LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Crime News

ನೌಕರರ ಪಿಎಫ್‌, ಎನ್‌ಪಿಎಸ್‌ ಹಣ ದುರ್ಬಳಕೆ: ಆರ್‌ಸಿಯು 3 ಅಧಿಕಾರಿಗಳ ಬಂಧನ

ಬೆಳಗಾವಿ, ಸೆ. 22 : ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ನೌಕರರ ಪಿಎಫ್‌, ಎನ್‌ಪಿಎಸ್‌ ಸೇರಿದಂತೆ ವಿವಿಧ ಖಾತೆಗಳ ₹32 ಲಕ್ಷ ಹಣ ದುರ್ಬಳಕೆ ಮಾಡಿಕೊಂಡು ವಂಚಿಸಿದ ಆರೋಪದಡಿ ಮೂವರು ಅಧಿಕಾರಿಗಳನ್ನು ಕಾಕತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಶ್ವವಿದ್ಯಾಲಯದ ಹಣಕಾಸು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಕುಲಸಚಿವರಾದ ಎಚ್.ಎಂ. ಮುರುಗೇಶ, ಮಹೇಶ ವಾಲಿ ಹಾಗೂ ಪ್ರಥಮ ದರ್ಜೆ ಸಹಾಯಕ ಸಂದೀಪ ಬುರ್ಲಿ ಬಂಧಿತರು. ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ, ಪ್ರಸ್ತುತ ಬಾಗಲಕೋಟ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಥಮ ದರ್ಜೆ ಸಹಾಯಕ ರಾಮು ಹಂಚಿನಾಳ ಪರಾರಿಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಶೋಧ ನಡೆಸಿದ್ದಾರೆ.

ಕೆಆರ್‌ಸಿಯುನಲ್ಲಿ ಸಂಚಿತ ವೇತನದಡಿ ಕೆಲಸ ಮಾಡುವ ನೌಕರರ ಪಿಎಫ್‌ ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವ ಬದಲು ಆರೋಪಿಗಳು ತಮ್ಮ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಇದಲ್ಲದೆ, ನೌಕರರ ವೇತನದಿಂದ ಎನ್‌ಪಿಎಸ್‌ಗೆ ಶೇ 10ರಷ್ಟು ಕಡಿತಗೊಳಿಸಿ, ವಿಶ್ವವಿದ್ಯಾಲಯದ ಪಾಲಿನ ಶೇ 10ರಷ್ಟು ಸೇರಿಸಿ ಒಟ್ಟು ಶೇ 20ರಷ್ಟು ಹಣವನ್ನು ಸಂಬಂಧಪಟ್ಟ ನೌಕರರ ಎನ್‌ಪಿಎಸ್‌ ಖಾತೆಗೆ ಜಮೆ ಮಾಡಬೇಕಿತ್ತು. ಆದರೆ, ವಿಶ್ವವಿದ್ಯಾಲಯದ ಪಾಲಿನ ಮೊತ್ತವನ್ನು ಮೂರು ಪಟ್ಟು ಅಧಿಕವಾಗಿ ಪಡೆದು ತಮ್ಮ ವೈಯಕ್ತಿಕ ಎನ್‌ಪಿಎಸ್‌ ಖಾತೆಗಳಿಗೆ ಜಮೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST