LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ಉಚಿತ ಉಡುಗೊರೆ ಪಡೆಯಬೇಡಿ, ಕೆಲಸ ಮಾಡುವವರಿಗೆ ಮತ ಹಾಕಿ -ಹೊರಟ್ಟಿ

ವಿಜಯಪುರ: ಉಚಿತ ಕೊಡುಗೆಗಳ ಬೇಡಿಕೆ ಇಡುವುದು ಮತ್ತು ಸ್ವೀಕರಿಸುವ ಜನರೇ ರಾಜಕಾರಣಿಗಳನ್ನು ಭ್ರಷ್ಟಗೊಳಿಸುತ್ತಿದ್ದಾರೆ ಎಂದು  ಕರ್ನಾಟಕ ವಿಧಾನ ಪರಿಷತ್  ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.



ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚುನಾವಣೆಗಳನ್ನು ಭ್ರಷ್ಟಮುಕ್ತವಾಗಿ ನಡೆಯಬೇಕೆಂದು ಪ್ರಯತ್ನಿಸಿದರೂ ಜನರು ಎಲ್ಲಿಯವರೆಗೆ ಉಡುಗೊರೆಗಳನ್ನು ಪಡೆಯುವುದು ಸರಿಯಲ್ಲ ಎಂದು ಭಾವಿಸುವುದಿಲ್ಲವೋ ಅಲ್ಲಿಯವರೆಗೂ ಈ ಕೆಟ್ಟ ಸಂಸ್ಕೃತಿ ಮುಂದುವರೆಯುತ್ತದೆ ಎಂದರು.



ರಾಜಕಾರಣಿಗಳಿಂದ ಉಡುಗೊರೆ ಪಡೆದರೆ ಪ್ರತಿನಿಧಿಗಳು ಜನರು ಉಚಿತವಾಗಿ ಮತ ನೀಡಿಲ್ಲ, ಉಡುಗೊರೆ ಪಡೆದು ಮತ ಹಾಕಿದ್ದಾರೆರೆಂದು ಹೇಳುತ್ತಾರೆ. ಕೆಲವು ಜನರು ತಮ್ಮ ಇಡೀ ಜೀವನವೇ ಉಚಿತ ಕೊಡುಗೆಗಳ ಮೇಲೆ ಅವಲಂಬಿತವಾಗಿದೆ ಎಂಬಂತೆ ವರ್ತಿಸುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿರು.



ಜನರು ಬಯಸಿದಲ್ಲಿ, ರಾಜಕಾರಣಿಗಳು ನೀಡುವ ಉಡುಗೊರೆ, ಆಮಿಷಗಳನ್ನು ತಿರಸ್ಕರಿಸಿ ಚುನಾವಣೆಯಲ್ಲಿ ಪಾರದರ್ಶಕತೆ ತರಬಹುದು ಎಂದು ಹೇಳಿದ ಅವರು, ಕೆಲಸ ಮಾಡುವ ಮತ್ತು ಚುನಾವಣೆಯಲ್ಲಿ ಗೆದ್ದ ನಂತರ ಜನರೊಟ್ಟಿಗೆ ಇರುವುದನ್ನು ಬಿಟ್ಟು ಹಣ ಮಾಡುವುದಕ್ಕಾಗಿ ರಾಜಧಾನಿಯಲ್ಲಿ ಕುಳಿತುಕೊಳ್ಳುವ ರಾಜಕಾರಣಿಗಳಿಗೆ ಮತ ಹಾಕಬೇಡಿ ಎಂದು ಜನತೆಗೆ ಸಭಾಪತಿ ಕೇಳಿಕೊಂಡರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ ಶಾ ಭೇಟಿ : ಬೆಳಗಾವಿ ವಿಮಾನ ನಿಲ್ದಾಣದ ಸುತ್ತ 2 ಕಿ.ಮೀ. ‘ರೆಡ್ ಝೋನ್–ನೋ ಫ್ಲೈ ಝೋನ್’ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ