LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
Districts Haveri

ಕಬ್ಬಿಗೆ ₹5,500 ದರಕ್ಕೆ ಆಗ್ರಹ: ಹೆದ್ದಾರಿ ಬಂದ್‌, ವಾಹನಗಳ ಸಾಲು!

ಹಾವೇರಿ, ಅ. 14 (ಸಮದರ್ಶಿ ಸುದ್ದಿ): ಕಬ್ಬಿಗೆ ಪ್ರತಿ ಟನ್‌ಗೆ ₹5,500 ದರ ನಿಗದಿಪಡಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದ್ದು, ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಟೋಲ್‌ಗೇಟ್ ಬಳಿ ಸಾವಿರಾರು ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ರೈತರ ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಮಂಗಳವಾರ ರಾತ್ರಿಯಿಂದಲೇ ನೂರಾರು ಲಾರಿ, ಬಸ್‌ ಹಾಗೂ ಇತರ ವಾಹನಗಳು ಹೆದ್ದಾರಿಯುದ್ದಕ್ಕೂ ಸಾಲುಗಟ್ಟಿ ನಿಂತಿವೆ. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಹಾವೇರಿ ನಗರದ ಹೊರವಲಯದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ವಾಹನಗಳ ಉದ್ದನೆಯ ಸಾಲು ಕಂಡುಬಂದಿದ್ದು, ದೂರದ ಊರುಗಳಿಗೆ ತೆರಳುತ್ತಿದ್ದ ಪ್ರಯಾಣಿಕರು ಪರದಾಡುವಂತಾಗಿದೆ. ಕೆಲ ವಾಹನ ಚಾಲಕರು ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸಲು ಮುಂದಾಗಿದ್ದಾರೆ.

ಕಬ್ಬಿಗೆ ನ್ಯಾಯಯುತ ದರ ನಿಗದಿಪಡಿಸುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಪ್ರತಿಭಟನಾನಿರತ ರೈತರು ಪಟ್ಟುಹಿಡಿದಿದ್ದು, ಹೆದ್ದಾರಿ ತಡೆಯಿಂದಾಗಿ ಸರಕು ಸಾಗಣೆ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೂ ತೀವ್ರ ಅಡಚಣೆ ಉಂಟಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರ ಅಹೋರಾತ್ರಿ ಪ್ರತಿಭಟನೆ ಎಫೆಕ್ಟ್: ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳ ಸಾಲು, ಪ್ರಯಾಣಿಕರ ಪರದಾಟ!ಕಬ್ಬಿಗೆ ₹5,500 ದರಕ್ಕೆ ಆಗ್ರಹ: ಹೆದ್ದಾರಿ ಬಂದ್‌, ವಾಹನಗಳ ಸಾಲು!ಬೆಳಗಾವಿಯಲ್ಲಿ ಪ್ಯೂರ್‌ಪವರ್ ನೂತನ ಶೋರೂಮ್ ಆರಂಭದುರ್ಗಾಮಾತಾ ದೌಡ ಮೆರವಣಿಗೆ ಮೇಲೆ ಹರಿದ ಲಾರಿ: ಮೂವರ ಸಾವುದೆಹಲಿ ಪ್ರತಿಭಟನೆಗೆ ತೆರಳದಂತೆ ಮಹಾರಾಷ್ಟ್ರ ಪೊಲೀಸರ ನೋಟಿಸ್ಸ್ಟಿಂಗ್‌ ಕುತಂತ್ರ: ಮುಂದಿನ ವಾರ ದಾಖಲೆ ಬಿಡುಗಡೆಸಂಕೇಶ್ವರ ಬಳಿ ಅಪಘಾತ: ಟಿಪ್ಪರ್‌ಗೆ ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯಅಂಗನವಾಡಿ ನೇಮಕಾತಿಯಲ್ಲಿ ಹಣ ವಸೂಲಿ ಆರೋಪ: ಹುಕ್ಕೇರಿ ಸಿಡಿಪಿಒಗೆ ನೋಟಿಸ್ಪ್ರಜ್ವಲ್ ರೇವಣ್ಣ ಹಿಂಡಲಗಾ ಜೈಲಿಗೆ ಸ್ಥಳಾಂತರ ಸಾಧ್ಯತೆನವಲಗುಂದ ಬಳಿ ಭೀಕರ ಅಪಘಾತ: ಕಾರು–ಕ್ಯಾಂಟರ್ ಡಿಕ್ಕಿಗೆ ನಾಲ್ವರ ಬಲಿ