವಿಡಿಯೋ ಲಕ್ಷಾಂತರ ವೀಕ್ಷಣೆ ಗಳಿಸಿದೆ.



ಅವರ ಅನುಯಾಯಿಗಳು ಮತ್ತು ಇತರ ಟ್ವಿಟರ್ ಬಳಕೆದಾರರು ಅವರ ಪೋಸ್ಟ್‌ಗೆ ಸುಂದರವಾದ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.



“ಬ್ಯೂಟಿಫುಲ್ ಡ್ಯಾನ್ಸ್ ಸರ್” ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. “ನೀವು ಅದ್ಭುತ, ಉತ್ಸಾಹಭರಿತ ವ್ಯಕ್ತಿ ಮತ್ತು ಹೃದಯಗಳನ್ನು ಗೆಲ್ಲುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳಬೇಡಿ. ನಮ್ಮ ಈಶಾನ್ಯ ರಾಜ್ಯದ ಜನರನ್ನು ಗೇಲಿ ಮಾಡುವುದನ್ನು ನಿಲ್ಲಿಸಲು ನಿಮ್ಮ ಶೈಲಿ ಸಾಕು. ಜೈ ಹಿಂದ್” ಎಂದು ಮತ್ತೊಬ್ಬರು ಹೇಳಿದ್ದಾರೆ.



ಟೆಮ್ಜೆನ್ ಇಮ್ನಾ ಅಲೋಂಗ್ ಅವರು ತಮ್ಮ ತವರು ರಾಜ್ಯದ ಸುಂದರ ಸಂಸ್ಕೃತಿಯನ್ನು ಪ್ರಚಾರ ಮಾಡಲು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಿದ್ದಾರೆ.



https://twitter.com/AlongImna/status/1591742519649239040?ref_src=twsrc%5Etfw%7Ctwcamp%5Etweetembed%7Ctwterm%5E1591742519649239040%7Ctwgr%5Ef2d8d25c195f50cc31e43de9172041702c8d2a31%7Ctwcon%5Es1_c10&ref_url=https%3A%2F%2Fkannadadunia.com%2Flive-news%2Fnagaland-minister-wins-hearts-with-his-dance-moves-at-cm-neiphiu-rios-daughters-wedding-watch%2F
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವ ಉಳಿಸಿದ ಮಾನವೀಯತೆ : ದಿಲ್ಲಿ ಅಗ್ನಿ ದುರಂತದಲ್ಲಿ ಮುಸ್ಲಿಂ ಯುವಕರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆರೌಡಿಸಂಗೆ ಕಠಿಣ ಕಡಿವಾಣ: ಪ್ರತಿ ತಾಲ್ಲೂಕಿನಲ್ಲಿ ವಿಶೇಷ ನಿಗಾ ಪಡೆರಾಹುಲ್‌ ಗಾಂಧಿ-ಸಿದ್ದರಾಮಯ್ಯ ರಿಮೋಟ್‌ ಕಂಟ್ರೋಲ್‌ ಸರಕಾರ : ಆರ್‌.ಅಶೋಕಉ.ಪ್ರ. ವಿಧಿವಿಜ್ಞಾನ ಪ್ರಯೋಗಾಲಯಗಳ ದುಸ್ಥಿತಿಯಿಂದ ಕೊಲೆ, ಅತ್ಯಾಚಾರ ಆರೋಪಿಗಳಿಗೆ ಜಾಮೀನು: ಅಲಹಾಬಾದ ಹೈಕೋರ್ಟ ತೀವ್ರ ಕಳವಳಬೆಳಗಾವಿ : ಆದಿತ್ಯರಾಜ ಕ್ಯಾಪಿಟಲ್ ಮೇಲೆ ಅಧಿಕಾರಿಗಳ ದಾಳಿಟ್ರಂಪ್‌ಗೆ ಹಿನ್ನಡೆ : ಇರಾನ್ ಯುದ್ಧ ಅಂತ್ಯಗೊಳಿಸಲು ಅಮೆರಿಕ ಪ್ರತಿನಿಧಿಗಳ ಸಭೆ ನಿರ್ಣಯ ಅಂಗೀಕಾರಕೇರಳಕ್ಕೆ ಮುಂಗಾರು ಪ್ರವೇಶ: ಭಾರಿ ಮಳೆ ಮುನ್ಸೂಚನೆಕಾಂಗ್ರೆಸ್ ಹೈಕಮಾಂಡಗೆ ಹರಿಪ್ರಸಾದ ಕೃತಜ್ಞತೆಡಿ.ಕೆ. ಶಿವಕುಮಾರ ಪದಗ್ರಹಣಕ್ಕೆ ಕ್ಷಣಗಣನೆಹಿಂದೂ ಮಹಿಳೆ ಅಪಹರಣದ ಸುಳ್ಳು ಕಥೆ ಹೆಣೆದು ಮುಸ್ಲಿಂ ಯುವಕರನ್ನು ಸಿಲುಕಿಸಲು ಯತ್ನ, ಆರೋಪಿ ಪರಾರಿ